ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಸಿದ್ದ-ಗೋವಿಂದನಾಯಕ

Laxman Bariker
ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಸಿದ್ದ-ಗೋವಿಂದನಾಯಕ
Oplus_131072
WhatsApp Group Join Now
Telegram Group Join Now

ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಸಿದ್ದ-ಗೋವಿಂದನಾಯಕ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಯಾರ ಅವಧಿಯಲ್ಲಿ ಎಷ್ಟು ಅಭಿವೃದ್ದಿಯಾಗಿದೆ ಎನ್ನುವದಕೆ ದಾಖಲೆಗಳೊಂದಿಗೆ ಬಹಿರಂಗ ಚರ್ಚೆ ಸಿದ್ದ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ ಹೇಳಿದರು
ಅವರು ಪಟ್ಟಣದ ಮಾಜಿ ಶಾಸಕ ಡಿ ಎಸ್ ಹೂಲಿಗೇರಿ ನವಿಆಸದಲ್ಲಿ ಏರ್ಪಡಿಸಿದ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಡಿ ಎಸ್ ಹೂಲಿಗೇರಿಯವರ ಶಾಸಕರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗನ್ನು ಮಾಡಿದ್ದಾರೆ ಉದ್ಯಾನವನ,ಕೋರ್ಟ ನೂತನ ಕಟ್ಟಡ,ಸ್ಟೇಡಿಯಂ ಪೂರ್ಣಗೊಳಿಸಿದ್ದು, ಅಂಬೇಡ್ಕರ ಭವನ, ಗ್ರಂಥಾಲಯ,ಸಬ್ ರಜಿಸ್ಟರ್ ಆಫೀಸ್ ನೂತನ ಕಟ್ಟಡ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಅವರ ಕೊನೆಯ ಅವಧಿಯಲ್ಲಿ ಎನ್ ಆರ್ ಬಿಸಿಗೆ ೧೧೦ಕೋಟಿ ಟೆಂಡರ್ ಪ್ರಕ್ರಿಯೆ ನಡೆಯಿತು ಅಷ್ಟರಲ್ಲಿ ಚುನಾವಣೆಗಳು ನಡೆದವು ನಾವು ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ನಿಮಗೆ ಕ್ಷೇತ್ರದ ಬಗೆಗೆ ಕಾಳಜಿ ಇದ್ದರೆ ರೈತರ ಪರವಾಗಿ ಕೆಲಸ ಮಾಡಬೇಕು ಎಂದಿದ್ದರೆ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ದೊರೆಯುತ್ತಿಲ್ಲ ಅವರ ಮೆಣಸಿನಕಾಯಿ ಬೆಳೆ ಒಣಗುತ್ತಿದೆ ಅದಕ್ಕಾಗಿ ನೀರು ಬಿಡುಸುವ ಕೆಲಸ ಮಾಡಬೇಕು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ವೀರನಗೌಡ ಪಾಟೀಲ್ ಲೆಕ್ಕಿಹಾಳ ಮಾತನಾಡುತ್ತಾ ಹೂಲಿಗೇರಿಯವರು ನಿದ್ದೆಯಿಂದ ಎದ್ದು ಬಂದು ಮಾತನಾಡುತ್ತಾರೆ ಎಂದರು ಅದು ಅಷ್ಟು ಸಮಂಜಸವಲ್ಲ ಅವರ ಅವಧಿಯಲ್ಲಿ ಸಾಕಷ್ಟು ಕೆಲಸಗಳು ಆಗಿವೆ
ಶಾಸಕ ಮಾನಪ್ಪ ವಜ್ಜಲರವರು ಕ್ಷೇತ್ರದಲ್ಲಿ ಮೂರುಬಾರಿ ಶಾಸಕರಾದರು ಆದರೆ ತಾಲೂಕಿಗೆ ನಿಮ್ಮ ಕೊಡುಗೆ ಏನು ಚುನಾವಣೆ ಮುಗಿದ ನಂತರ ಹೂಲಿಗೇರಿ ಸೋತರು ಸಹಿತ ಮತದಾರರಿಗೆ ಧನ್ಯವಾದಗಳನ್ನು ಹೇಳಿದರು ಆದರೆ ನೀವು ಇದುವರೆಗೂ ಮತದಾರನಿಗೆ ಧನ್ಯವಾದ ಸಹಿತ ಹೇಳಿಲ್ಲ ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ನೀವು ಗೈರು ಆಗಿದ್ದೀರಿ ನಿಮ್ಮ ಅವಧಿಯಲ್ಲಿ ತಾಲೂಕಿಗೆ ಏನೇನು ತಂದಿದ್ದೀರಿ ಎನ್ನುವುದನ್ನು ನೀವು ತೋರಿಸಿ ಹೂಲಿಗೇರಿಯವರು ಏನು ಮಾಡಿದ್ದಾರೆಂದು ದಾಖಲೆಗಳೊಂದಿಗೆ ನಾವು ಬರುತ್ತೇವೆ ಬಹಿರಂಗವಾದ ಚರ್ಚೆ ನಡೆಯಲಿ ಯಾರ ಅವಧಿಯಲ್ಲಿ ಅಭಿವೃದ್ದಿಯಾಗಿದೆ ಎನ್ನುವುದನ್ನು ಜನರೆ ತೀರ್ಮಾಣ ಮಾಡಲಿ ಎಂದು ಅವರು ಹೇಳಿದರು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು,ತಾಲೂಕಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೆಂಕಟೇಶ ಗುತ್ತೇದಾರ, ಮುದಕಪ್ಪ ವಕೀಲ, ಕಂಠೆಪ್ಪಗೌಡ, ಎಂ,ಡಿ ರಫಿ,ಸಂಜೀವಪ್ಪ ಹುನಕುಂಟಿ, ಪ್ರಭುಸ್ವಾಮಿ ಅತ್ತನೂರು ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article