ಪರಿಸರ ಸ್ನೇಹಿ ಮಣ್ಣಿನ ಗಣೇಶನ ಪ್ರತಿಷ್ಠಾಪಿಸಿ ಮಾದರಿಯಾಗಿ ಮೆರೆದ ಲಕ್ಷ್ಮೀ ಯುವಕ ಸಂಘ
ಕಳೆದ ಐದಾರು ವರ್ಷದಿಂದ ಮಣ್ಣಿನಗಣೇಶಮೂರ್ತಿ ಕೂಡಿಸುತ್ತಾ ಮಾದರಿಯಾದ ಯುವಕರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಎನ್ನುವ ಸರಕಾರದ ಆದೇಶವಿದ್ದರು ಅದೆಲ್ಲವನ್ನು ಗಾಳಿಗೆ ತೂರಿದಂತೆ ವರ್ತಿಸಿ ಪಿಒಪಿಗೆ ಜೈ ಎನ್ನುವವರ ನಡುವೆ ಪಟ್ಟಣದಲ್ಲಿ ಕಳೆದ ಐದಾರು ವರ್ಷಗಳಿಂದ ಲಕ್ಷಿö್ಮÃ ಯುವಕ ಸಂಘ ಮಣ್ಣಿನ ಗಣೇಶಮೂರ್ತಿ ಕೂಡಿಸುವುದರ ಮೂಲಕ ಪರಿಸರ ಸ್ನೇಹಿ ಮೆರೆದು ಮಾದರಿಯಾಗಿ ಕಂಡು ಬರುತ್ತಾರೆ
ಗಣೇಶ ಹಬ್ಬ ಬಂದರೆ ಸಾಕು ಒಂದಕಿಂತ ಒಂದು ಮೇಲು ಎಂದು ಸ್ಪರ್ದೆಗೆ ಬಿದ್ದವರಂತೆ ಲಕ್ಷಾಂತರ ಹಣ ಖರ್ಚುಮಾಡಿ ಪಿಒಪಿ ಹಾಗೂ ರಾಸಾಯನಿಕ ಬಣ್ಣಯುಕ್ತ ಮೂರ್ತಿಗಳನ್ನು ಕೂಡಿಸುವುದು ಸರ್ವೇಸಾಮಾನ್ಯವಾಗಿದೆ ಸರಕಾರದ ಆದೇಶ ಕಟ್ಟುನಿಟ್ಟಾಗಿದ್ದರು ಸಹಿತ ಪಿಒಪಿ ಗಣೇಶಮೂರ್ತಿಗೆ ಮಾತ್ರ ಕಡಿವಾಣ ಬಿದ್ದಿಲ್ಲ ಅದು ಆಯೋಜಕರ ಮನದಲ್ಲಿ ಮೂಡಿದಾಗ ಮಾತ್ರ ಸಾಧ್ಯವೆನ್ನುತ್ತಾರೆ ಹಲವಾರು ಜನಸಾಮಾನ್ಯರು
ಯಾರು ಎಷ್ಟೆ ಗಾತ್ರದ ದೊಡ್ಡ ಗಣೇಶನನ್ನು ಕೂಡಿಸಿದರು ಈ ಯುವಕರು ಮಾತ್ರ ತಮಗೆ ಸಾಧ್ಯವಾದಷ್ಟು ಗಾತ್ರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನೆ ತಂದು ಪ್ರತಿಷ್ಠಾಪಿಸುತ್ತಿರುವುದು ತುಂಬಾ ಶ್ಲಾಘನೀಯ ಕೆಲಸವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತವೆ
ಯಾವುದೆ ರಸಾಯನಿಕ ಬಣ್ಣಬಳಸದೆ ಸಾದಾಮಣ್ಣಿನಲ್ಲಿನಲ್ಲಿಯೆ ಮೂರ್ತಿಯನ್ನು ತಯಾರಿಸಿದ್ದನ್ನು ತಂದು ಅದರಲ್ಲಿಯು ಮಣ್ಣಿನಲ್ಲಿ ವಿವಿಧ ರೀತಿಯ ಬೀಜಗಳನ್ನು ಹಾಕಿ ತಯಾರು ಮಾಡಲಾಗುತ್ತದೆಯಂತೆ ಗಣೇಶನನ್ನು ವಿಸರ್ಜಿಸಿದಾಗ ಆ ಮಣ್ಣಿನಲ್ಲಿರುವ ಬೀಜ ಮೊಳೆತು ಸಸಿಯಾಗಿ ಮರವಾಗಿ ಬೆಳೆದು ಪರಿಸರಕ್ಕೆ ಪೂರಕವಾಗಬಲ್ಲದು ಅಂತಹ ಯೋಚನೆಗಳನ್ನಿಟ್ಟುಕೊಂಡು ಅಪ್ಪಟ ಮಣ್ಣಿನಿಂದಲೆ ತಯಾರಿಸಿದ ಗಣೇಶಮೂರ್ತಿಯನ್ನು ತಂದು ಈ ಯುವಕರು ಪ್ರತಿವರ್ಷ ಮಾದರಿಯಾಗಿ ಕಂಡು ಬರುತ್ತಾರೆ ಅದರಂತೆ ಈ ಸಲವು ಸಹಿತ ಮಣ್ಣಿನ ಗಣೇಶನನ್ನು ಕೂಡಿಸಿ ಯಾವುದೆ ಆಡಂಬರವಿಲ್ಲದೆ ಸರಳವಾದ ಆಚರಣೆ ಮಾಡುತ್ತಿರುವುದು ಮತ್ತೊಂದು ವಿಶೇಷವಾಗಿದೆ
ಇಂತಹ ಯುವಕರ ಮನಸ್ಥಿತಿ ಇತರೆ ಯುವಕರಿಗೂ ಬರಲಿ ಪಿಒಪಿ ಮೂರ್ತಿಗೆ ಕಡಿವಾಣ ಬಿದ್ದು ಪರಿಸರ ಸ್ನೇಹಿ ಮೂರ್ತಿಗಳು ಎಲ್ಲೆಡೆ ರಾರಾಜಿಸಿದರೆ ಪರಿಸರಕ್ಕೂ ಸ್ನೇಹಿ ಸರಳತೆಗೂ ಸಐ ಏನಂತಿರಾ?
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಬಾಬುರೆಡ್ಡಿ ಮುನ್ನೂರು, ಗೋಪಾಲಜೋಶಿ,ಸಚಿನ್ ಕೊಪ್ಪರಕರ್, ವಿಜಯಕುಮಾರ ಸುಬೇದಾರ,ಕಿರಣ ಪಲ್ಲೇದ,ಶಶಾಂಕ ಕವಿತಾಳ, ಮಂಜು ಬಾವಿಕಟ್ಟಿ, ಲಿಂಗರಾಜ ಮನಗೂಳಿ,ತೀರ್ಥಪ್ಪ, ನಂದೀಶ ಸೇರಿದಂತೆ ಇದ್ದರು