ಈಚನಾಳ ಪ್ರಾ. ಕೃ. ಪ. ಸ. ಸಂಘದ ಚುನಾವಣೆ:
ಅಧ್ಯಕ್ಷರಾಗಿ ದೇವರೆಡ್ಡಿ ಮೇಟಿ, ಉಪಾಧ್ಯಕ್ಷರಾಗಿ ಲಿಂಗರಾಜ್ ಅವಿರೋಧ ಆಯ್ಕೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು. ಜ. 17.- ತಾಲೂಕಿನ ಈಸನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 ರಿಂದ 29 ರ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವರೆಡ್ಡಿ ಎಸ್ ಮೇಟಿ, ಉಪಾಧ್ಯಕ್ಷರಾಗಿ ಲಿಂಗರಾಜ ಎ. ಯರಗುಂಟ ಇಬ್ಬರು ತಲಾ ಒಂದೊಂದೆ ನಾಮಪತ್ರ ಸಲ್ಲಿಸಿದ್ದರಿಂದಾಗಿ ಇನ್ನುಳಿದಂತೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಉಪಾಧ್ಯಕ್ಷರಾಗಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ಗಂಗಪ್ಪ ಘೋಷಣೆ ಮಾಡಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ದೇವರೆಡ್ಡಿ ಎಸ್ ಮೇಟಿ ಅವರು ಮಾತನಾಡಿ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಕಾರ್ಣಿಕರ್ತರಾದ ಚುನಾಯಿತ ಎಲ್ಲಾ ನಿರ್ದೇಶಕರಿಗೆ ಮತ್ತು ಗ್ರಾಮದ ಹಿರಿಯ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿ ಯಾವುದೇ ಕಾರಣಕ್ಕೂ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಆಗದಂತೆ ಸಂಘದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸನಗೌಡ ಮೇಟಿ, ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಲಿಂಗರೆಡ್ಡೆಪ್ಪ ಮೇಟಿ, ಪಿಡ್ಡನಗೌಡ, ಬಸವರಾಜ್ ನೀರಲಕೇರ, ಬಸನಗೌಡ ಮಾಲಿ ಪಾಟೀಲ್, ಅಮರೇಶ ಪೂಜಾರ್, ಪೀರಸಾಬ್ ಪಂಚಮ, ನಾಗಪ್ಪ ಸಾಲಮನಿ, ಅಮರೇಶ್ ಜಿ ಮೇಟಿ, ದೊಡ್ಡಪ್ಪ ಚಿಗರಿ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಪುಂಡನಗೌಡ ಆರ್ ಪಾಟೀಲ್, ಲೆಕ್ಕಿಗ ಖಾಜಾಸಾಬ್, ಸಹಕಾರಿ ಸಂಘದ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಾದ ಬಸವರಾಜ್ ನೀರಲಕೇರ, ಬಸಪ್ಪ ಚಲವಾದಿ, ಶೇಖರಪ್ಪ ಚಿತ್ರನಾಳ, ದೇವರೆಡ್ಡಿ ಮೇಟಿ, ಶಂಕರಗೌಡ ಹೊಸಮನಿ, ಯಂಕಣ್ಣ ಗಡ್ಡಿ, ಅಮರೇಶ ಮರಗಂಟನಾಳ, ಗೌಡಪ್ಪ ನೀರಲ ಕೇರಾ, ಶ್ರೀಮತಿ ಪೀರ ಜಾನಬಿ ರಾಜೇಸಾಬ್, ಶ್ರೀಮತಿ ಗುಂಡಮ್ಮಗಡ್ಡೆಪ್ಪ ಬಡಿಗೇರ್, ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಸಹಕಾರ ಸಂಘದಿಂದ ಚುನಾವಣಾ ಅಧಿಕಾರಿ ಗಂಗಪ್ಪ ಅವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.