ಮಹಾಂತ ಜೋಳಿಗೆ ಜಾಗೃತಿ ಪಾದಯಾತ್ರೆ,: ದುಶ್ಚಟಗಳಭಿಕ್ಷೆಪಡೆದ ಶ್ರೀಗಳು:
ದುಶ್ಚಟಗಳಿಂದ ದೂರವಿದ್ದು ಬದುಕನ್ನು ಸುಂದರಗೊಳಿಸಿಕೊಳ್ಳಬೇಕು-ಗುರುಮಹಾಂತಶ್ರೀಗಳು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮನುಷ್ಯ ದುಶ್ಚಟಗಳಿಂದ ತನ್ನ ಬದುಕನ್ನು ತಾನೆ ನಾಶಪಡಿಸಿಕೊಳ್ಳುತ್ತಾನೆ ಅದರಿಂದ ದೂರವಿದ್ದು ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ನಮ್ಮ ಬದುಕನ್ನು ಸ್ವರ್ಗ ನರಕ ಮಾಡಿಕೊಳ್ಳುವುದು ನಮ್ಮ ಕೈಯಲ್ಲಿಯೆ ಇದೆ ಎಂದು ಇಲಕಲ್ಲಿನ ಗುರುಮಹಾಂತಶ್ರೀಗಳು ಹೇಳಿದರು
ಅವರು ತಾಲೂಕಿನ ಈಚನಾಳ ಗ್ರಾಮದಲ್ಲಿ ಮಹಾಂತ ಜೋಳಿಗೆ ಜಾಗೃತಿ ಪಾದಯಾತ್ರೆ ನಡೆಸಿ ಗ್ರಾಮದ ಹಲವಾರು ಯುವಕರು ಹಾಗೂ ವ್ಯಸನಯುಕ್ತರನ್ನು ಭೇಟಿಮಾಡಿ ಅವರಿಂದ ಇನ್ನುಮುಂದೆ ನಾವು ದುಶ್ಚಟ ಮಾಡುವುದಿಲ್ಲ ಎಂಬ ಭಿಕ್ಷೆಯನ್ನು ಪಡೆದು ನಂತರ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಚಿತ್ತರಗಿಯ ಮಹಾಂತ ಶಿವಯೋಗಿಗಳು ಭಕ್ತರ ಮನೆ ಸ್ವರ್ಗವಾಗಿರಬೇಕು ಎಂಬ ಸಂಕಲ್ಪದೊಂದಿಗೆ ದುಶ್ಚಟ ಮಾಡುವವರ ಮನೆಗೆ ತೆರಳಿ ಜೋಳಿಗೆ ಹಿಡಿದು ಅವರಿಂದ ದುಶ್ಚಟಗಳ ಭಿಕ್ಷೆ ಪಡೆದು ಆರೋಗ್ಯಯುತ ಕುಟುಂಬದ ಬೆಳವಣಿಗೆಗೆ ಮುನ್ನುಡಿ ಬರೆದರು ಅದೆ ಮಾರ್ಗದಲ್ಲಿ ಶ್ರೀಮಠವು ನಾಡಿನಲ್ಲಿ ದುಶ್ಚಟಗಳ ಭಿಕ್ಷೆ ಬೇಡುತ್ತಾ ಭಕ್ತರ ಉದ್ದಾರ ಮಾಡುತ್ತ ಬರುತ್ತಲಿದೆ ಕರಡಕಲ್ಲಿನ ಮಹಾಂತೇಶ್ವರ ಮಠದಲ್ಲಿ ಶಿವಯೋಗಿಗಳ ೭ನೇ ವರ್ಷದ ಕಾರ್ಯಕ್ರಮದ ನಿಮಿತ್ಯವಾಗಿ ಪ್ರತಿದಿನ ವಿವಿಧ ಪೂಜಾ ಹಾಗೂ ಸಂಜೆ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು ಸುತ್ತಮುತ್ತಲ ಕೆಲಗ್ರಾಮಗಳಲ್ಲಿ ಮಹಾಂತ ಜೋಳಿಗೆ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ ಎಂದರು
ಕುಡಿತ ಲಿವರ್ ನ್ನು ಹಾಳು ಮಾಡಿದರೆ ಗುಟ್ಕಾ ಬಾಯಿ ಕರುಳು ಕ್ಯಾನ್ಸರ್ ಉಂಟು ಮಾಡುತ್ತದೆ ಬೀಡಿ ಸಿಗಾರ ಪುಪ್ಪಸದ ಆರೋಗ್ಯ ಕೆಡಿಸುತ್ತದೆ ಇಂತಹ ದುಶ್ಚಟಗಳಿಂದ ಆರೋಗ್ಯ ಹಾಳಾಗುವುದಲ್ಲದೆ ಹಣವು ಹಾಳಾಗುತ್ತದೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಸಂಸಾರದ ಸೂತ್ರ ಹದಗೆಡುತ್ತದೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಆದರೆ ಅಲ್ಕೊಹಾಲ್ ತಯಾರಕರು ಮಾರಾಟಗಾರರು ಗುಟ್ಕಾ ತಯಾರಕರು ದಿನೆದಿನೆ ಶ್ರೀಮಂತರಾಗುತ್ತಾರೆ ಅವರ ಸಂಸಾರ ಸುಖಿಯಾಗಿರುತ್ತವೆ ಅದಕ್ಕಾಗಿ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ನರಕವಾಗಿಸಿಕೊಳ್ಳಬೇಡಿ ಮಹಾಂತಶ್ರೀಗಳ ವಿಚಾರದಂತೆ ಚಟದಿಂದ ದೂರವಿದ್ದು ಮನೆಯನ್ನು ಸ್ವರ್ಗವಾಗಿಸಿಕೊಂಡು ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು
ಲಿಂಗಸಗೂರು ಶಾಖಾಮಠದ ಸಿದ್ದಲಿಂಗ ಶ್ರೀಗಳು ಮಾತನಾಡಿ ಗುರುಮಹಾಂತಶ್ರೀಗಳು ತಮ್ಮ ಹಲವಾರು ಕೆಲಸದ ಒತ್ತಡದ ನಡುವೆಯು ಈಚನಾಳದಂತ ಪುಟ್ಟ ಗ್ರಾಮಕ್ಕೆ ಬಂದಿರುವುದು ನಿಮ್ಮಿಂದ ಚಟಗಳನ್ನು ಭಿಕ್ಷೆ ಪಡೆದು ಸಂಸಾರ ಉದ್ದಾರ ಮಾಡುವ ಉದ್ದೇಶದಿಂದಲೆ ಬಂದಿದ್ದಾರೆ ಅವರ ಹಿತವಚನ ಪಡೆದು ದುಶ್ಚಟಗಳಿಂದ ದೂರವಾಗಿ ಸುಂದರ ಬದುಕು ರೂಪಿಸಿಕೊಳ್ಳಿ ಎಂದರು
ಈ ಸಂದರ್ಭದಲ್ಲಿ ಭೂಪನಗೌಡ ಪಾಟೀಲ್ ಕರಡಕಲ್, ಗಿರಿಮಲ್ಲನಗೌಡ ಪಾಟೀಲ್, ಬಸನಗೌಡ ಮೇಟಿ, ಎಲ್ ಆರ್ ಮೇಟಿ, ಆದಪ್ಪ ಮೇಟಿ.ಪುಂಡನಗೌಡ ಪಾಟೀಲ್ ಬಸನಗೌಡ ಪಾಟೀಲ್ ಕರಡಕಲ್, ಶಂಕರಪ್ಪ ಸುಂಕದ, ಮಲ್ಲಪ್ಪ ಕಲ್ಲೂರು, ಸಿದ್ಲಿಂಗಪ್ಪ ಕುಂಬಾರ, ಪವಾಡೆಪ್ಪನಾಯಕ,ನಾಗಯ್ಯ ಸೊಪ್ಪಿಮಠ, ರುದ್ರಯ್ಯಸ್ವಾಮಿ, ಸೇರಿದಂತೆ ಕರಡಕಲ್ ಹಾಗೂ ಈಚನಾಳ ಗ್ರಾಮಸ್ಥರು ಇದ್ದರು