ಕೆ,ಆರ್ಐಡಿ ಎಲ್ ಅಧಿಕಾರಿ ಹಣಮಂತಗೆ ಆಫೀüಸಂದ್ರೆ ಅಲರ್ಜಿಯಂತೆ!!!,ಆರೋಪ?
ಪೋನ್ ಕರೆ ಮಾಡಿದರೆ ನೋ ರೆಸ್ಪಾನ್ಸ್!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಲ್ಲಿರುವ ಕರ್ನಾಕಟ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಯಮಿತ ಸಂಸ್ಥೆಯ ಎಇಇ ಹಣಂತಗೆ ಆಫೀಸಂದ್ರೆ ಅಲರ್ಜಿ ಎಂಬಂತೆ ಆಫೀಸಿಗೆ ಬರುವುದಿಲ್ಲವೆಂದು ಬರುತ್ತಾನೆಂದು ಕಾದುಕಾದು ಸುಸ್ತಾದ ಜಂಗರಾಂಪುರತಾಂಡ ಜನರ ಆರೋಪವಾಗಿದೆ
ಹೌದು ಪಟ್ಟಣದಲ್ಲಿರುವ ಭೂಸೇನಾ ನಿಗಮದ ಆಫಿಸಿಗೆ ಜಂಗರಾಂಪೂರ ತಾಂಡಾದ ಸಾರ್ವಜನಿಕರು ತಮ್ಮ ಗ್ರಾಮದಲ್ಲಿ ೫೦ ಲಕ್ಷ ಹಣದಲ್ಲಿ ನಡೆಯುತ್ತಿರುವ ಕಾಮಗಾರಿಯ ಬಗೆಗೆ ದೂರು ನೀಡಲು ಬಂದರೆ ಎಇಇ ಹಣಮಂತ ಮಾತ್ರ ಆಫಿಸಿನಲ್ಲಿ ಇರಲಿಲ್ಲ ಕರೆಮಾಡಿದರೆ ರೂಮಿನಲ್ಲಿದ್ದಿನಿ ಹೊಟೇಲ್ ನಲ್ಲಿದ್ದಿನಿ ಎಂದು ಹೇಳುತ್ತಾ ಕುಳಿತನೆ ಹೊರತು ಆಫಿಸಿನ ಕಡೆಗೆ ಬರಲಿಲ್ಲ ಹಲವಾರು ಜನರು ಆಫಿಸಿಗೆ ಎಡತಾಕಿದರು ಈತ ಮಾತ್ರ ಆಫಿಸಿನಲ್ಲಿ ಇರಲಿಲ್ಲವೆಂದು ಹಿಡಿಶಾಪಹಾಕಿದರು
ಜಂಗಿರಾಂಪೂರ ತಾಂಡಾದಲ್ಲಿ ಅಂದಾಜು೫೦ಲಕ್ಷ ಹಣ ಅನುದಾನದಲ್ಲಿ ಸಿಸಿರಸ್ತೆ ಕಾಮಗಾರಿ ನಡೆಯುತಿದ್ದು ಕಾಮಗಾರಿಗೆ ಅರೆಬರೆಜಲ್ಲಿಕಲ್ಲುಹಾಕಿ ಗುತ್ತಿಗೆದಾರ ಪರಾರಿಯಾಗಿದ್ದಾನೆಂದು ಆರೋಪಿಸುತ್ತಿದ್ದಾರೆ ಅದನ್ನು ಹೇಳಲು ಬಂದರೆ ಅಧಿಕಾರಿಯೆ ನಾಪತ್ತೆ ಅಲ್ಲದೆ ಪೋನ್ ಕರೆ ಸ್ವೀಕರಿಸುವುದು ಅಪರೂಪವೆಂದು ದೂರುತ್ತಾರೆ ಈತನ ಬಗೆಗೆ ಇದೆ ರೀತಿಯ ಹಲವಾರು ಆರೋಪಗಳು ಕೇಳಿಬರುತ್ತಿವೆ ತನಿಖೆ ನಡೆಸಿದರೆ ಹಗರಣ ಹೊರಬೀಳುವುದರಲ್ಲಿ ಯಾವುದೆ ಅನುಮಾನವಿಲ್ಲವೆಂದು ಭೀಮಣ್ಣನಾಯ್ಕ, ಶಂಕರನಾಯ್ಕ ಸೇರಿದಂತೆಆರೋಪಸುತ್ತಾರೆ