ಉದ್ಯಾನವನ, ನಾಗರೀಕ ಸೌಲಭ್ಯ ಜಾಗೆ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯಕ್ರಮ-ಸಚಿವ ರಹೀಮ್ ಖಾನ್

Laxman Bariker
ಉದ್ಯಾನವನ, ನಾಗರೀಕ ಸೌಲಭ್ಯ ಜಾಗೆ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯಕ್ರಮ-ಸಚಿವ ರಹೀಮ್ ಖಾನ್
WhatsApp Group Join Now
Telegram Group Join Now

ಉದ್ಯಾನವನ, ನಾಗರೀಕ ಸೌಲಭ್ಯ ಜಾಗೆ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯಕ್ರಮ-ಸಚಿವ ರಹೀಮ್ ಖಾನ್
ಆದಷ್ಟು ಶೀಘ್ರವೇ ಲಿಂಗಸಗೂರು ಪುರಸಭೆಯನ್ನು ಮೇಲ್ದರ್ಜೆಗೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪುರಸಭೆ,ನಗರಸಭೆ,ಮಹಾನಗರ ಪಾಲಿಕೆ ಸೇರಿದಂತೆ ನಾಗರೀಕ ಸೌಲಭ್ಯ,ಉದ್ಯಾನವನ ಜಾಗೆ ಒತ್ತುವರಿಯಾಗಿರುವ ಬಗೆಗೆ ಮಾಹಿತಿ ಬಂದರೆ ನಿರ್ದಾಕ್ಷಿಣ್ಯಕ್ರಮ ಜರುಗಿಸಿ ಒತ್ತುವರಿ

ತೆರವುಗೊಳಿಸಲಾಗುವುದೆಂದು ಪೌರಾಡಳಿತ ಸಚಿವರಾದ ರಹೀಮ್ ಖಾನ್ ಹೇಳಿದರು
ಅವರು ಪಟ್ಟಣದ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಲ್ಲೆಲ್ಲಿ ಉದ್ಯಾನವನ ನಾಗರೀಕ ಸೌಲಭ್ಯ ಅಥವ ರಾಜಕಾಲುವೆ ಒತ್ತುವರಿಯಾಗಿರುವ ಬಗೆಗೆ ಎಸಿ ಡಿಸಿಯವರಿಗೆ ಮಾಹಿತಿ ನೀಡಿದರೆ ಅಂತವರಿಗೆ ಅವರಮೇಲೆ ಸೂಕ್ತಕ್ರಮ ಜರುಗಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದರು ಅಲ್ಲದೆ ಪಟ್ಟಣ ಪಂಚಾಯ್ತಿ ಪುರಸಭೆ ಮೇಲ್ದರ್ಜಗೆ ಏರಿಸಲು ಕಡತಗಳು ಬಂದಿದ್ದು ಅವುಗಳನ್ನು ಪರಿಶೀಲಿಸಿ ಮೇಲ್ದರ್ಜೆಗೆ ಏರಿಸಲು ಕ್ರಮವಹಿಸಲಾಗುವುದು ಅದರಂತೆ ಲಿಂಗಸಗೂರು ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು
ಪಟ್ಟಣ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ,ಬೀದಿದೀಪ,ಸ್ವಚ್ಚತೆ ಕಾರ್ಯಕ್ರಮ ನಡೆಸಲಾಗುತ್ತಿದೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಕಸವಿಲೆವಾರಿ ವಾಹನಗಳಿಗೆ ಖರೀದಿ ಮಾಡಲು ಹಣ ನೀಡಲಾಗಿದೆ ವಾಹನಗಳನ್ನು ಖರೀದಿ ಮಾಡಿ ಕಸವಿಲೆವಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ನಾಗರೀಕರಿಗೆ ಉತ್ತಮ ಸ್ವಚ್ಚತೆ ಕ್ರಮವಹಿಸಲಾಗುವುದು ಒಳಚರಂಡಿ ನಗರಾಭಿವೃದ್ದಿ ಸಚಿವರಿಗೆ ಬರುತ್ತಿದ್ದು ಅವರೊಡನೆ ಚರ್ಚೆಮಾಡಿ ಕ್ರಮವಹಿಸಲಾಗುವುದು ಅಲ್ಲದೆ ಬಡವರು ಇತ್ಯಾದಿ ಜನರು ಸಕರಾರಿ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸಿ ಕ್ರಮಬದ್ದತೆ ಇಲ್ಲದಿದ್ದರೆ ಎ ಖಾತೆ, ಬಿ ಖಾತೆ ಮಾಡುವುದರ ಮೂಲಕ ಸರಿಪಡಿಸಲಾಗುತ್ತಿದೆ ಅಲ್ಲದೆ ಅನುದಾನ ಸಾಕಷ್ಟು ಇದ್ದು ಅದನ್ನು ಪುರಸಭೆ ನಗರಸಭೆಗಳು ಸದುಪಯೋಗಪಡಿಸಿಕೊಳ್ಳಬೇಕಾಗುತ್ತದೆ ನಗರಪ್ರದೇಶಕ್ಕೆ ಬರುವ ಅನುದಾನ ಸರಿಯಾಗಿ ಸದ್ಭಳಕೆಯಾಗುವಂತೆ ಕ್ರಮವಹಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ ಸೇರಿದಂತೆ ಹಿರಿಕಿರಿಯ ಮುಖಂಡರು ಕಾರ್ಯಕರ್ತರು ಇದ್ದರು

WhatsApp Group Join Now
Telegram Group Join Now
Share This Article