ಚಿನ್ನದಗಣಿಯಲ್ಲಿ ಭೂಕುಸಿತ: ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ

Laxman Bariker
ಚಿನ್ನದಗಣಿಯಲ್ಲಿ ಭೂಕುಸಿತ: ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ
WhatsApp Group Join Now
Telegram Group Join Now

ಚಿನ್ನದಗಣಿಯಲ್ಲಿ ಭೂಕುಸಿತ: ಕಾರ್ಮಿಕ ಸಾವು, ನಾಲ್ವರಿಗೆ ಗಂಭೀರ ಗಾಯ

ಕಲ್ಯಾಣ ಕರ್ನಾಟಕ ವಾರ್ತೆ

ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಹಟ್ಟಿ ಚಿನ್ನದ ಗಣಿ ಕಂಪನಿಯ ಆವರಣದಲ್ಲೇ ಇರುವ ಮಲ್ಲಪ್ಪ ಶಾಫ್ಟ್‌ನ ಭೂಮಿಯ ಕೆಳಮೈ ವಿಭಾಗದಲ್ಲಿ ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭೂಕುಸಿತವಾಗಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಭೂಕುಸಿತದಲ್ಲಿ ಮೌನೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಯಾಸಪಟ್ಟು ಮೌನೇಶ ಅವರ ಶವ ಹೊರ ತೆಗೆಯಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರಿಗೆ ಕಂಪನಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳಿಸಿಕೊಡಲಾಗಿದೆ.
ಮೃತರು ಸಂಬಂಧಿಕರು ಹಾಗೂ ಕಾರ್ಮಿಕರ ಮುಖಂಡರು ಮೃತನ ಕುಟುಂಬದವರಿಗೆ ಪರಿಹಾರ ಘೋಷಿಸುವವರೆಗೂ ಶವ ಪರೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಹೀಗಾಗಿ ಕಂಪನಿಯ ಆವರಣದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.
ಗಣಿ ಕಂಪನಿ ಆಸ್ಪತ್ರೆಗೆ ಕಾರ್ಯ ನಿರ್ವಾಹಕ ನಿರ್ದೇಶಕ, ಪ್ರಧಾನ ವ್ಯವಸ್ಥಾಪಕ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ, ಅಧಿಕಾರಿಗಳು ಕಾರ್ಮಿಕ ಸಂಘದ ಮುಖಂಡರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article