ಕ್ಷೇತ್ರದಲ್ಲಿ ಬಯ್ಯಾಪುರ ಹಸ್ತಕ್ಷೇಪ ನಿಲ್ಲಿಸದಿದ್ದರೆ ತಕ್ಕ ಉತ್ತರ ನೀಡುತ್ತೇವೆ -ಬ್ಲಾಕ್ ಅಧ್ಯಕ್ಷ : ಗೋವಿಂದ ನಾಯಕ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು. ಅ. 3.- ಲಿಂಗಸಗೂರು ಕ್ಷೇತ್ರ ಎಸ್ ಸಿ ಮೀಸಲು ಕ್ಷೇತ್ರವಾಗಿದ್ದು ಇಲ್ಲಿ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಪಕ್ಷದ ಸಿದ್ಧಾಂತದ ವಿರುದ್ಧ, ಹಾಗೂ ಪಕ್ಷ ವಿರೋಧ ವೇದಿಕೆ ಸಿದ್ಧಪಡಿಸಿ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿ ಹಸ್ತಕ್ಷೇಪ ಮಾಡುತ್ತಿದ್ದು ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ, ಮುಂದಿನ ದಿನಮಾನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಯಾರು ಕೈ ಜೋಡಿಸಿ ವಿರೋಧ ಪಕ್ಷದ ಶಾಸಕರೊಂದಿಗೆ ಶ್ಯಾಮಿಲಾಗಿ ಪದೇ ಪದೇ ಯಾರು ವೇದಿಕೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವುದು ಕ್ಷೇತ್ರದ ಜನತೆಗೆ ಗೊತ್ತಿರುವ ವಿಚಾರ ಈಗಾಗಲೇ ಹೈಕಮಾಂಡ್ಗೆ ಈ ವರದಿ ಲಿಂಗಸಗೂರು ಕ್ಷೇತ್ರದ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತರು ನೂರಾರು ಭಾವಚಿತ್ರ ಸಮೇತವಾಗಿ ವರದಿ ಸಲ್ಲಿಸಲಾಗಿದ್ದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಸಹ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ವೆಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ್ ಹೇಳಿದರು.
ರವಿವಾರ ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ನಮ್ಮ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ, ಮೈನಾರಿಟಿ, ಮಹಿಳಾ ಘಟಕ ಸೇರಿದಂತೆ ಎಲ್ಲಾ ಪದಾಧಿಕಾರಿಗಳನ್ನು ಈ ಕ್ಷೇತ್ರದ ಮಾಜಿ ಶಾಸಕರು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಡಿ ಎಸ್ ಹೂಲಗೇರಿ ಬಹುತೇಕ ಸರಕಾರದ ನಾಮ ನಿರ್ದೇಶಕ ಸದಸ್ಯೆರ ನೇಮಕ ಮಾಡಿಸಿದ್ದು, ಈಗ ಏಕಾ ಏಕೀಯಾಗಿ ಮಹಿಳಾ, ಎಸ್ಟಿ ಸೇಲ್, ಓಬಿಸಿ ಸೆಲ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಂಡಿದ್ದು, ಇದು ಯಾವುದೇ ಕಾರಣಕ್ಕೂ ಅಧಿಕೃತವಲ್ಲ,
ಪಕ್ಷದ ಚೌಕಟ್ಟು ಮೀರಿದ್ದು, ಇಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನನಗೂ ಒಂದು ಮಾಹಿ ತ ತಿಳಿಸಿಲ್ಲ, ಈ ಕ್ಷೇತ್ರದ ಅಭಿವೃದ್ಧಿಗೆ ಸದಾ ಬೆನ್ನೆಲುಬಾಗಿ, ಎಲ್ಲಾ ಜಾತಿ ಜನಾಂಗದವರಿಗೆ ಅಧಿಕಾರ ಹಂಚಿಕೆಯಲ್ಲಿ ಸಮಪಾಲು ಎಂಬಂತೆ, ಪಕ್ಷಕ್ಕಾಗಿ ದುಡಿದವರನ್ನ ಗುರುತಿಸಿ, ಸರ್ಕಾರದ ಎಲ್ಲಾ ನಾಮನಿರ್ದೇಶನ ಸದಸ್ಯರನ್ನ ಅಧಿಕೃತವಾಗಿ ನೇಮಕ ಮಾಡಿಸಿದ್ದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಡಿ ಎಸ್ ಹೂಲಗೇರಿ ಅವರು, ಇದು ಮೀಸಲು ಕ್ಷೇತ್ರವಾಗಿದ್ದು ಇಲ್ಲಿ ಸುಖ ಸಮ್ಮನೆ ಪಕ್ಷದ ಅಭ್ಯರ್ಥಿಯನ್ನು ಸೋಲಿಸೋದೆ ಇವರ ನಿಜವಾದ ಬಂಡವಾಳ ವಾಗಿದ್ದು, ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ, ಮತ್ತು ಪಕ್ಷದ ಚೌಕಟ್ಟಿನಲ್ಲಿ ನೀವು ಕೂಡ ಈ ಅವಳಿ ಜಿಲ್ಲೆಯಲ್ಲಿ ಒಬ್ಬ ವಿಧಾನ ಪರಿಷತ್ ಸದಸ್ಯ ಅನ್ನುವುದನ್ನು ಮರೆತು, ಪಕ್ಷ ಒಡೆಯುವ ಕೆಲಸಕ್ಕೆ ಕೈ ಹಾಕುತ್ತಿದ್ದು ದಿನಮಾನಗಳಲ್ಲಿ, ಇಲ್ಲಿನ ಜನ ನಿಮಗೆ ತಕ್ಕ ಉತ್ತರ ನೀಡುತ್ತಾರೆ, ನಾನು ಬ್ಲಾಕ್ ಅಧ್ಯಕ್ಷನಾಗಿ 2 ವರ್ಷ ಪೂರೈಸಿದ್ದು ನಾನು ಯಾವತ್ತಾದರೂ ಪಕ್ಷದ ವಿರೋಧಿ ಚಟುವಟಿಕೆ ಮಾಡಿದರೆ ನನ್ನ ವಿರುದ್ಧ ನೀವು ಷಡ್ಯಂತರ ಮಾಡಬಹುದು, ಅದನ್ನ ಬಿಟ್ಟು ಕ್ಷೇತ್ರದ ಜನಸಾಮಾನ್ಯರಿಗೆ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ನೇರವಾಗಿ ವಿಧಾನ ಪರಿಷತ್ ಸದಸ್ಯರಾದ ಶರಣು ಗೌಡ ಪಾಟೀಲ್ ಬಯ್ಯಾಪುರ ವಿರುದ್ಧ ಹರಿ ಹಾಯ್ದರು, ಈ ಕ್ಷೇತ್ರದಲ್ಲಿ ಡಿ ಎಸ್ ಹೂಲಗೇರಿ ಅವರನ್ನ ಅಲ್ಪ ಮತಗಳಿಂದ ಸೋಲಿಸಿ ಪಕ್ಷದ ಚೌಕಟ್ಟನ್ನು ಮೀರಿ ಈಗ ಪದಗ್ರಹಣ ಎಂಬ ನಾಟಕ ನಡೆಸುತ್ತಿದ್ದು ಇದ್ಯಾವುದೋ ಅಧಿಕೃತವಲ್ಲವೆಂದು, ಈ ಪದಾಧಿಕಾರಿಗಳ ಸಭೆ ಅನಧಿಕೃತ ವಾಗಿದ್ದು, ಈ ಕ್ಷೇತ್ರದಲ್ಲಿ ಪಕ್ಷದ ಎಲ್ಲಾ ಚಟುವಟಿಕೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದರ, ವಿರುದ್ಧ ಷಡ್ಯಂತ್ರ ಮಾಡುತ್ತಿರುವುದು, ಯಾರು ಎಂದು ತಿಳಿಯಬೇಕಾದರೆ, ಇದರ ಬಗ್ಗೆ ಬಹಿರಂಗ ಚರ್ಚೆಗೆ ಕರೆದರೆ ನಾವು ಸಿದ್ಧ, ಕ್ಷೇತ್ರದಲ್ಲಿ ಲಾಭದಾಯಕ ಹುದ್ದೆಯಲ್ಲಿ ನಿಮ್ಮವರೇ ನಗರ ಪ್ರಾಧಿಕಾರ ಯೋಜನೆ ಅಧ್ಯಕ್ಷರಾಗುತ್ತಾರೆ ಎನ್ನುವುದಾದರೆ ನೀವು ಸದಾ ಅವರ ಜೊತೆ ನಿಲ್ಲುತ್ತೀರಿ, ಕ್ಷೇತ್ರದಲ್ಲಿ ಬೇರೆ ಬೇರೆ ಜನಾಂಗ ದವರನ್ನ ಮೇಲ್ಮಟ್ಟದ ಅಧಿಕಾರ ಕೊಡಿಸಿದ್ದೀರಾ ? ಹಾಗೂ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ನಾವು ಕಾರಣ ಅಲ್ಲ ಎನ್ನುವುದಾದರೆ, ನೀವು ಶ್ರೀ ಗುರುಗುಂಟ ಅಮರೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣಿಕರಿಸಿ, ನಾವು ನಿಮ್ಮ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಿಮ್ಮ ಗೆಲುವಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದೇವೆ ಇಲ್ಲವೂ ಎನ್ನುವುದಕ್ಕೆ ನಾವು ಸಿದ್ಧರಿದ್ದು ಅಮರೇಶ್ವರನ ಸನ್ನಿಧಿಯಲ್ಲಿ ಪ್ರಮಾಣಕರಿಸಿ, ಎಂದು ನೇರವಾಗಿ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರಗೆ ಪತ್ರಿಕೆ ಮುಖಾಂತರ ಬಹಿರಂಗ ಚರ್ಚೆಗೆ ಬನ್ನಿ ಎಂದು ಕರೆ ನೀಡಿದರು,
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಮುದುಕಪ್ಪ ವಕೀಲ್, ಪುರಸಭೆ ಸದಸ್ಯರಾದ ಮಹಮ್ಮದ್ ರಫಿ, ರುದ್ರಪ್ಪ ಬ್ಯಾಗಿ, ಸೇರಿದಂತೆ ಕೆಪಿಸಿಸಿ ಜಿಲ್ಲಾ ಪದವೀಧರ ಅಧ್ಯಕ್ಷರಾದ ಸಂಜೀವಪ್ಪ ಹುನಕುಂಟಿ, ಎಸ್ಸಿ ಸೆಲ್ ಅಧ್ಯಕ್ಷರಾದ ಉಮೇಶ್ ಐಹೊಳ್ಳೆರ, ಎಸ್ ಟಿ ಸೆಲ್ ಅಧ್ಯಕ್ಷರಾದ ಸಂಗಮೇಶ್ ನಾಯಕ್, ನೀಲಪ್ಪ ಪವರ್, ಗದ್ದೆನಗೌಡ ಪಾಟೀಲ್ ನಂದಿಹಾಳ ಖಾಜಾ ಹುಸೇನ್ ಪೋಲವಾಲೆ, ಸೇರಿದಂತೆ ಹಲವಾರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.