ಕರಡಕಲ್:ಪ್ರವಚನಕಾರ್ಯಕ್ರಮ
ಮಾನವನ ಸುಖ ದುಃಖಗಳಿಗೆ ಹಿಂದಿನ ಜನ್ಮದ ಕರ್ಮಫಲಗಳೆ ಕಾರಣ:ಶರಣಬಸವ ದೇವರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಾನವನ ಜೀವನದಲಿ ಹಲವಾರು ಹಿತ ಅಹಿತ ಸುಖದುಃಖಗಳು ಬರಲು ಅವರ ಹಿಂದಿನ ಕರ್ಮಫಲಗಳೆ ಕಾರಣವಾಗಿವೆ ಅವುಗಳನ್ನು ಅನುಭವಿಸಿಯೆ ನಾವು ಮುಂದೆಸಾಗಬೇಕಾಗಿದೆ ಎಂದು ಪ್ರವಚನಕಾರ ಶರಣಬಸವದೇವರು ಬಸವಬೆಳಗಿಯವರು ಹೇಳಿದರು
ಅವರು ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ವಿಜಯಮಹಾಂತೇಶ್ವರಮಠದಲ್ಲಿ ಮಹಾಂತ ಶಿವಯೋಗಿಗಳ ೭ನೇಯ ಸ್ಮರಣೋತ್ಸವ ನಿಮಿತ್ಯವಾಗಿ ವಿಯಮಹಾಂತೇಶ್ವರರ ಪ್ರವಚನದಲ್ಲಿ ಹೇಳುತ್ತಾ ಮಾನವನ ಜನ್ಮದಲ್ಲಿ ಯಾವುದು ಸುಮ್ಮನೆ ಘಟಿಸುವುದಿಲ್ಲ ಅದಕ್ಕೆ ಕಾರಣವು ಇರುತ್ತದೆ ನಮ್ಮ ಹಿಂದಿನ ಜನ್ಮದ ಕರ್ಮಫಲಗಳೆ ನಮಗೆ ಸುಖ-ದುಃಖಗಳನ್ನು ತರುತ್ತವೆ ಆರೋಗ್ಯ,ಬಡತನ ಶ್ರೀಮಂತಿಕೆ,ಯವ್ವನ ಹೀಗೆ ವಿವಿಧ ಘಟ್ಟಗಳು ಜರುಗುವಾಗ ಏನೆಲ್ಲ ಏರಿಳಿತ ನಡೆಯುತ್ತವೆ ಅದಕ್ಕೆ ಕಾರಣ ಕರ್ಮಫಲ ನಾವು ಬೇವು ಬಿತ್ತಿ ಮಾವು ಬೆಳೆಯಲು ಸಾಧ್ಯವಾಗದು ಅದಕ್ಕಾಗಿ ನರಜನ್ಮಕ್ಕೆ ಬಂದಾಗ ಶಿವನಾಮವನ್ನು ಸ್ಮರಿಸುತ್ತಾ ಜೀವನ ಪಾವನ ಮಾಡಿಕೊಳ್ಳಬೇಕಾಗಿದೆ
ಸತಿಪತಿಯ ಧರ್ಮದಿಂದಲೇ ಜೀವಜಗತ್ತು ನಡೆಯುತ್ತಿದೆ ಸತಿಪತಿಗಳು ಇಲ್ಲದಿರೆ ಹುಟ್ಟುಗಳು ಎಲ್ಲಿರುತ್ತಿದ್ದವು ಎಂದು ಪ್ರಶ್ನೆ ಮಾಡುತ್ತಾ ಸತಿಪತಿಗಳು ಹಿತಜೀವನ ಸಾಗಿಸಿದರೆ ಸನ್ಮಾರ್ಗದಲ್ಲಿ ನಡೆದರೆ ಅವರಿಗೆ ಹುಟ್ಟುವ ಮಕ್ಕಳು ಸಹಿತ ಉತ್ತಮವಾಗಿ ಹುಟ್ಟುತ್ತವೆ ಎನ್ನುತ್ತಾ ವಿಜಯಮಹಾಂತ ಶಿವಯೋಗಿಗಳು ಅಂತಹ ಉತ್ತಮ ಸತಿಪತಿಯರಾದ ಈರಯ್ಯ ಹಾಗೂ ಗೌರಮ್ಮನವರ ಉದರದಿ ಮಹಾಂತಶಿವಯೋಗಿಳು ಜನಿಸಿ ಲೋಕೋದ್ದಾರಕರಾಗಿ ಧರೆಗೆ ಬಂದರು ಎಂದು ತಮ್ಮ ಪ್ರವಚನದಲ್ಲಿ ವಿವರಿಸುತ್ತಾ
ಲೋಕದಲ್ಲಿ ಮಹಾತ್ಮರು ಹುಟ್ಟಿಬರಲು ಕಾರಣವು ಇರುತ್ತದೆ ಅವರ ಜನನದಿಂದ ನೆಲಪಾವನವಾಗುತ್ತದೆ ಈ ನಾಡಿನಲ್ಲಿ ಹಲವಾರು ಪುಣ್ಯಪುರುಷರು ಹುಟ್ಟಿ ನಾಡನ್ನು ಭಕ್ತಿಯಬೀಡನ್ನಾಗಿ ಮಾಡಿದ್ದಾರೆ ಎಂದು ಹೇಳಿದರು