ಕೃಷ್ಣಾಭಾಗ್ಯ ಜಲನಿಗಮ ಜಂಟಿಸಭೆ ಶಾಸಕ ಮಾನಪ್ಪ ವಜ್ಜಲ್ ಭಾಗಿ ಕೆರೆ ತುಂಬಿಸಲು ಸೂಚನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ನಾರಾಯಣಪುರದ ಕೃಷ್ಣಾಭಾಗ್ಯ ಜಲನಿಗಮ ಹಾಗೂ ಸಣ್ಣನೀರಾವರಿ ಇಲಾಖೆ ಜಂಟಿ ಸಭೆಯಲ್ಲಿ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಭಾಗಿಯಾಗಿ ಕೆಲ ಸಲಹೆ ಸೂಚನೆಗಳನ್ನು ನೀಡಿ ಸಣ್ಣ ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಅವರು ನಾರಾಯಣಪುರದಲಿರುವ ಕೃಷ್ಣಾಭಾಗ್ಯ ಜಲನಿಗಮ ಕಛೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಜಂಟಿಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಲಿಂಗಸಗೂರು ತಆಲೂಕಿನ ರೈತರ ಜೀವನಾಡಿಯಾದ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಅಲ್ಲದೆ ತಾಲೂಕಿನ ನೀರಾವರಿ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ನೀರು ಸರಿಯಾಗಿ ಹರಿಯುತ್ತಿಲ್ಲ ಇದರಿಂದ ಸಾಕಷ್ಟು ಬೆಳೆಗಳು ಹಾನಿಯಾಗುತ್ತಿದ್ದು ಶೀಘ್ರವೇ ನಾಲೆ ದುರಸ್ಥಿ ಮಾಡಿಸಿ ಮುಂದಿನ ಮೂರು ದಿನಗಳಲ್ಲಿ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಕೃಷ್ಣಾಭಾಗ್ಯ ಜಲನಿಗಮದ ಮುಖ್ಯ ಎಂಜನೀಯರ್ ಮಂಜುನಾಥ, ಸಣ್ಣನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಬಿ ಪಾಟೀಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ರೈತರು ಇದ್ದರು