ಸಮಾಜ ಕಲ್ಯಾಣ ಆಯುಕ್ತರ ಆದೇಶ ಉಲ್ಲಂಘನೆ:: ಭೋಜನಾ ವೆಚ್ಚದ ಹೆಸರಿನಲ್ಲಿ ಲಕ್ಷಾಂತರ ಹಣ ಲೂಟಿ ನಡೆದಿದೆಯಾ…!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ :ತಾಲೂಕಿನಲ್ಲಿರುವ ಸಮಾಜದ ಕಲ್ಯಾಣ ಇಲಾಖೆಗೆ ಒಳಪಡುವ ವಸತಿ ಶಾಲೆ ಮೆಟ್ರಿಕ್ ಪೂರ್ವ. ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ನಿಯಗಳಲ್ಲಿ ಹೆಚ್ಚುವರಿ ಭೋಜನ ಮತ್ತು ವಸತಿ ವೆಚ್ಚಕ್ಕಾಗಿ ಒದಗಿಸಿರುವ ಅನುದಾನವನ್ನು ಮಾರ್ಗ ಪಲ್ಲಟ ಮಾಡಿ ಆಯುಕ್ತರ ಆದೇಶ ಉಲ್ಲಂಘಿಸಿ ಇಲಾಖೆಯಗಳ ವಾರ್ಡನಗಳು,ಅಧಿಕಾರಿಗಳು ಸೇರಿ ಅವ್ಯವಹಾರ ನಡೆಸಿದ್ದಾರೆಯೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತದೆ
ವಿದ್ಯಾರ್ಥಿಗಳ ಬಯೋಮೇಟ್ರಿಕ ಅಳವಡಿಸದೆ ಕಳೆದ ೭ ತಿಂಗಳಲ್ಲಿ ಭೋಜನ ವೆಚ್ಚದಲ್ಲಿ ಬೋಗಸ ಬಿಲ್ ಸೃಷ್ಟಿಸಿ ಲಕ್ಷಾಂತರ ಹಣ ಆಹಾರ ಗುತ್ತಿಗೆದಾರರು ಲೂಟಿ ಒಡೆದಿರುವುದಾಗಿದೆ ಈ ಕುರಿತು ಸಮಗ್ರ ತನಿಖೆ ಆಗಬೇಕಾಗಿದೆ.ಎಂದು ಸಾರ್ವಜನಿಕರ ಒತ್ತಾಯವಾಗಿದೆ
ದಿನಾಂಕ ೨೧-೦೨-೨೦೨೪ರಂದು ಸಮಾಜ ಕಲ್ಯಾಣ ಆಯುಕ್ತರು ಬೆಂಗಳೂರು ಇವರುಗಳು ಸುತ್ತೋಲೆ ಹೊರಡಿಸಿದ್ದು ಪ್ರತಿಯೊಂದು ವಸತಿ ನಿಲಯಗಳಲ್ಲಿ ಲೆಕ್ಕ ಶೀರ್ಷಕ್ಕೆ ೨೦೨೫-೦೦-೧೦೧-೬೧.೨೨೨೫-೦೦-೧೦೧-೦೨೯ ಇದರ ಅಡಿಯಲ್ಲಿ ಅನುದಾನ ಒದಗಿಸಲಾಗಿದ್ದು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆ ಇದ್ದರು ಹೆಚ್ಚನ ವಿದ್ಯಾರ್ಥಿಗಳ ಹಾಜರಾತಿ ತೋರಿಸುತ್ತಿದ್ದು ಅನುದಾನವನ್ನು ಬಯೋಮೇಟ್ರಿಕ ಆಧಾರದಲ್ಲಿ ನಿಗದಿ ಸರಕಾರ ಪಡಿಸಿರುವ ಪ್ರತಿ ತಿಂಗಳು ಭೊಜನ ವೆಚ್ಚ ತಲಾ ವಿದ್ಯಾರ್ಥಿಗಳಿಗೆ ೧೮೫೦ ಮಿತಿಯಲ್ಲಿ ನಿಲಯದಲ್ಲಿ ಹೆಚ.ಎಮ.ಎಸ ಮೂಲಕ ದಾಖಲಾಗಿ ಬಯೋಮೇಟ್ರಿಕ ಹಾಜರಾತಿಯಂತೆ ಅನುದಾನವನ್ನು ವೆಚ್ಚ ಮಾಡತಕ್ಕದು ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿರುವರು.
ಆದರೆ ಕಳೆದ ೭ ತಿಂಗಳನಿಂದ ಯಾವುದೆ ವಸತಿ ನಿಲಯ ಬಯೋಮಟ್ರಿಕ ಅನುದಾನ ವರದಿಯಂತೆ ಆಹಾರ ಗುತ್ತೆಗೆದಾರರು ವಸತಿ ನಿಲಯಗಳಿಗೆ ಆಹಾರ ಸರಬರಾಜು ಮಾಡದೆ ಇರುವದರಿಂದ ಬೋಗಸ್ ಬಿಲ್ ಮೂಲಕ ಹಣ ಪಡೆದಿದು ಪ್ರತಿ ತಿಂಗಳು ಲಕ್ಷಾಂತರ ಹಣ ಅವ್ಯವಹಾರ ಜರುಗಿದೆ.ಎನ್ನಲಾಗುತ್ತದೆ
ದಿ೦೯-೧೦-೨೦೨೪ರಂದು ಸಮಾಜ ಕಲ್ಯಾಣ ಆಯುಕ್ತರಾದ ರಾಕೇಶ ಕುಮಾರ ಅವರು ನೆನಪಿನ ಸುತ್ತೋಲೆ ಬರೆದು ದಿನಾಂಕ ೦೧-೦೯-೨೦೨೪ರಿಂದ ಅನ್ವಯವಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ಎಲ್ಲ ವಿದ್ಯಾರ್ಥಿಗಳ ನಿಲಯಗಳ ಭೋಜನ ವೆಚ್ಚವನ್ನು ಬಯೋಮೇಟ್ರಿಕ ಹಾಜರಾತಿ ಅನುಗುಣವಾಗಿ ವೆಚ್ಚ ಭರಿಸುವ ಬಗ್ಗೆ ತಿಳಿಸಿದ್ದಾರೆ.
ಆದಾಗ್ಯೂ ದಿ೦೧-೦೯-೨೦೨೪ರಿಂದ ಕಡ್ಡಾಯವಾಗಿ ಇಲಾಖೆಯ ಅಧೀನದಲ್ಲಿ ನಿರ್ವಹಿಸುತ್ತಿರುವ ಎಲ್ಲ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ನಿಲಯದ ಭೋಜನ ವೆಚ್ಚ ಬಯೋಮೇಟ್ರಿಕ ತಂತ್ರಾಂಶದಲ್ಲಿ ನಮೂದಾಗುವ ಹಾಜರಾತಿ ಅನುಸಾರವಾಗಿ ಖಜಾಂನೆಯಿಂದ ಹಣ ಸೆಳೆಯಲು ಭಟವಾಡಿ ಮಾಡಲು ಸೂಚಿಸಲಾಗಿದೆ.
ಕಳೆದ ೭ ತಿಂಗಳನಿಂದ ಎಲ್ಲಿಯು ಬಯೋಮೇಟ್ರಿಕ ವರದಿಯಂತೆ ಅನುದಾನ ಸದ್ಬಳಕೆ ಆಗಿಲ್ಲ ಕಾರಣ ಈ ಅವ್ಯವಹಾರದಲ್ಲಿ ಆಹಾರ ಗುತ್ತೆಗೆದಾರರು ಇಲಾಖೆ ಅಧಿಕಾರಿಗಳು, ವಾರ್ಡನಗಳು, ಸಿಬ್ಬಂದಿಗಳು ಶಾಮೀಲಾಗಿರುವರೆ ಎನ್ನುವ ಶಂಕೆಗಳು ವ್ಯಕ್ತವಾಗುತ್ತವೆ !!?
ಯಾವುದಕ್ಕೂ ಉನ್ನತ ಮಟ್ಟದ ತನಿಖೆ ನಡೆಸಿದರೆ ತಾಲೂಕಿನಲಿ ನಡೆದಿರುವ ಸಮಾಜ ಕಲ್ಯಾಣ ಇಲಾಖೆಯ ಗೋಲಮಾಲ್ ಹೊರಬರಬಹುದು ಎನ್ನಲಾಗುತ್ತಿದೆ