ಐತಿಹಾಸಿಕ ಬ್ರಿಟಿಷ ಕಟ್ಟಡ ನೂರಾಒಂದು ಬಂಗಲೆ ಚತ್ತು ಕುಸಿತ,ರಕ್ಷಣೆ ಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
(ಲಕ್ಷ್ಮಣ ಬಾರಿಕೇರ್)
ಲಿಂಗಸಗೂರು:ಈ ಹಿಂದೆ ೧೯ನೇ ಶತಮಾನದಲ್ಲಿ ೧೯೦೫ರವರೆಗೆ ಸುಮಾರು ೨೫ ವರ್ಷಗಳ ಕಾಲ ಜಿಲ್ಲಾಕೇಂದ್ರವಾಗಿದ್ದ ಬ್ರಿಟಿಷರು ಕಟ್ಟಿಸಿದ ನೂರಾಒಂದು ಬಂಗಲೆ ಅಂದರೆ ಪ್ರಸ್ತುತ ಸಹಾಯಕ ಆಯುಕ್ತರ ಕಛೇರಿಯಾಗಿರುವ ನೂರಾಒಂದು ಬಂಗಲೆಯ ಚತ್ತು ಕುಸಿತವಾಗಿದ್ದು ರಕ್ಷಣೆಯಾವಾಗ ಎನ್ನುವಂತಾಗಿದೆ
ಬ್ರಟಿಷರು ಸುರುಪುರದ ಮೇಲೆ ಯುದ್ದಕ್ಕಾಗಿ ಒಂದು ಕಂಟೋನ್ಮೆಂಟ್ ಸ್ಥಳವನ್ನು ನಿರ್ಮಿಸಿದರು ಅದುವೇ ಛಾವಣಿ ಇಂದಿನ ಲಿಂಗಸಗೂರು ಆಗ ಬ್ರಿಟಿಷರು ಇಲ್ಲಿಂದಲೆ ಅಧಿಕಾರವನ್ನು ಮಾಡುತ್ತಿದ್ದು ಜಿಲ್ಲಾಧಿಕಾರಿ ಸೇರಿ ಎಲ್ಲಾ ಅಧಿಕಾರಿಗಳ ಕೇಂದ್ರಸ್ಥಾನವಾಗಿತ್ತು ಅಂತೆಯೆ ಪಟ್ಟಣದಲ್ಲಿ ಹಲವಾರು ಅಧಿಕಾರಿಗಳ ಐತಿಹಾಸಿಕ ಕಟ್ಟಡಗಳು ಇಲ್ಲಿದ್ದು ಹಲವಾರು ಕಟ್ಟಡಗಳು ನಸಿಸಿಹೋಗಿವೆ ಅದರಲ್ಲಿ ಇದೀಗ ನೂರಾಒಂದು ಬಂಗಲೆಯು ಶಿಥಿಲಾವಸ್ಥೇಗೆ ತಲುಪಿರುವುದು ದುರಂತವಾಗಿದೆ
ಸದರಿ ನೂರಾಒಂದು ಬಂಗಲೆಯಲ್ಲಿ ನೀವು ಯಾವುದೆ ಒಂದು ಬಾಗಿಲಿನಿಂದ ಪ್ರವೇಶ ಪಡೆದರು ಎಲ್ಲಾ ಭಾಗಕ್ಕೂ ಓಡಾಡಬಹುದು ಅದರಲ್ಲಿ ನೂರಾಒಂದು ಬಾಗಿಲುಗಳು ಇರುವುದರಿಂದ ಅದನ್ನು ನೂರಾಒಂದು ಬಂಗಲೆ ಎಂದು ಕರೆಯಲಾಗುತ್ತಿದೆ ಆಗಿನ ಬ್ರಿಟಿಷ ಅಧಿಕಾರಿಗಳು ಕುದುರೆಯ ಮೇಲೆಯೆ ಬಂಗಲೆಯ ಒಳಗೆ ಹೋಗಲು ವ್ಯವಸ್ಥೆ ಮಾಡಿದ್ದರಿಂದ ಅತಿ ಎತ್ತರದ ಬಾಗಲುಗಳನ್ನು ಈಗಲೂ ಕಾಣಬಹುದು ಅಂತಹ ಮಹತ್ವವಾದ ಐತಿಹಾಸಿಕ ಬಂಗಲೆಯು ಇಂದು ಅವನತಿಯತ್ತ ಸಾಗುತ್ತಿದ್ದು ರಕ್ಷಣೆ ಇಲ್ಲದಂತಾಗಿರುವುದು ದುರಂತವಾಗಿದೆ
ಈ ಹಿಂದೆ ತಹಸೀಲ್ದಾರ ಕಛೇರಿಯನ್ನು ಹೊಂದಿರುವ ಕಟ್ಟಡದ ಪಶ್ಚಿಮಭಾಗದ ಮುಂಭಾಗದ ಚತ್ತು ಕುಸಿತವಾಗಿದ್ದು ಹಂತಹಂತವಾಗಿ ಕಟ್ಟಡ ಕುಸಿತವಾಗುತ್ತಾ ಸಾಗುತ್ತಿದ್ದು ಐತಿಹಾಸಿಕ ಬಂಗಲೆ ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕುಸಿತವಾದರು ಆಶ್ಚರ್ಯವಿಲ್ಲ ಈ ಭಾಗದಲ್ಲಿಯೆ ಅತ್ಯಂತ ಸುಸಜ್ಜಿತವಾದ ಐತಿಹಾಸಿಕ ಕಟ್ಟಡ ಇದಾಗಿದ್ದು ಯಥಾಸ್ಥಿತಿಯಲ್ಲಿ ಇದನ್ನು ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ಇಂತಹ ಕಟ್ಟಡ ಹೀಗಿತ್ತು ಎನ್ನುವ ಬ್ರಿಟಿಷರ ತಂತ್ರಜ್ಞಾನ ಅವರ ಕಟ್ಟಡ ವಿನ್ಯಾಸದ ಕೌಶಲ್ಯ ನೋಡಲು ದೊರೆತೀತು ಆದರೆ ನಿರ್ಲಕ್ಷವಹಿಸಿದರೆ ನಾಮಾಶೇಷವಾಗುತ್ತದೆ ಅದಕ್ಕಾಗಿ ಕೂಡಲೇ ಕಂದಾಯ ಇಲಾಖೆ ಎಚ್ಚತ್ತುಕೊಂಡು ಐತಿಹಾಸಿಕ ನೂರಾಒಂದು ಬಂಗಲೆಯನ್ನು ಸಂರಕ್ಷಣೆ ಅಗತ್ಯವಾಗಿದೆ ಎನ್ನುವುದು ಇತಹಾಸಿಪ್ರಿಯರ ಅಭಿಪ್ರಾಯವಾಗಿದೆ ಕೂಡಲೇ ಕಟ್ಟಡದ ರಕ್ಷಣೇಗೆ ಮುಂದಾಗಬಹುದೆ ಕಾದುನೋಡೋಣ?