ಈಚನಾಳ ಗ್ರಾ,ಪಂ ಸದಸ್ಯರ ಗೌರವಧನ ತಡೆ,ಆನ್ಲೆöÊನ್ ದೂರು,ಕ್ರಮ್ಕಕೆ ಒತ್ತಾಯ ಅವಿಶ್ವಾಸದಲ್ಲಿ ಭಾಗಿಯಾದ ಸದಸ್ಯರ ಗೌರವಧನಕ್ಕೆ ಕೊಕ್ಕೆ

Laxman Bariker
ಈಚನಾಳ ಗ್ರಾ,ಪಂ ಸದಸ್ಯರ ಗೌರವಧನ ತಡೆ,ಆನ್ಲೆöÊನ್ ದೂರು,ಕ್ರಮ್ಕಕೆ ಒತ್ತಾಯ ಅವಿಶ್ವಾಸದಲ್ಲಿ ಭಾಗಿಯಾದ ಸದಸ್ಯರ ಗೌರವಧನಕ್ಕೆ ಕೊಕ್ಕೆ
WhatsApp Group Join Now
Telegram Group Join Now

ಈಚನಾಳ ಗ್ರಾ,ಪಂ ಸದಸ್ಯರ ಗೌರವಧನ ತಡೆ,ಆನ್ಲೆöÊನ್ ದೂರು,ಕ್ರಮ್ಕಕೆ ಒತ್ತಾಯ
ಅವಿಶ್ವಾಸದಲ್ಲಿ ಭಾಗಿಯಾದ ಸದಸ್ಯರ ಗೌರವಧನಕ್ಕೆ ಕೊಕ್ಕೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಈಚನಾಳ ಗ್ರಾಮಪಂಚಾಯ್ತಿಯಲ್ಲಿ ಸರಕಾರದಿಂದ ಗೌರವಧನ ಬಂದರು ಸಹಿತ ಕೆಲಸದಸ್ಯರಿಗೆ ಗೌರವಧನ ತಡೆಹಿಡಿಯಲಾಗಿದ್ದು ಕೂಡಲೇ ತಡೆಗೆ ಕಾರಣರಾದವರ ಮೇಲೆ ಸೂಕ್ತಕಾನೂನು ಕ್ರಮ ಜರುಗಿಸಬೇಕೆಂದು ಗ್ರಾ,ಪಂ ಸದಸ್ಯ ಮರಿಯಪ್ಪ ಗ್ರಾಮದ ಅಮರೇಶ ಸೇರಿ ಆನ್ಲೆöÊನ್ ದೂರು ನೀಡಿರುವುದಾಗಿ ತಿಳಿದುಬಂದಿದೆ
ತಾಲೂಕಿನ ಈಚನಾಳ ಗ್ರಾಮ ಪಂಚಾಯ್ತಿಯಲ್ಲಿ ಇತ್ತೀಚೆಗೆ ಅಧ್ಯಕ್ಷರ ವಿರುದ್ದವಾಗಿ ೮ಜನ ಸದಸ್ಯರು ಅವಿಶ್ವಾಸ ಮಾಡಲು ಸಹಿ ಮಾಡಿದ್ದರು ಇದನ್ನೆ ನೆಪವಾಗಿಟ್ಟುಕೊಂಡಿದ್ದ ಅಧ್ಯಕ್ಷೆಯ ಪತಿ ಪ್ರಭಾರಿ ಪಿಡಿಓ ಶಿವಪ್ಪನ ಮೇಲೆ ಪ್ರಭಾವ ಬೀರಿ ೯ ತಿಂಗಳ ಗೌರವಧನವನ್ನು ತಡೆಹಿಡಿದಿದ್ದು ಇದನ್ನು ಅರಿತ ಗ್ರಾ,ಪಂ ಸದಸ್ಯ ಮರಿಯಪ್ಪ ಆನ್ಲೆöÊನ್ ಮೂಲಕ ದೂರು ಸಲ್ಲಿಸಿ ಸಹಾಯವಾಣಿಯಲ್ಲಿ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ ಸಹಾಯವಾಣಿಯಕಡೆಯಿಂದ ಉತ್ತರ ಬಂದಿದ್ದು ಸದಸ್ಯರಿಗೆ ವಿತರಿಸಬೇಕಾದ ಗೌರವಧನವನ್ನು ನಿಲ್ಲಿಸುವುದು ಕಾನೂನುಬಾಹಿರ ಚಟುವಟಿಕೆಯಾಗಿದ್ದು ಅಧ್ಯಕ್ಷರಿಗೆ ನೊಟೀಸ್ ನೀಡಲಾಗುವುದು ಹಾಗೂ ಅವರ ಮೇಲೆ ಕಾನೂನುಕ್ರಮ ಜರುಗಿದರೆ ಅವರ ಸದಸ್ಯತ್ವ ರದ್ದಾಗಲಿದೆ ಎನ್ನುವ ಮಾಹಿತಿ ದೊರಕಿದೆ ಎಂದು ಅಮರೇಶ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ
ಸದರಿ ಗ್ರಾಮಪಂಚಾಯ್ತಿಯಲ್ಲಿ ಅಧ್ಯಕ್ಷೆ ಹೆಸರಿಗೆ ಮಾತ್ರ ಇದ್ದು ಅವರ ಪತಿಯೆ ಎಲ್ಲಾ ಆಡಳಿತವನ್ನು ನಡೆಸುತ್ತಾನೆ ಪಂಚಾಯ್ತಿಯಲ್ಲಿ ಆತನದೆ ದರ್ಬಾರ ಇರುತ್ತದೆ ಅಲ್ಲದೆ ಈತನ ಕರಾಮತ್ತಿನಿಂದ ಒಂದೆ ಮನೆಗೆ ಮೂರು ಜಿಪಿಎಸ್ ಮಾಡಲಾಗಿದೆ ಕೂಡಲೇ ಕ್ರಮಜರುಗಿಸಿ ನ್ಯಾಯದೊರಕಿಸಿಕೊಡಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ
ಅಲ್ಲದೆ ಸದರಿ ವಿಷಯವಾಗಿ ತಾ,ಪಂ ಪಂಪನಗೌಡ ಪಾಟೀಲರ ಗಮನಕ್ಕೆ ತಂದಿದ್ದು ಸದಸ್ಯರ ಗೌರವಧನ ತಡೆಹಿಡಿಯಲು ಬರುವುದಿಲ್ಲ ಅದನ್ನು ಆದಷ್ಟು ಬೇಗನೆ ಸದಸ್ಯರಿಗೆ ತಲುಪಿಸುವಂತಾಗಬೇಕು ಎಂದು ಹೇಳಿರುವುದಾಗಿ ತಿಳಿದುಬಂದಿದೆ

WhatsApp Group Join Now
Telegram Group Join Now
Share This Article