ರೈತರೊಂದಿಗೆ ಸಹಾಯಕ ಆಯುಕ್ತರ ಸಭೆ:: ರೈತರ ಮೇಲೆ ರಸ್ತೆ ನಿರ್ಮಾಣ ಮಾಡಲಿ ಆಕ್ರೋಶ!!
ರಾ,ಹೆ೭೪೮ಗೆ ರೈತರ ಜಮೀನು,ಸರಿಯಾದ ಬೆಲೆ ನೀಡದಿದ್ದರೆ ಬೇರೆ ಜಮೀನುಕೊಡಿಸಿ ರೈತರ ಒತ್ತಾಯ,
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ರಾಷ್ಟೀಯ ಹೆದ್ದಾರಿ ೭೪೮ಎ ಬೆಳಗಾವಿ-ಹೈದರಾಬಾದ ಲಿಂಗಸಗೂರು ಹಾಗೂ ಮಸ್ಕಿ ಕ್ಷೇತ್ರದ ಮೂಲಕ ಹಾದು ಹೋಗಿದ್ದು ರಸ್ತೆಗೆ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾದ ಬೆಲೆ ನೀಡಬೇಕು ಇಲ್ಲವಾದರೆ ನಮಗೆ ಬೇರೆ ಜಮೀನು ಕೊಡಿಸಿ ಇಲ್ಲವೇ ರೈತರ ಹೆಣಗಳ ಮೇಲೆ ರಸ್ತೆ ನಿರ್ಮಿಸಿ ಎಂದು ರೈತರು ಸಹಾಯಕ ಆಯುಕ್ತರಿಗೆ ಪಟ್ಟುಹಿಡಿದು ಆಕ್ರೋಶ ವ್ಯಕ್ತಪಡಿಸಿದರು
ಪಟ್ಟಣದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಎಸಿಯವರ ಅಧ್ಯಕ್ಷತೆಯಲ್ಲಿ ಭೂಸಂತ್ರಸ್ತರೊಂದಿಗೆ ನಡೆದ ಸಭೆಯಲ್ಲಿ ರೈತರು ಮಾತನಾಡುತ್ತಾ ರಾಷ್ಟೀಯ ಹೆದ್ದಾರಿಯವರು ಯಾವುದೆ ಕಾರಣಕ್ಕೂ ರೈತರ ಹತ್ತಿರ ಬರುತ್ತಿಲ್ಲ ಸಮಸ್ಯೆ ಆಲಿಸುತ್ತಿಲ್ಲ ನಮಗೆ ಸರಿಯಾದ ಬೆಲೆ ನಿಗದಿ ಮಾಡುತ್ತಿಲ್ಲ ಈಗಾಗಲೆ ಬಿತ್ತಿದ ಹೊಲದಲ್ಲಿ ದೌರ್ಜನ್ಯಯುತವಾಗಿ ಕೆಲಸ ಮಾಡುತ್ತಿದ್ದಾರೆ ಇದನ್ನು ಕೂಡಲೇ ತಡೆಯಬೇಕು ಭೂಕಾಯ್ದೆ ಪ್ರಕಾರವಾಗಿ ರೈತರಿಗೆ ಹೆದ್ದಾರಿಯವರು ಸ್ಪಂದನೆ ಮಾಡುತ್ತಿಲ್ಲ ಜಂಟಿಸರ್ವೇಕಾಐð ನಡೆಸುತ್ತಿಲ್ಲ ಭೂಮಿಗೆ ಸರಿಯಾದ ಬೆಲೆ ನಿಗದಿ ಮಾಡುತ್ತಿಲ್ಲ ನೀರಾವರಿ ವ್ಯಾಪ್ತಿಗೆ ಬರುವ ಜಮೀನಿಗೆ ಖುಷ್ಕಿ ಎಂದು ಬೆಲೆ ನಿಗದಿ ಮಾಡುವುದು ಯಾವನ್ಯಾಯ, ಒಂದು ಸಣ್ಣ ಗುಡಿಸಿಲಿಗೆ ಎಂಟುಲಕ್ಷ ನೀಡುತ್ತಾರೆ ಜಮೀನಿಗೆ ತುಂಬಾ ಕಡಿಮೆ ಬೆಲೆ ನೀಡುತ್ತಾರೆ ರಸ್ತೆ ನಿರ್ಮಾಣ ಮಾಡಿದ ನಂತರ ಟೋಲ್ ಇತ್ಯಾದಿ ವಸೂಲಿ ಮಾಡುತ್ತಾರೆ ಆದರೆ ರೈತರು ಒಮ್ಮೆ ಜಮೀನು ಕಳೆದುಕೊಂಡರೆ ಅವರಿಗೆ ಬದುಕಲು ತೊಂದರೆ ಅದಕ್ಕಾಗಿ ನಮಗೆ ಸರಿಯಾದ ಬೆಲೆಯನ್ನು ನಿಗದಿಮಾಡಿ ನೀಡಬೇಕು ಇಲ್ಲವಾದರೆ ನಮ್ಮ ಭೂಮಿಗೆ ಪರ್ಯಾಯವಾಗಿ ಬೇರೆಭೂಮಿಯನ್ನಾದರು ಕೊಡಿಸಬೇಕು ಅಲ್ಲದೆ ಈಗಾಗಲೆ ರೈತರು ಹೊಲದಲ್ಲಿ ಬೆಳೆಹಾಕಿದ್ದಾರೆ ಅಂತಹ ಬೆಳೆಯನ್ನು ನಾಶಮಾಡಿ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ ಏನಾದರೂ ಕೇಳಲು ಹೊದ ರೈತರಿಗೆ ಬೆದರಿಕೆಹಾಕುತ್ತಾರೆ ನಮಗೆ ಸರಿಯಾದ ಬೆಲೆಕೊಡಿ ಅಥವ ಭೂಮಿಕೊಡಿ ಇಲ್ಲವಾದರೆ ಕಾಮಗಾರಿಯ ಸ್ಥಳದಲ್ಲಿ ರೈತರು ಮಲಗುತ್ತೇವೆ ನಮ್ಮ ಹೆಣಗಳ ಮೇಲೆ ರಸ್ತೆ ನಿರ್ಮಾಣ ಮಾಡಲಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು
ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಸಹಾಯಕ ಆಯುಕ್ತರಾದ ಬಸವನೆಪ್ಪ ಕಲಶಟ್ಟಿ ಮಾತನಾಡಿ ನಿಮ್ಮ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ ರಾಷಟ್ರೀಯ ಹೆದ್ದಾರಿ ನಿಯಮದಂತೆ ರಸ್ತೆ ಮಾಡಲು ಅವಕಾಶ ನೀಡಬೇಕು ನಿಮ್ಮ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆಂದು ಹೇಳಿದರು
ಈ ಸಂದರ್ಭದಲ್ಲಿ ಭೂಸಂತ್ರಸ್ತರ ಹೋರಾಟ ಸಮಿತಿಯ ಸಂಚಾಲಕರಾದ ಶರಣಪ್ಪ ಉದ್ಬಾಳ, ಮಲ್ಲನಗೌಡ ರಾಂಪೂರ, ಸಿದ್ಲಿಂಗಪ್ಪ ಸಾಹುಕಾರ ರೈತರಾದ ಶರಣಗೌಡ ಬಸಾಪುರ ಬಸವರಾಜ ಬುಂಕಲದೊಡ್ಡಿ, ಶಿವನಗೌಡ ವಟಗಲ್, ಹನುಮರಡ್ಡಿ, ಅಮರೇಶಪ್ಪ, ಗುಂಡಪ್ಪ ಚೌಡ್ಲಿ ಸೇರಿದಂತೆ ಇದ್ದರು