ಲಿಂಗಸಗೂರು:ಐದಭಾವಿ ಕೂಲೆ ೧೮ ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:೨೦೧೦ ಸೆಪ್ಟಂಬರ್ ೦೬ ರಂದು ಶರಣಪ್ಪ ತಂ ಗೋಪಾಲಪ್ಪಗೌಡ ವ್ಯಕ್ತಿಯನ್ನು ಕೊಲೆ ಮಾಡಿದ ೧೮ ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ಪ್ರತಿ ಆರೋಪಿಗೆ ೫.೫೦೦ ದಂಡ ವಿಧಿಸಿ ೩ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು ಪೀಠಾಸಿನ ಲಿಂಗಸುಗೂರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ ಜಕಾತಿರವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಐದಭಾವಿ ಗ್ರಾಮದ ಆರೋಪಿತರಾದ ಲಕ್ಷö್ಮಣ ತಂ ಬಸ್ಸಪ್ಪ ಹಾಗೂ ಇನ್ನೂ ೧೭ ಜನ ಆರೋಪಿಗಳು ಈvನÀನು ೨೦೧೦ ಸೆಪ್ಟಂಬರ್ ೦೬ ರಂದು ರಾತ್ರಿ ೮ ಗಂಟೆಗೆ ದುರಗಮ್ಮ್ನ ಕಟ್ಟೆಯ ಹತ್ತಿರ ಮೊದಲಿನ ಕೂಲೆ ದ್ವೇಷದಿಂದ ಆರೋಪಿತರು ಆಕ್ರಮಕೂಟ್ಟ ರಚಿಸಿ ಮಾರಕಾಸ್ತçಗಳಿಂದ ದುರಗಮ್ಮ ದೇವಿ ಜಾತ್ರೆಯ ವಿಕ್ಷೀಸುತ್ತಿರುವ ವೇಳೆ ಪಿರ್ಯಾಧಿಯ ಅಣ್ಣನ ಮಗನ್ನು ಕೂಲೆ ಮಾಡಲಾಗಿದ್ದು ಲಿಂಗಸುಗೂರ ಪೂಲೀಸ ಠಾಣೆಯ ತನಿಖಾಧಿಕಾರಿಗಳಾದ ಸಿ.ಪಿ.ಐ ಪ್ರಭುಗೌಡ ಮತ್ತು ಸಿಪಿಐ ಜಿ.ಆರ್ ಶಿವಮೂರ್ತಿ ರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಾದ ವಿವಾದ ಆಲಿಸಿದ ೩ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು ಪೀಠಾಸಿನ ಲಿಂಗಸುಗೂರ ನ್ಯಾಯಾಲಯ ಆರೂಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ೫,೫೦೦ ದಂಡ ವಿಧಿಸಿ ಶಿಕ್ಷೆ ನೀಡಿರುತ್ತಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಕೆ.ಗೋಪಾಲರಾವ ರಾಯಚೂರ, ವಾದ ಮಂಡಿಸಿದ್ದರು.