ಈಚನಾಳ: ಆಸ್ಪತ್ರೆ ಯಲಿ ಕರೆಂಟ್ ಇಲ್ಲದೆ,ಬಾಣಂತಿ ಹಸುಗೂಸು ವಿಲವಿಲ, ಸೊಳ್ಳೆ ಕಾಟಕ್ಕೆ ತತ್ತರ

Laxman Bariker
ಈಚನಾಳ: ಆಸ್ಪತ್ರೆ ಯಲಿ ಕರೆಂಟ್ ಇಲ್ಲದೆ,ಬಾಣಂತಿ ಹಸುಗೂಸು ವಿಲವಿಲ, ಸೊಳ್ಳೆ ಕಾಟಕ್ಕೆ ತತ್ತರ
WhatsApp Group Join Now
Telegram Group Join Now

ಈಚನಾಳ: ಆಸ್ಪತ್ರೆ ಯಲಿ ಕರೆಂಟ್ ಇಲ್ಲದೆ,ಬಾಣಂತಿ ಹಸುಗೂಸು ವಿಲವಿಲ, ಸೊಳ್ಳೆ ಕಾಟಕ್ಕೆ ತತ್ತರ

ಆರೋಗ್ಯಾಧಿಕಾರಿ ಮೊಬೈಲ್ ಸ್ವಿಚ್ ಆಫ್!!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ತಾಲ್ಲೂಕಿನ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲಿ ಕರೆಂಟ್ ಇಬ್ಬರು ಬಾಣಂತಿಯರು ಎರಡು ಹಸಗೂಸು ಕತ್ತಲೆ ಹುಳು ಉಪ್ಪಡಿ ಸೊಳ್ಳೆ ಕಾಟಕ್ಕೆ ನರಕಯಾತನೆ ಅನುಭವಿಸುವಂತಾಗಿದೆ

ತಾಲ್ಲೂಕಿನ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲಿ ಮೂಲಭೂತ ಸೌಕರ್ಯ ಗಳು ಇಲ್ಲವೆಂದು ದೂರಲಾಗುತ್ತದೆ
ಸದರಿ ಆಸ್ಪತ್ರೆ ಯಲಿ ಎರಡು ಹೆರಿಗೆಗಳಾಗಿದ್ದು ಇಂದು ಸಂಜೆ ಆರುಗಂಟೆಯಿಂದ ಕರೆಂಟ್ ಇಲ್ಲದೆ ಕತ್ತಲೆಯಲಿ ಕಳೆಯುವಂತಾಗಿದೆ ಜನರೇಟರ್ ವ್ಯವಸ್ಥೆ ಇದ್ದರು ಅದು ರಿಪೇರಿ ಇಲ್ಲದೆ ಆನ್ ಮಾಡಲು ಸಾಧ್ಯವಾಗಿಲ್ಲ ಇದರಿಂದಾಗಿ ಇಬ್ಬರು ಬಾಣಂತಿಯರು ಹಸುಗೂಸುಗಳು ಹಾಗೂ ಅವರ ಹಿಂಬಾಲಕರು ಕತ್ತಲೆಯಲ್ಲಿ ಕಳೆಯುವಂತಾಗಿರುವುದಲ್ಲದೆ ಸೊಳ್ಳೆ ಕಾಟದಿಂದ ನರಕಯಾತನೆ ಯಿಂದ ಪರಿತಪಿಸುವಂತಾಗಿದೆ

ಮೊಬೈಲ್ ಸ್ವಿಚ್ ಆಪ್ ಮಾಡಿದ ಆರೋಗ್ಯ ಅಧಿಕಾರಿ:: ವಿಷಯ ಪತ್ರಿಕೆಯ ಗಮನಕ್ಕೆ ಬರುತ್ತಲೆ ತಾಲೂಕಾ ವೈದ್ಯಾಧಿಕಾರಿ ಡಾ ಅಮರೇಶ ಪಾಟೀಲ್ ಗೆ ಸಂಪರ್ಕ ಮಾಡಿದಾಗ ಜನರೇಟರ್ ಪ್ರಾರಂಭ ಮಾಡಿಸುವೆ ಎಂದವರು ನಂತರದಲಿ ಕರೆಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು ತಾಲೂಕಾ ಆರೋಗ್ಯಾಧಿಕಾರಿಯ ಮೊಬೈಲ್ ಸ್ವಿಚ್ ಆಫ್ ಆಗುತ್ತದೆ ಎಂದರೆ ಸಮಸ್ಯೆ ಪರಿಹರಿಸುವವರಾರು ಹಾಗೆ ಸ್ವಿಚ್ ಆಫ್ ಮಾಡಿಕೊಂಡ ಡಾಕ್ಟರ್ ಮೇಲೆ ಕ್ರಮವೇನು?

ಶಾಸಕರ ಸ್ಪಂದನೆ:: ನಂತರ ದಲಿ ಪತ್ರಿಕೆ ವಿಷಯವನ್ನು ಶಾಸಕ ಮಾನಪ್ಪ ವಜ್ಜಲರ ಗಮನಕ್ಕೆ ತರುತ್ತಲೆ ಅವರು ಕೂಡಲೆ ಸ್ಪಂದಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು

WhatsApp Group Join Now
Telegram Group Join Now
Share This Article