ಕುಪ್ಪಿಗುಡ್ಡ:ಲೋಕಕಲ್ಯಾಣಾರ್ಥವಾಗಿ ಹನಮಯ್ಯ ತಾತ೧೭೧ದಿನ ಮೌನಾನುಷ್ಠಾನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಕುಪ್ಪಿಗುಡ್ಡ ಹಾಗೂ ಸರ್ಜಾಪೂರ ಗ್ರಾಮಗಳ ಮಧ್ಯದಲಿರುವ ದೇವಸ್ಥಾನದಲಿ ಲೋಕಕಲ್ಯಾಣಾರ್ಥವಾಗಿ ಗುಂತಗೋಳದ ಹನಮಯ್ಯ ತಾತನವರು ೧೭೧ ದಿನ ಅನುಷ್ಠಾನ ಕುಳಿತಿದ್ದಾರೆ
ಅನುಷ್ಠಾನ ನಿಮಿತ್ಯವಾಗಿ ಸರ್ಜಾಪೂರ ಹಾಗೂ ಕುಪ್ಪಿಗುಡ್ಡದ ಭಕ್ತಜನರು ಆಗಮಿಸಿ ಹನಮಯ್ಯ ತಾತನವರಿಗೆ ಆರತಿ ಮಾಡುವುದು, ಪೂಜೆ ಮಾಡುವುದು ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು
ನಂತರದಲ್ಲಿ ತಾತನವರು ನೆರೆದ ಭಕ್ತರಿಗೆ ಪ್ರಸಾದವನ್ನು ವಿತರಣೆ ಮಾಡಿ ನಂತರದಲ್ಲಿ ಅನುಷ್ಠಾನಕ್ಕೆ ಅಣಿಯಾದರು
ಲೋಕಲ್ಯಾಣಾರ್ಥವಾಗಿ ಹನಮಯ್ಯ ತಾತನವರು ಈ ಹಿಂದೆ ಗುಂತಗೋಳ ಆಂಜಣೆಯ ದೇವಸ್ಥಾನ ಜಲದುರ್ಗದ ದೇವಸ್ಥಾನ ಸೇರಿದಂತೆ ಹಲವೆಡೆ ಅನುಷ್ಠಾನ ಮಾಡಿದ್ದಾರೆ ಅದರಂತೆ ಈ ಸಲ ಕುಪ್ಪಿಗುಡ್ಡದ ಸೀಮಾಂತರದಲ್ಲಿರುವ ದೇವಾಲಯದಲ್ಲಿ ಸುಮಾರು ಆರು ತಿಂಗಳವರೆಗೆ ಅನುಷ್ಠಾನ ಮಾಡಲಿದ್ದಾರೆಂದು ಅವರ ಭಕ್ತಾದಿಗಳು ಹೇಳಿದರು ಅನುಷ್ಠಾನದ ಸಮಯದಲ್ಲಿ ಊಟಮಾಡದೆ ಕೇವಲ ಬಾಳೆಹಣ್ಣು ಹಾಲು ಮಾತ್ರ ಸೇವಿಸುತ್ತಾರೆಂದು ಅವರ ಭಕ್ತರು ಹೇಳಿದರು
ಈ ಸಂದರ್ಭದಲ್ಲಿ ಭಕ್ತರಾದ ಅಮರೇಗೌಡ ಕುಪ್ಪಿಗುಡ್ಡ, ಶರಣಪ್ಪ, ಶ್ರೀರಾಮ ಸರ್ಜಾಪುರ, ಕುಪ್ಪಣ್ಣ ಕುಪ್ಪಿಗುಡ್ಡ ಮಾದೇಶ ಕರವೇ ಅಧ್ಯಕ್ಷರು, ಹಾಗೂ ನೂರಾರು ಮಹಿಳೆಯರು ಸೇರಿದಂತೆ ಇದ್ದರು