ತಾಲೂಕಿನಲ್ಲಿ,೧೩ಕೋಟಿ ಉಳಿತಾಯ, ೨೦೪೦೬ ಸದಸ್ಯರು
ಗ್ರಾಮೀಣ ಅಭಿವೃದ್ಧಿಯಲ್ಲಿ ದಾಪುಗಾಲುಯಿಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ ನೂತನ ಕಛೇರಿ ಉದ್ಘಾಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸೂಗೂರು :ಬಡವರ ಅಭಿವೃದ್ಧಿ ಯಾವಾಗ ಆಗುತ್ತದೆಯೋ ಅಂದಿನಿಂದಲ್ಲೆ ದೇಶದ ಅಭಿವೃದ್ಧಿ ಸಾಧ್ಯವೆಂಬ ಗಾಂಧಿ ಜಿ ಕನಸ್ಸನ್ನು ನನಸು ಮಾಡಬೇಕು ಎಂದು ಬಡವರಿಗೆ ದಾನದ ಪರಂಪರೇ ವಿವಿಧ ರೂಪದಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆವರು ರಾಜ್ಯದ ಬಡ ಜನರಿಗೆ ನೀಡಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಬಿ, ಸಿ ಟ್ರಸ್ಟ್ ಜಿಲ್ಲಾ ಪ್ರಾಂತ ಯೋಜನಾಧಿಕಾರಿ ಚಂದ್ರಶೇಖರ ಹೇಳಿದರು.
ಅವರು ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಬಿ, ಸಿ ಟ್ರಸ್ಟ್ ಕಚೇರಿ ನೂತನ ಕಟ್ಟಡ ಉದ್ಘಾಟನೆಯನ್ನು ಪೂಜೆ ಹೋಮ ಹವನದ ಮೂಲಕ ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಿಂಗಸುಗೂರು ತಾಲೂಕಿಗೆ ಪಾದಾರ್ಪಣೆಗೊಂಡು ೧೧ ವರ್ಷಗಳಾಗಿರುತ್ತವೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ದುರ್ಬಲ ವರ್ಗದ ಜನರನ್ನು ಒಟ್ಟುಗೂಡಿಸಿ ಮಹಿಳಾ ಪ್ರಗತಿಬಂಧು ಸ್ವಸಹಾಯ ಸಂಘಗಳನ್ನು ರಚನೆ ಮಾಡಿ, ಐ.ಡಿ.ಬಿ.ಐ ಬ್ಯಾಂಕಿನ ಸಹಯೋಗದೊಂದಿಗೆ ಸಂಘಗಳ ಖಾತೆಗಳನ್ನು ಸದಸ್ಯರಿಗೆ ಉಳಿತಾಯ ಮನೋಭಾವನೆ ಮತ್ತು ಆರ್ಥಿಕವಾಗಿ ಮುಂದೆ ಬರಲು ಸಂಘದ ಮತ್ತು ಬ್ಯಾಂಕಿನ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ.
ಯೋಜನೆಯು ಕಳೆದ ೧೧ ವರ್ಷಗಳಲ್ಲಿ ಲಿಂಗಸುಗೂರು ತಾಲೂಕಿನಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ ಲಿಂಗಸುಗೂರು ತಾಲೂಕಿನಲ್ಲಿ ೨೩ ಖಾಯಂ ಸಿಬ್ಬಂದಿಗಳು ಮತ್ತು ೫೭ ಸೇವಾಪ್ರತಿನಿಧಿಗಳು ಹಾಗೂ ೩೫ ಜನ ಸಿ.ಎಸ್.ಸಿ ಸೇವಾದಾರರು ಸೇರಿ ಒಟ್ಟು ೧೧೫ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಲಿಂಗನುಗೂರು ತಾಲೂಕಿನಲ್ಲಿ ಒಟ್ಟು ೨೦೪೦೬ ಸದಸ್ಯರನ್ನು ಒಳಗೊಂಡ ೨೪೭೭ ಕ್ರಿಯಾಶೀಲ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಸ್ವಸಹಾಯ ಸಂಘಗಳ ಸದಸ್ಯರು ಪ್ರತಿವಾರ ೧೦ ರೂ ರಿಂದ ೨೦ ರೂ ರಂತೆ ಒಟ್ಟು ಸುಮಾರು ೧೩ ಕೋಟಿ ರೂ ಮೊತ್ತ ಉಳಿತಾಯ ಮಾಡಿರುತ್ತಾರೆ ಕೃಷಿ ಅಭಿವೃದ್ಧಿಯಲ್ಲಿ ೨೦೩೫ ಕುಟುಂಬಗಳು ಯೋಜನೆ ಮೂಲಕ ೨೦ ಕೋಟಿ ರೂ ಮೂತ್ತದ ಪ್ರಗತಿನಿಧಿಯನ್ನು ಪಡೆದು ಕೃಷಿ ಅಭಿವೃದ್ಧಿ ಪಡಿಸಿಕೊಂಡಿರುತ್ತಾg ಹಾಗೂ ಸ್ವ ಉದ್ಯೋಗದಿಂದ ೬೭೫೫ ಕುಟುಂಬಗಳು ಯೋಜನೆ ಮೂಲಕ ಪ್ರಗತಿನಿಧಿಯನ್ನು ಪಡೆದು ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸ್ವ ಸಹಾಯ ತರಬೇತಿಗಳ ಬಗ್ಗೆ ವಿವರಿಸಿದರು ಮತ್ತು ಪಾಲೂದಾರ ಸದಸ್ಯರು ತುರ್ತು ಚಿಕಿತ್ಸಾ ವೆಚ್ಚಗಳಿಗೆ ಅನುಕೂಲವಾಗಲೆಂದು ೨೦೨೧ರಿಂದ ೨೦೨೪ರವರಗೆ ನೂತನ ಆರೋಗ್ಯ ರಕ್ಷಾ ಯೋಜನೆ ರೂಪದಲ್ಲಿ ೫೦೪ ಸದಸ್ಯರುಗಳಿಗೆ ೫೩.೭೫ ಲಕ್ಷರೂ ಆರೋಗ್ಯ ರಕ್ಷ ಮೂತ್ತವನ್ನು ನೀಡಲಾಗಿದೆ ತಾಲೂಕಿನ ವ್ಯಾಪ್ತಿಯ ಗೋನವಾರ ಗುಡದನಾಳ ಉಪ್ಪಾರನಂದಿಹಾಳ ಕರಡಕಲ್‌ನಲ್ಲಿ ೨೦ ಲಕ್ಷರೂದಲ್ಲಿ ೪ ಕರೆಗಳನ್ನು ತುಂಬಿಸಲಾಗಿದೆ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ೧ಲಕ್ಷ ರೂ ಅನಯದಾನ ನೀಡಲಾಗಿದೆ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜನವರಿ ಹಾಗೂ ಆಗಸ್ಟ ತಿಂಗಳಿನಲ್ಲಿ ದೇವಸ್ಥಾನ ಮಸೀದಿ, ಚರ್ಚಗಳನ್ನು ಸ್ವಚ್ಛವಾಗಿಟ್ಟುಕೂಳ್ಳುವ ಬಗ್ಗೆ ಅರಿವು ಮೂಡಿಸುವ ಲ್ಲು ಸಾರ್ವಜನಿಕರ ಸಹಭಾಗಿತ್ವದಲ್ಲಿ ಪ್ರತಿ ವರ್ಷ ೬೦ ಧಾರ್ಮೀಕಲ ಶ್ರದ್ಧ ಕೇಂದ್ರಗಳ್ಲಿ ಸ್ವಚ್ಚಾತ ಕಾರ್ಯಕ್ರಮಗಳನ್ನು ಮಡಲಗುತ್ತಿದೆ ಹಾಗೂ ವಿವಿಧ ಯೋಜನೆ ಮೂಲಕ ಕಾರ್ಯಕ್ರಮಗಳನ್ನು ಜನರಿಗೆ ನೀಡಲಾಗಿದೆ ಎಂದು ಹೇಳಿದರು.
ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಕೆ ಅಧ್ಯಕ್ಷರಾದ ಶಶಿಕಲಾ, ಜಿಲ್ಲಾ ನಿರ್ದೇಶಕರು ಮೋಹನ ನಾಯಕ, ಅಡಿವೆಯ್ಯಾ ಪುರಸಭೆ ಹಾಗೂ ಜನಜಾಗೃತಿ ವೇದಿಕೆ ಮಾಜಿ ಉಪಾದ್ಯೆಕ್ಷರಾದ ಮಹ್ಮದರಫಿ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇದ್ದರು