ಖಾಸಗಿ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಸರಕಾರಿ ಶಾಲೆಗಳು ಬೆಳೆಯಬೇಕು-ವಜ್ಜಲ್

Laxman Bariker
ಖಾಸಗಿ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಸರಕಾರಿ ಶಾಲೆಗಳು ಬೆಳೆಯಬೇಕು-ವಜ್ಜಲ್
WhatsApp Group Join Now
Telegram Group Join Now

ಕ್ಷೇತ್ರದ ವಸತಿ ಶಾಲೆಗಳಿಗೆ 10ಕೋಟಿ ಮೀಸಲಿಡುವೆ,ಜಿಲ್ಲಾಸ್ಪತ್ರೆ ತರುವುದೆ ಮುಖ್ಯಗುರಿ

ಖಾಸಗಿ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಸರಕಾರಿ ಶಾಲೆಗಳು ಬೆಳೆಯಬೇಕು-ವಜ್ಜಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಇಂದು ಎಲ್ಲೆಡೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿದ್ದು ಅದನ್ನು ಗಮನಿಸಿ ಖಾಸಗಿ ಶಾಲೆಗಳಿಗಿಂತ ನಾವೇನು ಕಡಿಮೆ ಎಂಬಂತೆ ಸರಕಾರಿ ಶಾಲೆಯಲ್ಲಿಯು ಇಂಗ್ಲಿಷ ಕಲಿಸುವುದರ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರಕಾರಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸುತ್ತಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು

ಅವರು ಪಟ್ಟಣದ ಉರ್ದುಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ ಜಿಲ್ಲಾಮಟ್ಟದ ಮೌಲಾನಾ ಆಜಾದ ಮಾದರಿ ಶಾಲೆ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ ಕ್ಷೇತ್ರದಲ್ಲಿ ನಾನು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಈ ಸಲ ನಮ್ಮ ವ್ಯಾಪ್ತಿಯ ವಸತಿ ನಿಲಯಗಳ ಮೂಲಭೂತ ಸೌಕರ್ಯಕ್ಕಾಗಿ ೧೦ಕೋಟಿ ಮೀಸಲಿಇಡುವುದಾಗಿ ಅವರು ಹೇಳಿದರು
ಶಿಕ್ಷಣದಲ್ಲಿ ಮಕ್ಕಳ ಪ್ರತಿಭೆ ಹೊರಬರಬೇಕಾದರೆ ಕೇವಲ ಶಿಕ್ಷಕರಿಂದಲೇ ಮಾತ್ರ ಸಾಧ್ಯವಾಗುವುದಿಲ್ಲ ಅದಕ್ಕೆ ಪಾಲಕರು ಸಮಾಜ ಶಿಕ್ಷಕರು ಸೇರಿ ಸಹಕಾರ ನೀಡಿದರೆ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು ಸರಕಾರದಲ್ಲಿ ಹಲವಾರು ಗೊಂದಲಗಳಿವೆ ಅದರಿಂದಾಗಿ ಯಾವುದೆ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಸ್ವಪಕ್ಷದವರೇ ಆರೋಪ ಪ್ರತ್ಯಾರೋಪ ಮಾಡುತಿದ್ದಾರೆ ಇದರಿಂದ ಅಭಿವೃದ್ದಿ ಹೇಗೆ ಸಾಧ್ಯ ಹಲವಾರು ಮೂಲಭೂತ ಸೌಕರ್ಯಗಳ ನಡುವೆ ನಮ್ಮ ಕ್ಷೇತ್ರದ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ ಶೀಕ್ಷಕರ ನೇಮಕಾತಿಯನ್ನು ಮಾಡುತ್ತಿಲ್ಲ ಕೇವಲ ಅತಿಥಿ ಶಿಕ್ಷಕರ ಮೇಲೆ ಪಾಠ ಗಳು ನಡೆಯುತ್ತಿವೆ ಇದು ಎಷ್ಟರ ಮಟ್ಟಿಗೆ ಅಭಿವೃದ್ದಿಗೆ ಸಾಧ್ಯವಾಗುತ್ತದೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಪಾಲಕರ ಹಾಗೂ ಮಗುವಿನ ಸಹಕಾರ ಮುಖ್ಯವಾಗುತ್ತದೆ ಅಂದಾಗ ಮಾತ್ರ ಕಲಿಕ ಸುಗಮವಾಗಲು ಸಾಧ್ಯವಾಗುತ್ತದೆ ಪಟ್ಟಣಕ್ಕೆ ದೊರಕಿರುವ ಜಿಲ್ಲಾಮಟ್ಟದ ಮೌಲಾನಾ ಆಜಾದ ಮಾದರಿ ಶಾಲೆಯು ಅಂದಾಜು೫೨೦ ಲಕ್ಷ ಹಣದಲ್ಲಿ ನಿರ್ಮಾಣವಾಗುತ್ತಿದ್ದು ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸಬೇಕು ಎಂದರು

oplus_0

ಲಿಂಗಸಗೂರಿಗೆ ಬಂದಿರುವ ಎರಡುನೂರು ಬೆಡ್ ನ ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಬೇರೆ ತಾಲೂಕಿಗೆ ಸ್ಥಳಾಂತರವಾಗಿದ್ದು ಈ ವಿಷಯದಲ್ಲಿ ಸಿಎಂರವರನ್ನು ಭೇಟಿ ಮಾಡಿದಾಗ ಸದರಿ ವಿಷಯ ನನ್ನ ಗಮನಕ್ಕೆ ಇರುವುದಿಲ್ಲ ಬೇಗನೆ ಮೊದಲಿನಂತೆ ಸದರಿ ಆಸ್ಪತ್ರೆ ಲಿಂಗಸಗೂರಿಗೆ ದೊರೆಯುವಂತೆ ಮಾಡುವೆ ಎಂದು ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ ಅವರಿಗೆ ಈ ವಿಷಯ ಗಮನಕ್ಕೆ ಇಲ್ಲವೆಂದು ಹೇಳಲಾಗುತ್ತಿದ್ದು ಇದರಲ್ಲಿ ವ್ಯದ್ಯಕೀಯ ಸಚಿವರ ಪಾತ್ರ ವಿದೆಯಾ ಎಂದು ಕೇಳಿದರು
ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕ್ ಮಾತನಾಡಿ ಸದರಿ ಜಾಗೆಯು ಪುರಸಭೆಯ ವ್ಯಾಪ್ತಿಯಲಿ ಬರುತ್ತಿತ್ತು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿದ್ದರೆ ಶಿಕ್ಷಣಕ್ಕೆ ತೊಂದರೆಯಾಗುತಿತ್ತು ಆದರೆ ಶಿಕ್ಷಣಕ್ಕೆ ದೊರಕಿದ್ದು ಹೆಚ್ಚು ಅನುಕೂಲವಾಗಿದೆ ಎಂದರು ಅಲ್ಪಸಂಖ್ಯಾತ ಇಲಾಖೆ ತಾಲೂಕಾಧಿಕಾರಿ ಷಡಕ್ಷರಯ್ಯ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಅಯ್ಯಪ್ಪ ಮಾಳೂರು, ಮುದಕಪ್ಪನಾಯಕ ಪಿಎಲ್ಡಿ ಬ್ಯಾಂಕ ಅಧ್ಯಕ್ಷ ಬಸನಗೌಡ ಮೇಟಿ, ನಾರಾಯಣಪ್ಪನಾಯ್ಕ, ಶಶಿಧರ ಪಾಟೀಲ್, ಬಂದೇನವಾಜ್ ಅಬ್ದುಲ್ ಗುತ್ತಿಗೆದಾರ ನಿಂಗಯ್ಯ ಹೊಸಮನಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article