ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಞಿಸುತ್ತದೆ-ಹೂನೂರು

Laxman Bariker
ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಞಿಸುತ್ತದೆ-ಹೂನೂರು
WhatsApp Group Join Now
Telegram Group Join Now

ಬಸವಶ್ರೀ ಟ್ರಸ್ಟವತಿಯಿಂದ,ಮಂದಿರ,ಮಸೀದಿ,ಚರ್ಚನಲ್ಲಿ ಸಸಿನೆಟ್ಟು ೩ನೇ ವರ್ಷದ ಪರಿಸರ ದಿನಾಚರಣೆ
ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಞಿಸುತ್ತದೆ-ಹೂನೂರು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಅದಕ್ಕಾಗಿ ನಾವು ಪರಿಸರವನ್ನು ರಕ್ಷಿಸೋಣವೆಂದು ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಹಾಗೂ ಬಸವಶ್ರೀ ಟ್ರಸ್ಟನ ಗೌರವಾಧ್ಯಕ್ಷರಾದ ಅಮರೇಶಪ್ಪ ಹೂನೂರು ಹೇಳಿದರು


ಅವರು ಬಸವಶ್ರೀ ಜನಕಲ್ಯಾಣ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಟ್ರಸ್ಟವತಿಯಿಂದ ಏರ್ಪಡಿಸಿದ ೩ನೇ ವರ್ಷದ ಪರಿಸರದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಪರಿಸರ ದಿನವನ್ನು ಬಸವಶ್ರೀ ಟ್ರಸ್ಟ ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದು ಗಿಡಮರಗಳು ತಾರತಮ್ಯ ಮಾಡದೆ ಎಲ್ಲರಿಗೂ ನೆರಳು,ಹಣ್ಣು ನೀಡುತ್ತವೆ ಅದರಂತೆ ಪರಿಸರ ನಾವೆಲ್ಲ ಒಂದು ಎನ್ನುವುದನ್ನು ಸಾಂಕೇತಿಕವಾಗಿ ಸಾರುತಿದ್ದು ಮಾನವರೆಲ್ಲ ಒಂದೆ ಎನ್ನುವ ನುಡಿಯ ಅರಿತು ನಡೆಯುವುದಲ್ಲದೆ ಗಿಡ ಮರಗಳನ್ನು ನೆಡುವ ಮೂಲಕ ಪರಿಸರವನ್ನು ಉಳಿಸಿ ಬೆಳೆಸೋಣವೆಂದರು
ದೇಶದಲ್ಲಿ ೧೩೮ಕೋಟಿ ಜನಸಂಖ್ಯೆ ಇದ್ದು ಒಬ್ಬೊಬ್ಬರಿಂದ ಒಂದೊAದು ಗಿಡನೆಟ್ಟರೆ ಅಗಾದ ಪರಿಸರ ಬೆಳೆಯಲು ಸಾಧ್ಯವಾಗುತ್ತದೆ ಪರಿಸರ ರಕ್ಷಣೆ ನಮ್ಮೆಲ್ಲರಹೊಣೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕಾ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾ ಸಭಾದ ಅಮರವಾಣಿಯವರು ಹೇಳಿದರು
ಲೂರ್ದಮಾತೆ ಚರ್ಚನ ಗುರುಗಳಾದ ವಂ,ಫಾ, ಜೋಸ್ ಪ್ರಕಾಶಯವರು ಮಾತನಾಡುತ್ತಾ ಅಂತರಾಷ್ಟಿçÃಯ ಪರಿಸರ ದಿನದಂದು ಬಸವಶ್ರೀ ಟ್ರಸ್ಟನವರು ಒಳ್ಳೆಯ ಕೆಲಸ ಮಾಡುತ್ತಿದ್ದು ಗಿಡ ಮರಗಳನ್ನು ನೆಡುವುದರ ಮೂಲಕ ನಾವೆಲ್ಲ ಪರಿಸರವನ್ನು ರಕ್ಷಿಸಬೇಕಾಗಿದೆ ಎಂದರು
ಪಟ್ಟಣದ ಮಾತಾ ಮಾಣಿಕೇಶ್ವರಿ ಮಠದ ಮಾತಾ ನಂದಿಕೇಶ್ವರಿ ಅಮ್ಮನವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಮಾಣಿಕೇಶ್ವರಿ ಮಠ, ಆಲಿಯಾಮಸೀದಿ ಹಾಗೂ ಚರ್ಚನಲ್ಲಿ ಸಸಿ ನೆಡುವ ಮೂಲಕ ಪರಿಸರದಿನವನ್ನು ಆಚರಿಸಲಾಯಿತು
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶರಣಬಸವರಾಜ ನಾಡಗೌಡ, ಪಂಪನಗೌಡ ಪಾಟೀಲ್,ಎಂಜಿ ಹಿರೇಮಠ,ಭೀಮಣ್ಣಗೌಡರ, ಯಲಲ್ಪ÷್ಪ ಅಲಬನೂರ, ಸುರೇಶ ಕುಲಕರ್ಣಿ,ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶರಣಮ್ಮ ಹೂನೂರು,ನ,ರ,ವೇ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಸುಂಕದ,ಚನ್ನಮ್ಮ ಸಕ್ರಿ, ವಿರುಪಾಕ್ಷಪ್ಪ ಹೂಗಾರ, ಲಕ್ಷ್ಮೀ ಆನೆಹೊಸೂರು, ಮುಸ್ಲಿಂ ಧರ್ಮಗುರುಗಳಾದ ಮೌಲಾಮುಪ್ತಿ ಯುನೂಸ್ ಖಾಸ್ಮಿ, ದಾದಾಪಟೇಲ್, ವಸೀಮ್ ಅಹ್ಮದ್, ಅಲ್ಲಾಭಕ್ಷ ಮಣಿಯಾರ, ಪ್ರಭುಲಿಂಗ ಮೇಗಳಮನಿ,ಅಕ್ರಂಪಾಷಾ, ಅಮರಯ್ಯಘಂಟಿ ಮೈಸನಮಿಯಾ ಟ್ರಸ್ಟನ ಅಧ್ಯಕ್ಷರಾದ ಲಕ್ಷ್ಮಣ  ಬಾರಿಕೇರ್, ಅಮರೇಶ ಗೋಸ್ಲೆ, ಬಸವರಾಜನಾಯಕ ಬೈಲಗುಡ್ಡ, ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article