ಆನೆಹೊಸೂರು:ಶಿವಕುಮಾರ ಅಂಗಡಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಏಷ್ಯಾ ಅಂತರರಾಷ್ಟಿçÃಯ ಸಂಸ್ಕೃತಿ ಅಕಾಡೆಮಿಯ ಸಹಯೋಗದಲ್ಲಿ ಎಐಸಿಎ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿವಕುಮಾರ ಅಂಗಡಿಯವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ತಾಲೂಕಿನ ಆನೆಹೊಸೂರು ಗ್ರಾಮದ ಗದ್ದೆಪ್ಪ ಅಂಗಡಿ ಕಮಲಮ್ಮ ಅಂಗಡಿ ದಂಪತಿಗಳ ಪುತ್ರನಾದ ಶಿವಕುಮಾರ ಎಂ ಎ ಪದಿವ ಪಡೆದು ಗ್ರಾಮಪಂಚಾಯ್ತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಕೆಲಸಕಾರ್ಯವೆಂದು ಗ್ರಾಮಪಂಚಾಯ್ತಿಗಳಿಗೆ ಬರುವ ಜನರಿಗೆ ಸ್ಪಂದನೆ ಮಾಡುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಸಮಾಜದೊಂದಿಗೆ ಸದಾ ಬೆರೆತು ಜನರ ಒಳಿತು ಕೆಡುಗಳಿಗೆ ಸ್ಪಂದಿಸುವ ಸ್ನೇಹಜೀವಿ ಶಿವಕುಮಾರಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಒಲಿದು ಬಂದಿದ್ದು ಜೂನ್ ೨೮ರಂದು ತಮಿಳುನಾಡಿನಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ಶಿವಕುಮಾರಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ದೊರಕಿರುವುದರಿಂದ ಅವರ ಬಂಧೂ ಬಾಂಧವರು ಅಭಿಮಾಇಗಳು ಒಡನಾಡಿಗಳು ಸಂತಸ ವ್ಯಕ್ತಪಡಿಸಿದ್ದಾರೆ
ಈ ಸಂದರ್ಭದಲ್ಲಿ ಡಾ ಕೆ ಎ ಮನೋಕರಣ ಜನರಲ್ ಸೆಕ್ರರೇಟರಿ ಡಾ ಜೆಹರಿದಾಸ, ಡಾ ಕರಾಟೆ ಶ್ರೀನಾಥ, ಪ್ರಣವಸ್ವರೂಪ ಮುನಿ ನಿರಂಜನ, ಡಾ ಲಯನ್ ಎಸ್ ಬಿ ಚಬ್ಬಿ ಡಾ ಪೂನಂ, ಎ ಎಂ ಹಿಂಡಗೇರಿ ಡಾ ಸಿ ಎಲ್ ಶಿವಮೂರ್ತಿ ಗೀತಾ ಕೃಷ್ಣನ್, ಸೇರಿದಂತೆ ಇದ್ದರು