ಪಕ್ಷ ವಿರೋಧಿ ಸಾಬೀತುಪಡಿಸಿದರೆ ರಾಜೀನಾಮೆಗೂ ಸಿದ್ದ-ಗೋವಿಂದನಾಯಕ

Laxman Bariker
ಪಕ್ಷ ವಿರೋಧಿ ಸಾಬೀತುಪಡಿಸಿದರೆ ರಾಜೀನಾಮೆಗೂ ಸಿದ್ದ-ಗೋವಿಂದನಾಯಕ
WhatsApp Group Join Now
Telegram Group Join Now

ಪಕ್ಷ ವಿರೋಧಿ ಸಾಬೀತುಪಡಿಸಿದರೆ ರಾಜೀನಾಮೆಗೂ ಸಿದ್ದ-ಗೋವಿಂದನಾಯಕ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಹೈಕಮಾಂಡ ಮುಂದೆ ಬಯ್ಯಾಪುರ ಬಣ ನಮ್ಮ ವಿರುದ್ದ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದು ನಾನು ಪಕ್ಷ ವಿರೋಧಿ ಕೆಲಸ ಮಾಡಿದ್ದೇನೆ ಎಂದು ಸಾಬೀತುಪಡಿಸಿಲಿ ರಾಜೀನಾಮೆಗೂ ಸಿದ್ದ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ ಹೇಳಿದರು
ಅವರು ಪಟ್ಟಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡುತ್ತಾ ನಾನು ಮೂಲತಃ ಕಾಂಗ್ರೆಸ್ ಪಕ್ಷದವನು ರಾಜಾ ಅಮರೇಶ್ವರನಾಯಕರು ಕಲ್ಮಲಾ ಕ್ಷೇತ್ರದಿಂದ ಸ್ಪರ್ಧಿಸಿದಾಗಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ದುಡಿದ್ದೇನೆ ಇತ್ತೀಚೆಗೆ ಪುನಃ ಕಾಂಗ್ರೆಸ್ ಸೇರಿ ಸಾಕಷ್ಟು ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದೇನೆ ನಾನು ಎಂದೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಆದರೆ ಬಯ್ಯಾಪುರ ಬಣ ಮೂಲತಃ ಕಾಂಗ್ರೆಸ್ ಪಕ್ಷ ಅಲ್ಲ ಅಮರೇಗೌಡ ಬಯ್ಯಾಪುರವರು ಕ್ಷೇತ್ರದಲ್ಲಿ ಬೇರೆಬೇರೆ ಪಕ್ಷಗಳಿಂದ ಆಯ್ಕೆಯಾಗಿದ್ದಾರೆ ಇತ್ತೀಚೆಗೆ ಕಾಂಗ್ರೆಸ್ ಗೆ ಬಂದವರು ಅಲ್ಲದೆ ಕಾಂಗ್ರೆಸ್ ನಲ್ಲಿದ್ದು ಹಲವಾರು ಪಕ್ಷ ವಿರೋಧಿ ಕೆಲಸಗಳನ್ನು ಮಾಡಿದ್ದಾರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಡಿ ಎಸ್ ಹೂಲಿಗೇರಿ ಗೆಲುವುಆಗುತ್ತಿತ್ತು ಆದರೆ ಬಯ್ಯಾಪುರ ಬಣ ಆರ್ ರುದ್ರಯ್ಯನವರನ್ನು ತಂದು ಕೊನೆಯಲ್ಲಿ ಬಿಜೆಪಿ ಗೆ ಕೈ ಜೋಡಿಸಿರುವುದರಿಂದಲೇ ಹೂಲಿಗೇರಿಗೆಯವರಿಗೆ ಸೋಲಾಗಿದೆ
ಪುರಸಭೆಯ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ,ಯುವಕಾಂಗ್ರೆಸ್ ಆಯ್ಕೆ ಸಂದರ್ಭದಲ್ಲಿ ಸೇರಿದಂತೆ ಹಲವಾರು ಸಲ ಪಕ್ಷ ವಿರೋಧಿ ಚಟುವಟಿಕೆಗಳನ್ನು ತಾವು ಮಾಡುತ್ತಾ ಬಂದಿದ್ದು ಪಕ್ಷ ನಿಷ್ಟರಾಗಿ ದುರಿಯುವ ನಮಗೆ ಬೇರೆ ಪಕ್ಷದಿಂದ ಬಂದವರೆAದು ಹೈಕಮಾಂಡ ಮುಂದೆ ಆರೋಪಿಸಿರುವುದು ಸರಿಯಾದ ಲಕ್ಷಣವಲ್ಲ ನೀವು ಇಂತಲ್ಲಿ ತಪ್ಪು ಮಾಡುತ್ತಿದ್ದೀರೆಂದು ಹೇಳಿದರೆ ಅದನ್ನು ತಿದ್ದಿ ನಡೆಯುತ್ತೇವೆ ವೃಥಾ ಆರೋಪ ಸರಿಯಾದುದಲ್ಲ ಡಿ ಎಸ್ ಹೂಲಿಗೇರಿಯವರು ಪರಿಶಿಷ್ಟ ಪಂಗಡದವರಿಗೆ ಬಹಳ ನಂತರ ದಿನಗಳಲ್ಲಿ ತಾಲೂಕಾ ಅಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ ಅದನ್ನು ಚನ್ನಾಗಿಯೆ ನಿಭಾಯಿಸಿಕೊಂಡು ಹೊರಟಿರುವೆನು ಹಿಂದುಳಿದವರಿಗೆ ಅಧ್ಯಕ್ಷಸ್ಥಾನ ನಿಡಿರುವುದು ಕೆಲವರಿಗೆ ಸಹಿಸಲಾಗುತ್ತಿಲ್ಲವೇನೋ ನಮಗೂ ನಮ್ಮ ಜನಾಂಗದ ಬಲವಿದೆ ಎಂದು ಸವಾಲ್ ಹಾಕಿದರು
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷರಾದ ಅಮರೇಶ ಹೆಸರೂರು, ಪುರಸಭೆ ಮಾಜಿ ಉಪಾಧ್ಯಕ್ಷ ಎಂ ಡಿ ರಫಿ, ಹಿರಿಯ ಮುಖಂಡರಾದ ಮುದಕಪ್ಪ ವಕೀಲರು,ಸಂಜೀವಪ್ಪ ಚಲುವಾದಿ, ಸಂಜೀವಕುಮಾರ, ರುದ್ರಪ್ಪ ಬ್ಯಾಗಿ, ಶಿವರಾಯ ದೇಗುಲಮರಡಿ, ನೀಲಪ್ಪ ಪವಾಆರ, ಜೀವನಕುಮಾರ ಬಾಳೇಗೌಡ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article