ಹಾವು ಕಂಡರೆ ಹಿಡಿಯುವ ಶಿವನಗೌಡ ೩೦೦ಕ್ಕೂ ಹೆಚ್ಚುಹಾವು ರಕ್ಷಣೆ
(ಲಕ್ಷ್ಮಣ ಬಾರಿಕೇರ್)
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಹಾವು ಎಂದರೆ ಸಾಕು ಹೆದರಿ ಓಡುವವರೆ ಹೆಚ್ಚು ಆದರೆ ಅಂತಹ ಹಾವುಗಳನ್ನು ಕಂಡರೆ ಅವುಗಳನ್ನು ಹಿಡಿದು ದೂರ ಅರಣ್ಯಕ್ಕೆ ಬಿಟ್ಟು ರಕ್ಷಣೆ ಮಾಡುವ ಕೆಲಸವನ್ನು ಶಿವನಗೌಡ ಮಾಲೀಪಾಟೀಲ್ ಮಾಡುತ್ತಾ ಬಂದಿದ್ದು ಸುಮಾರು ೩೦೦ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿರುವುದಾಗಿ ಹೇಳುತ್ತಾರೆ
ಇವರು ಹಾವುಗಳನ್ನು ಹಿಡಿಯುವದಾಗಲಿ ಅವುಗಳ ಬಗೆಗೆ ಮಾಹಿತಿಯಾಗಲಿ ಎಲ್ಲಿಯು ಪಡೆದಿಲ್ಲ ಎಲ್ಲರೂ ಹಾವು ಎಂದರೆ ಹೆದರುತ್ತಾರೆ ಇಲ್ಲವೇ ಹೊಡದು ಸಾಯಿಸುತ್ತಾರೆ ಎನ್ನುವ ಆಲೊಚನೆ ಬಂದಾಗಲೆ ಹಾವು ಹಿಡಿಯಲು ಪ್ರಯತ್ನ ಮಾಡಿ ಅದರಲ್ಲಿ ಯಶಕಂಡಿರುವುದಾಗಿ ಹೇಳುತ್ತಾರೆ
ಶಿವನಗೌಡ ಪಾಟೀಲ್ ವಿದ್ಯಾರ್ಥಿದೆಸೆಯಲ್ಲಿದ್ದಾಗ ಹಲವಾರು ಹಾವುಗಳನ್ನು ಹೊಡೆದು ಸಾಯಿಸಿದನಂತೆ ಅದರ ಅನುಕಂಪವೇ ಇಂದು ಹಾವು ಹಿಡಿಯಲು ಪ್ರೇರಣೆಯಾಯಿತು ಎನ್ನುತ್ತಾ ಗೂಗಲ್ ನಲ್ಲಿ ವಿವಿಧ ಹಾವುಗಳ ಬಗೆಗೆ ಮಾಹಿತಿಯನ್ನು ಹುಡುಕಿ ಯಾವುದು ವಿಷದ ಹಾವು ಯಾವುದು ಕಡಿಮೆ ವಿಷ ಇರುತ್ತದೆ ಎನ್ನುವುದನ್ನು ಅರಿತುಕೊಂಡಿದ್ದೇನೆ ಇದರಿಂದಾಗಿ ಯಾವ ಹಾವು ಹೇಗೆ ಹಿಡಿಯಬೇಕೆಂದು ಪೂರ್ವತಯಾರಿ ಮಾಡಿಕೊಂಡು ಹಿಡಿಯುತ್ತೇನೆ ಹಾವು ಹಿಡಿಯಲು ಧೈರ್ಯವು ಬೇಕು ಎನ್ನುತ್ತಾ ಹಾವು ಹಾವು ಹಿಡಿಯಲು ಹೋದಾಗ ಹಲವಾರು ಬಾರಿ ಹಾವು ಕಚ್ಚಿಸಿಕೊಂಡಿದ್ದೇನೆ ಎಂದು ಹೇಳುತ್ತಾನೆ
ಇತ್ತೀಚೆಗೆ ಪಟ್ಟಣದ ಬಿಇಓ ಆಫೀಸ್ ಹತ್ತಿರ ಹಾವು ಬಂದಾಗ ಕೆಲವರು ಈತನಿಗೆ ಕರೆ ಮಾಡಿ ಹಾವು ಹಿಡಿಯಲು ಕೇಳಿಕೊಂಡಾಗ ಅಲ್ಲಿಗೆ ಹೋಗಿ ಹಾವು ಹಿಡಿದು ತಂದು ಅರಣ್ಯ ಇಲಾಖೆಗೆ ತಂದಾಗ ಪತ್ರಿಕೆಯ ಗಮನಕ್ಕೆ ಬಂದು ಮಾತನಾಡಿದಾಗ ಶಿವನಗೌಡ ಹಾವು ಹಿಡಿಯುವ ಬಗೆಯನ್ನು ಹಂಚಿಕೊAಡನು
ಹಾವುಗಳಲ್ಲಿ ಹಲವಾರು ಬಗೆಯ ಹಾವುಗಳಿದ್ದು ಅದರಲ್ಲಿ ಬಹಳಷ್ಟು ಹಾವುಗಳಿಗೆ ವಿಷ ಇರುವುದಿಲ್ಲ ಅವು ಕಚ್ಚಿದರೆ ಜೀವಕ್ಕೆ ಅಪಾಯವಿರುವುದಿಲ್ಲ ಆದರೆ ಮನುಷ್ಯ ಹಾವು ಕಚ್ಚಿತು ಎಂಬ ಭಯದಿಂದಲೇ ಹಲವಾರು ಜನರು ಸಾವಿಗೀಡಾಗಿರುವುದುಂಟು ಅದಕ್ಕಾಗಿ ಹಾವು ಕಚ್ಚಿದಾಗ ಧೈರ್ಯವಾಗಿರುವುದು ಮುಖ್ಯವಾಗುತ್ತದೆ ಎನ್ನುತ್ತಾನೆ
ನಾನು ಹಲವಾರು ವರ್ಷಗಳಿಂದ ಹಾವುಗಳನ್ನು ಹಿಡಿಯುತಿದ್ದು ರಾಯಚೂರಿನಲ್ಲಿ ಓದುತ್ತಿರುವಾಗ ಮಾವಿನಕೆರೆಯ ಹತ್ತಿರ ಕಾಣಿಸಿಕೊಂಡ ಹಾವನ್ನು ಪ್ರಪ್ರಥಮವಾಗಿ ಹಿಡಿದಿದ್ದೇ ಅಲ್ಲಿಂದ ಪ್ರಾರಂಭವಾದ ನನ್ನ ಹವ್ಯಾಸ ಯಾದಗಿರಿಯ ತಡಬಿಡಿ,ಸಿಂಧನೂರು ತಾಲೂಕಿನ ಬಸ್ಸಾಪುರ, ಲಿಂಗಸಗೂರು ಸೇರಿದಂತೆ ವಿವಿದೆಡೆ ಹಾವುಗಳನ್ನು ಹಿಡಿದಿದೇನೆ ಸುಮಾರು ೩೦೦ಕ್ಕೂ ಅಧಿಕ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುತ್ತೇನೆ
ನಾನು ಅಪಘಾತದಲ್ಲಿ ಒಂದು ಕಾಲು ಊನವಾಗಿದ್ದು ಹಾವು ಹಿಡಿದಾಗ ಜನರು ಖುಷಿಯಿಂದ ಕೊಡುವ ಹಣವೇ ನನಗೆ ಜೀವನಕ್ಕೆ ಉಪಯುಕ್ತವಾಗಿದೆ ಒಟ್ಟಾರೆಯಾಗಿ ಹಾವು ಹಿಡಿದು ರಕ್ಷಣೆ ಮಾಡಲಾಗುತ್ತಿದ್ದು ಎಲ್ಲೆ ಹಾವು ಕಂಡರೆ ಅದನ್ನು ಕೊಲ್ಲಬೇಡಿ ನನಗೆ ಕರೆ ಮಾಡಿದರೆ ಹೋಗಿ ಹಿಡಿದು ಕಾಡಿಗೆ ಬಿಡುತ್ತೇನೆ ಹಾವು ಬಂದಾಗ ನನ್ನನ್ನು ಸಂಪರ್ಕಿಸಿ ಎನ್ನುತ್ತಾನೆ ಆತನ ನಂಬರ೯೭೪೩೩೮೨೦೧೯ ಹಾವು ಬಂದರೆ ತಪ್ಪದೆ ಕರೆ ಮಾಡುತ್ತೀರಿ ಅಲ್ಲವೇ?


