ಹಾಜಿಬಾಬು ಕಲ್ಯಾಣಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ,,ಅಭಿಮಾನಿಗಳಲಿ ಸಂತಸ

Laxman Bariker
ಹಾಜಿಬಾಬು ಕಲ್ಯಾಣಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆ,,ಅಭಿಮಾನಿಗಳಲಿ ಸಂತಸ
WhatsApp Group Join Now
Telegram Group Join Now

ತಾಲೂಕಾ ಸರಕಾರಿ ನೌಕರರ ಸಂಘಕ್ಕೆ ಹಾಜಿಬಾಬು ಕಲ್ಯಾಣಿ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆ,ಅಭಿಮಾನಿಗಳಲ್ಲಿ ಸಂತಸ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗಳು ನಡೆದಿದ್ದು ತಾಲೂಕಾ ನೌಕರರ ಸಂಘಕ್ಕೆ ಹಾಜಿಬಾಬು ಕಲ್ಯಾಣಿ ಅವಿರೋಧವಾಗಿ ಆಯ್ಕೆಯಾಗಿದ್ದು ಫಲಿತಾಂಶ ಘೋಷಣೆಯೊಂದೆ ಬಾಕಿ ಎನ್ನಲಾಗುತ್ತಿದ್ದು ಅವರ ಅಭಿಮಾನಿಗಳು ಅವರಿಗೆ ಸನ್ಮಾನಿಸಿ ಸಿಹಿಹಂಚುವುದು ಕಂಡು ಬರುತ್ತಿದೆ

ತಾಲೂಕಾ ಸರಕಾರಿ ನೌಕರರ ಸಂಘಕ್ಕೆ ಚುನಾವಣೆಯ ಪ್ರಕ್ರಿಯೆಗಳು ನಡೆಯುತ್ತಿದ್ದು ೩೪ ಸ್ಥಾನಗಳಲ್ಲಿ ೨೬ ಅವಿರೋಧವಾಗಿ ಆಯ್ಕೆಯಾಗಿದ್ದು ಎಂಟಕ್ಕೆ ಮಾತ್ರ ಚುನಾವಣೆಗಳು ನಡೆದು ನಿರ್ದೇಶಕರ ಆಯ್ಕೆ ನಡೆಯಿತು ನಂತರದಲ್ಲಿ ಅಧ್ಯಕ್ಷರು ಹಾಗೂ ರಾಜ್ಯ ಪರಿಷತ್ ಸದಸ್ಯರು ಹಾಗೂ ಖಜಾಂಚಿಗೆ ನವಂಬರ ೧೬ರಂದು ಚುನಾವಣೆಯ ದಿನಾಂಕ ನಿಗದಿಯಾಗಿತ್ತು ಆದರೆ ಸದರಿ ಸ್ಥಾನಗಳಿಗೆ ಕೇವಲ ಒಂದೊಂದೆ ನಾಮಪತ್ರಗಳು ಸಲ್ಲಿಕೆಯಾದ ನಿಮಿತ್ಯವಾಗಿ ಅವಿರೋಧವಾಗಿ ಆಯ್ಕೆಯಾದಂತಾಗಿದೆ ನವಂಬರ ೧೦ರಂದು ನಾಮಪತ್ರ ವಾಪಸ್ ತೆಗೆಯವ ದಿನಾಂಕವಿದ್ದು ನವಂಬರ ೧೬ ಚುನಾವಣೆಯ ದಿನಾಂಕವಾಗಿದೆ ಆದರೆ ಸದರಿ ಸ್ಥಾನಗಳಿಗೆ ಒಂದೊಂದೆ ನಾಮಪತ್ರಗಳು ಸಲ್ಲಿಕೆಯಾಗಿದ್ದು ಎಲ್ಲಾ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾದಂತಾಗಿದ್ದು ಅದರಂತೆ ತಾಲೂಕಾ ಅಧ್ಯಕ್ಷರಾಗಿ ಹಾಜಿಬಾಬು ಕಲ್ಯಾಣಿ, ರಾಜ್ಯ ಪರಿಷತ್ ಸದಸ್ಯರಾಗಿ ರಾಮಕೃಷ್ಣನಾಯಕ, ಹಾಗೂ ತಾಲೂಕಾ ಖಜಾಂಚಿಯಾಗಿ ತಾವರೆಪ್ಪನಾಯ್ಕ ಆಯ್ಕೆಯಾಗಿದ್ದು ಅಂತಿಮವಾಗಿ ಘೋಷಣೆಯೊಂದೆ ಬಾಕಿ ಎನ್ನಲಾಗುತ್ತಿದೆ
ಆಯ್ಕೆ ಪ್ರಕ್ರಿಯೆ ತಿಳಿಯುತ್ತಿರುವಂತೆ ಅವರ ಅಭಿಮಾನಿಗಳು ನೂತನ ಅಧ್ಯಕ್ಷರಿಗೆ ಸೇರಿದಂತೆ ಎಲ್ಲರಿಗೂ ಶಾಲುಹಾರ ಹಾಕಿ ಸನ್ಮಾನಿಸುವುದು ಸಿಹಿಹಂಚಿ ಸಂಭ್ರಮಿಸುವುದು ಕಂಡುಬಂತು
ರಾಜ್ಯದಲ್ಲಿ ತಾಲೂಕಾ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸ್ಥಾನಕ್ಕೆ ಅವಿರೋಧವಾಗಿರುವ ಕೆಲಸವೇ ತಾಲೂಕುಗಳಲ್ಲಿ ಲಿಂಗಸಗೂರು ತಾಲೂಕು ಒಂದಾಗಿದೆಎಂದು ಅವರ ಅಭಿಮಾನಿಗಳು ಹೇಳುತ್ತಾರೆ ಅದರ ಹಿಂದೆ ಹಿಂದಿನ ಅಧ್ಯಕ್ಷರಾದ ಭೀಮಣ್ಣನಾಯಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಅಮರೇಶಪ್ಪ ಹೂನೂರು ಹಾಗೂ ಅವರ ತಂಡವು ಸಾಕಷ್ಟು ಪರಿಶ್ರಮಿಸುವ ಮೂಲಕ ಅವಿರೋಧವಾಗಿ ಅಯ್ಕೆಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ ಅಂತೆಯೆ ಅಮರೇಶಪ್ಪ ಹೂನೂರು ಅವರ ಮನೆಯಲ್ಲಿ ನೂತನ ತಾಲೂಕಾ ಅಧ್ಯಕ್ಷರಾದ ಹಾಜಿಬಾಬು ಕಲ್ಯಾಣಿಯವರಿಗೆ ಹಾಗೂ ಅಮರೇಶಪ್ಪ ಹೂನೂರರವರಿಗೆ ಶಾಲುಹಾರ ಹಾಕಿ ಸನ್ಮಾನಿಸಿ ಸಿಹಿಹಂಚಲಾಯಿತು
ನಂತರ ನೂತನ ಅಧ್ಯಕ್ಷರಾದ ಹಾಜಿಬಾಬು ಕಲ್ಯಾಣಿ ಮಾತನಾಡಿ ನನ್ನ ಹಾಗೂ ತಮ್ಮ ತಂಡದ ಆಯ್ಕೆಯಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ಶರಣಬಸವರಾಜ ನಾಡಗೌಡರ್,ಶರಣಬಸವ ಹೂಗಾರ, ಚನ್ನಬಸವನಗೌಡ ಪಾಟೀಲ್, ಹನಮಂತಪ್ಪ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article