ನಾಗರಾಳ: ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ,ಪಾರದರ್ಶಕತೆ ಅವಶ್ಯ-ಹಾಲಪ್ಪ ಆಚಾರ

Laxman Bariker
ನಾಗರಾಳ: ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ,ಪಾರದರ್ಶಕತೆ ಅವಶ್ಯ-ಹಾಲಪ್ಪ ಆಚಾರ
WhatsApp Group Join Now
Telegram Group Join Now

ರಡ್ಡೇರ ಪತ್ತಿನ ಸೌಹಾರ್ದ ನೂತನ ಕಟ್ಟಡ ಉದ್ಘಾಟನೆ: ೧೧ನೇ ಶಾಖೆ ಪ್ರಾರಂಭ
ನಾಗರಾಳ: ಸಹಕಾರಿ ಕ್ಷೇತ್ರದಲ್ಲಿ ಪ್ರಾಮಾಣಿಕತೆ,ಪಾರದರ್ಶಕತೆ ಅವಶ್ಯ-ಹಾಲಪ್ಪ ಆಚಾರ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಸಹಕಾರಿ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೆ ಪ್ರಮಾಣಿಕತೆ ಹಾಗೂ ಪಾರದರ್ಶಕತೆ ಬಹಳ ಅವಶ್ಯವಾಗಿದೆ ಎಂದು ಮಾಜಿ ಸಚಿವರಾದ ಹಾಲಪ್ಪ ಆಚಾರ ಹೇಳಿದರು
ಅವರು ತಾಲೂಕಿನ ನಾಗರಾಳ ಗ್ರಾಮದಲ್ಲಿ ರಡ್ಡೇರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡದ ಸ್ಟಾçಂಗ್ ರೂಮು ಉದ್ಘಾಟನೆ ಮಾಡಿ ನಂತರ ಮಾತನಾಡುತ್ತಾ ಬ್ಯಾಂಕಿನ ಕ್ಷೇತ್ರದಲ್ಲಿ ತಂತ್ರಜ್ಞಾನ ಮುಂದುವರೆದಿದ್ದು ಭಾರತದೇಶ ಆರ್ಥಿಕತೆಯಲ್ಲಿ ಮುನ್ನಡೆ ಸಾಧಿಸುತ್ತಿದೆ ಸಹಕಾರಿ ಸಂಘಗಳು ಮುನ್ನಡೆಯಬೇಕಾದರೆ ಗುಣಮಟ್ಟದ ಬ್ಯಾಂಕಿಂಗ್ ಸಿಬ್ಬಂದಿಬೇಕು ಎಲ್ಲರ ವಿಶ್ವಾಸವನ್ನು ತೆಗೆದುಕೊಂಡು ಮುನ್ನಡೆದಾಗ ಮಾತ್ರ ಸಹಕಾರಿ ಅಭಿವೃದಿಯಾಗಲು ಸಾಧ್ಯವಾಗಿದ್ದು ಅಂತಹ ಗುಣಮಟ್ಟವನ್ನು ರಡ್ಡೇರ ಪತ್ತಿನ ಸೌಹಾರ್ದ ಸಾಧಿಸಿಕೊಂಡು ಬಂದಿರುವುದಕ್ಕೆ ಅವರ ೧೧ ಬ್ರಾಂಚ್ ಗಳ ಸೇವೆಯಲ್ಲಿವೆ ಅದರ ಅಧ್ಯಕ್ಷರಾದ ಕುಮಾರಪ್ಪನವರು ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಮನೋಭಾವದವರು ಉನ್ನತಿ ಸಾಧಿಸಲಿ ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರದ ಮಾಜಿ ಸಚಿವರಾದ ಬಸವರಾಜ ಪಾಟೀಲ್ ಮಾತನಾಡುತ್ತಾ ವ್ಯವಹಾರದಲ್ಲಿ ಸಂಬAಧಗಳನ್ನು ನೋಡಬಾರದು ಮತ್ತು ಸಹಕಾರಿ ಸಂಘದ ಪದಾಧಿಕಾರಿಗಳಿಗೆ ಸಾಲವನ್ನು ನೀಡಬಾರದು ಇಂತಹುಗಳನ್ನು ಮೈಗೂಡಿಸಿಕೊಂಡಾಗ ಸಹಕಾರಿ ಸಂಘಗಳು ಅಭಿವೃದ್ದಿಯಾಗಲು ಸಾಧ್ಯವೆಂದರು
ಶಾಸಕ ಮಾನಪ್ಪ ವಜ್ಜಲ್ ಮಾತನಾಡುತ್ತಾ ಬ್ಯಾಂಕ್ ಗಳಿಗಿಂತ ಸಹಕಾರಿ ಗಳು ಗ್ರಾಹಕರ ಸಮಸ್ಯೆಗಳಿಗೆ ಬೇಗನೆ ಸ್ಪಂದಿಸುತ್ತವೆ ಸರಕಾರಿ ಬ್ಯಾಂಕ್ ಹಾಗೂ ಸಹಕಾರಿಗಳಿಗೆ ಬ್ಯಾಂಕಿನ ನಿಬಂಧನೆಗಳು ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ ಆದರೆ ಸಹಕಾರಿಗಳು ತಮ್ಮ ಗ್ರಾಹಕನ ಹಿತದೃಷ್ಟಿ ಹಾಗೂ ಸಹಕಾರಿಯ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ವ್ಯವಹರಿಸುವುದರಿಂದ ಉತ್ತಮ ಸ್ಪಂದನೆ ಮಾಡುತ್ತವೆ ಸಾಲವನ್ನು ಸರಿಯಾದ ಉದ್ದೇಶಕ್ಕಾಗಿ ಪಡೆದಾಗ ಮಾತ್ರ ಅದರ ಸದ್ಭಳಕೆಯಾಗುತ್ತದೆ ಎಂದರು
ಮಾಜಿ ಮಂತ್ರಿಗಳಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡುತ್ತಾ ಗ್ರಾಹಕರು ಸಾಲ ಮಾಡುವಾಗ ಯಾವುದಕ್ಕೆ ಸಾಲ ಮಾಡುತ್ತಿದೇವೆ ಎಂದು ಗಮನದಲ್ಲಿಟ್ಟುಕೊಂಡು ಸಾಲ ತೆಗೆಯಬೇಕು ಅದನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ಮರುಪಾವತಿಸಲು ತೊಂದರೆಯಾಗುತ್ತದೆ ಅದಕ್ಕಾಗಿ ಸಾಲದ ಸದ್ಭಳಕೆಯನ್ನು ಮಾಡಿಕೊಂಡು ತಮ್ಮ ಆರ್ಥಿಕ ಪರಸ್ಥಿತಿಯನ್ನು ಸುಧಾರಿಸಲು ಸಹಕಾರಿಗಳು ಸಹಾಯ ಮಾಡುತ್ತವೆ ಎಂದರು
ರಡ್ಡೇರ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಎಚ್ ಕುಮಾರಪ್ಪನವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕೆಲವೆ ಸದಸ್ಯರಿಂದ ಕಡಿಮೆ ಹಣದಲ್ಲಿ ಬೆಳೆದುಬಂದ ಸಹಕಾರಿ ಇಂದು ಕೋಟ್ಯಂತರ ವ್ಯವಹಾರ ಮಾಡುವಷ್ಟು ಬಲಿಷ್ಟವಾಗಿದ್ದು ೧೧ ಶಾಖೆಗಳನ್ನು ಹೊಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು
ಸಂತೆಕಲ್ಲೂರಿನ ಶ್ರೀಗಳು, ಯರಡೋಣ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಆಶಿರ್ವಚನ ನೀಡಿದರು
ಶಾಂತನಗೌಡ ಪಾಟೀಲ್,ಶೇಖರಗೌಡ ಮಾಲಿ ಪಾಟೀಲ್,ಸೇರಿದಂತೆ ಮಾತನಾಡಿದರು
ಈ ಸಂದರ್ಭದಲ್ಲಿ ಹುನಕುಂಟಿ ಶರಣಯ್ಯ ತಾತ,ಮಸ್ಕಿಯ ಗಚ್ಚಿನಮಠದ ಶ್ರೀಗಳು,ವಿಶ್ವನಾಥ ಪಾಟೀಲ್ ತೋರಣದಿನ್ನಿ, ಡಿ ಜಿ ಗುರಿಕಾರ, ನಿರುಪಾದಿ ಕವಿಗಳು, ಅಮರೇಗೌಡ ಪಾಟೀಲ್, ಮಹೇಂದ್ರ ಚಿತಾಪುರ,ಸೇರಿದಂತೆ ಇದ್ದರು ಬಸವರಾಜ ಕರೇಕಲ್ ಸ್ವಾಗತಿಸಿದರು ಶರಣಪ್ಪ ಹೊಳಿಯಾಚೆ ನಿರೂಪಿಸಿದರು

WhatsApp Group Join Now
Telegram Group Join Now
Share This Article