ಅನುಮಾನಾಸ್ಪದ ಸಾವು ತನಿಖೆಗೆ ಸರಕಾರಿ ನೌಕರರ ಸಂಘ ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಮಸ್ಕಿ ತಾಲೂಕಿನ ಮೆದಕಿನಾಳ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞ ಮಂಜುನಾಥ ಸಾವು ಅನುಮಾನಾಸ್ಪದವಾಗಿದ್ದು ಕೂಡಲೆ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕಾ ನೌಕರರ ಸಂಘ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿತು
ಮಸ್ಕಿ ತಾಲೂಕಿನ ಮೆದಕಿನಾಳ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಹಿರಿಯ ಪ್ರಯೋಗಶಾಲಾ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ದಿನಾಂಕ ಮೇ೩ರಂದು ಕಾಣೆಯಾಗುತ್ತಾರೆ ಮೇ೫ರಂದು ಸೋಮವಾರ ಮಧ್ಯಾಹ್ನ ಅವರ ಮೃತದೇಹವು ಠಾಕೂರ ಲೇಔಟ್ ಮಸ್ಕಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬರುತಿದ್ದು ಅವರ ಸಾವಿನ ತನಿಖೆಯನ್ನು ನಡೆಸಿ ನೊಮದ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸವಾಗಬೇಕು
ಆರೋಗ್ಯ ಇಲಾಖೆಯಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಮಹಿಳಾ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಕೆಲಸಲ ಅಂತಹ ಮಹಿಳಾ ಸಿಬ್ಬಂದಿಗಳ ಮೇಲೆ ಹಲ್ಲೆಗಳು ಅವಾಚ್ಯ ಶಬ್ದಗಳ ನಿಂದನೆ ವಯದ್ಯರ ಮೇಲೆ ನಿಂದನೆಯAತಹ ಪ್ರಕರಣಗಳು ಸಾಕಷ್ಟು ನಡೆದಿವೆ ನಡೆಯುತ್ತಿವೆ ಅವುಗಳ ನಿಯಂತ್ರಣಕ್ಕಾಗಿ ರಾತ್ರಿ ಪಾಳೆಯ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಬೇಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗಸ್ತು ತಿರುಗುವಂತಾಗಬೇಕು ಎಮದು ಬರೆದ ಮನವಿಯನ್ನು ಸರಕಾರಿ ನೌಕರರ ತಾಲೂಕಾಧ್ಯಕ್ಷ ಹಾಜಿಬಾಬು ಕಲ್ಯಾಣಿ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಅಮರೇಶಪ್ಪ ಹೂನೂರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಡಾ ರುದ್ರಗೌಡ ಪಾಟೀಲ್, ಡಾ ದಿಗಂಬರ,ಡಾ ಶ್ವೇತಾ ಹುಲ್ಲಳ್ಳಿ, ಸಂಘದ ರಾಮಕೃಷ್ಣ ಅಮರಪ್ಪಸಾಲಿ, ಹನಮಂತ್ರಾಯ, ಶಟ್ಟೆಪ್ಪ ನಾಯಕ, ವೀರೇಶ, ಗುರಮ್ಮ, ಸಾವಿತ್ರಮ್ಮ ಸುನಿಲಾ ಗಂಗಾಧರ, ಅಬ್ದುಲ್ ರವೂಫ್ ಹಾಗೂ ಮೃತ ಮಂಜುನಾಥನ ಪತ್ನಿ ಸೇರಿದಂತೆ ನೂರಾರು ನೌಕರರು ಇದ್ದರು