ಖಾಲಿಚೀಲ ತೂಕದ ವ್ಯತ್ಯಾಸ ಕೇಳಲು ಹೋದ ರೈತಸಂಘದ ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡೂರು ಮೇಲೆ ಗೂಂಡಾ ವರ್ತನೆ!!

Laxman Bariker
ಖಾಲಿಚೀಲ ತೂಕದ ವ್ಯತ್ಯಾಸ ಕೇಳಲು ಹೋದ ರೈತಸಂಘದ ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡೂರು ಮೇಲೆ ಗೂಂಡಾ ವರ್ತನೆ!!
WhatsApp Group Join Now
Telegram Group Join Now

ಎಪಿಎಂಸಿಯಲ್ಲಿ ರೈತರ ಹಾಗೂ ವರ್ತಕರ ನಡುವೆ ವಾಗ್ವಾದ
ಖಾಲಿಚೀಲ ತೂಕದ ವ್ಯತ್ಯಾಸ ಕೇಳಲು ಹೋದ ರೈತಸಂಘದ ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡೂರು ಮೇಲೆ ಗೂಂಡಾ ವರ್ತನೆ!!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ತಾಲೂಕಿನ ಎಪಿಎಂಇಸಿಗಳಲ್ಲಿ ರೈತರ ಮಾಲನ್ನು ತೂಕ ಮಾಡುವಾಗ ಸೆಣಬಿನ ಚೀಲದ ಬದಲಿಗೆ ಪ್ಲಾಸ್ಟಿಕ್ ಚೀಲಗಳನ್ನು ಹಾಕಿ ತೂಕ ಮಾಡುತ್ತಿದ್ದು ಇದರಿಂದ ರೈತರಿಗೆ ಭಾರಿ ಅನ್ಯಾಯವಾಗುತ್ತಿದೆ ಎಂದು ರೈತಸಂಘದ ತಾಲೂಕಾಧ್ಯಕ್ಷ ಮಲ್ಲಣ್ಣ ಕೊಳೂರು ಸಾ ಗೌಡೂರುರವರು ಕೇಳಲು ಹೋದಾಗ ತಾಲೂಕಾಧ್ಯಕ್ಷ ಮಲ್ಲಣ್ಣನ ಮೇಲೆ ಕೆಲವರು ಗೂಂಡಾವರ್ತನೆ ಮಾಡಿದ್ದಾರೆಂದು ಮಲ್ಲಣ್ಣ ಗೌಡೂರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ

ಘಟನೆಯ ಹಿನ್ನೆಲೆ: ತಾಲೂಕಿನ ಎಪಿಎಂಸಿಗಳಲ್ಲಿ ರೈತರ ಮಾಲುಗಳನ್ನು ಖರೀದಿಸಿ ತೂಕ ಮಾಡುವಾಗ ಒಂದು ಕ್ವಿಂಟಲ್ ಗೆ ಸುಮಾರು ೩ಕೆಜಿ ಸೂಟ್ ಮುರಿಯಲಾಗುತ್ತದೆ ಇದರಲ್ಲಿ ತಾವು ತೂಕ ಮಾಡುವಾಗ ಗೋಣಿಚೀಲಗಳನ್ನು ತೂಕಕ್ಕೆ ಬಳಸಬೇಕು ಆದರೆ ಅಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತೂಕಕ್ಕೆ ಬಳಸುತ್ತಾರೆ ಇದರಿಂದ ರೈತರ ಮಾಲು ನಷ್ಟವಾಗುತ್ತದೆ ಆ ನಷ್ಟವನ್ನು ತಡೆಯಬೇಕಾದರೆ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಗೋಣಿಚೀಲಬಳಸಬೇಕೆಂದು ರೈತಸಂಘದ ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡೂರು ಹಾಗೂ ಅವರ ಸಂಘಟನೆಯವರು ಎಪಿಎಂಇಸಿ ಗೆ ತೆರಳಿ ಮೊದಲು ತೂಕಮಾಡುವುದನ್ನು ವೀಕ್ಷಿಸಿ ನಂತರ ವಿಷಯವನ್ನು ಎಪಿಎಂಸಿಯ ಕಾರ್ಯದರ್ಶಿ ವಿಚಾರಿಸಿದ್ದಾರೆ ತೂಕದಲ್ಲಿ ಯಾವ ಚೀಲದ ತೂಕ ಹಾಕಬೇಕು ಎಂದು ಅದಕ್ಕೆ ಕಾರ್ಯದರ್ಶಿಯವರು ಗೋಣಿಚೀಲ ಹಾಕಬೇಕು ಹಾಗೆ ಹಾಕಲಾಗುತ್ತದೆ ಎಂದು ಸಮಜಾಯಿಸಿ ನೀಡಿದ್ದಾರೆ ಹಾಗಾದರೆ ತೋರಿಸಿ ಎಂದು ತೂಕ ಮಾಡುವಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಅಲ್ಲಿ ತೂಕದಲ್ಲಿ ಪ್ಲಾಸ್ಟಿಕ ಚೀಲ ಹಾಕುವುದು ಕಂಡುಬAದಿದೆ ಇದನ್ನೆ ಪ್ರಶ್ನೆ ಮಾಡಿದಾಗ ವರ್ತಕರು ನಾವು ತೂಕ ಮಾಡುವುದಿಲ್ಲವೆಂದು ಸ್ಥಗಿತಗೊಳಿಸಿ ರೈಥಸಂಘದವರ ಮೇಲೆ ವಾಗ್ವಾದ ನಡೆಸಿದ್ದಾರೆ ಅಲ್ಲದೆ ಸದರಿ ಸಂದರ್ಭದಲ್ಲಿ ತಾಲೂಕಾಧ್ಯಕ್ಷನ ಮೇಲೆ ಕೆಲವರಿಂದ ಗೂಂಡಾವರ್ತನೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ
ವಿಡಿಯೋ ಡಿಲಿಟ್ ಮಾಡಿಸಿದ ವರ್ತಕರು: ಘಟನೆ ನಡೆಯುತ್ತಿರುವುದನ್ನು ರೈತಸಂಘದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ವಿಡಿಯೋ ಮಾಡಿರುವುದರನ್ನು ಗಮನಿಸಿದ ವರ್ತಕರು ಆತನನ್ನು ಬೆದರಿಸಿ ಮೊಬೈಲ್ ಕಸಿದುಕೊಂಡು ಘಟನೆಯನ್ನು ವಿಡಿಯೋ ಮಾಡಿರುವುದನ್ನು ಡಿಲಿಟ್ ಮಾಡಿಸಿದ್ದಾರೆಂದು ತಾಲೂಕಾಧ್ಯಕ್ಷ ಮಲ್ಲಣ್ಣ ಆರೋಪಿಸುತ್ತಾರೆ
ಟೆಂಡರ್ ಪ್ರಕ್ರಿಯೆ ಬಂದ್: ತಾಲೂಕಿನ ಎಪಿಎಂಸಿಯಲ್ಲಿ ರೈತರ ಮಾಲುಗಳನ್ನು ವರ್ತಕರು ಟೆಂಡರ್ ಮೂಲಕ ನಡೆಸುವುದನ್ನು ಬಂದ್ ಮಾಡಲಾಗಿದ್ದು ಇಲ್ಲಿ ಖುಷಿ ಖರೀದಿಯನ್ನು ನಡೆಸಲಾಗುತ್ತಿದೆ ಒಬ್ಬ ವರ್ತಕ ನಿಗದಿ ಪಡಿಸಿದ ರೇಟನ್ನೆ ಎಲ್ಲಾ ವರ್ತಕರು ಸ್ವಲ್ಪ ಹೆಚ್ಚುಕಡಿಮೆ ಖರೀದಿ ಮಾಡುತ್ತಾರೆ, ತೂಕದಲ್ಲಿ ಒಂದು ಕ್ವಿಂಟಲ್ ಗೆ ೩ಕೆಜಿ ಮುರಿಯಲಾಗುತ್ತದೆ ಬೇರೆಕಡೆ ಕಡಿಮೆ ಇದೆ ಅಲ್ಲದೆ ಕಮಿಷನ್ ನೂರಕ್ಕೆ ಎರಡು ರೂ ತೆಗೆದೆಕೊಳ್ಳುತ್ತಿದ್ದು ಅದುಕೂಡ ಬೇರೆಕಡೆ ಕಡಿಮೆ ಇದೆ ಹೀಗೆ ನಿರಂತರವಾಗಿ ರೈತರಿಗೆ ತೂಕದಲ್ಲಿ ಹಾಗೂ ಕಮಿಷನ್ ಹಣದಲ್ಲಿ ಮೋಸವಾಗುತ್ತಿದೆ ಇದನ್ನು ತಡೆಯಬೇಕೆಂದು ರೈತಸಂಘದ ತಾಲೂಕಾಧ್ಯಕ್ಷ ಎಪಿಎಂಸಿಗೆ ತೆರಳಿದ್ದರು
ಮುದಗಲ್ ಎಪಿಎಂಸಿಯಲ್ಲಿ ಸಣ್ಣಬಸ್ಯಾ,ದೊಡ್ಡಬಸ್ಯಾ ತೂಕ: ಇದೇನು ಅಂತೀರಾ ಮುದಗಲ್ ಎಪಿಎಂಇಸಿಯಲ್ಲಿ ತೂಕದಲ್ಲಿ ಭಾರಿಮೋಸಮಾಡಲಾಗುತ್ತಿದೆ ಎಂದು ತಾಲೂಕಾಧ್ಯಕ್ಷ ಮಲ್ಲಣ್ಣ ಆರೋಪಿಸುತ್ತಾ ಅಲ್ಲಿ ತೂಕದ ಬಗೆಗೆ ತಿಳಿದವರು ಹೋದರೆ ಸಣ್ಣಬಸ್ಯಾ ತೂಕ ಅಂತಾರAತೆ ಅಂದರೆ ಕಡಿಮೆ ಸೂಟ್ ಮುರಿಯುವುದು ಮುಗ್ದ ರಐತರು ಹೋದರೆ ದೊಡ್ಡ ಬಸ್ಯಾ ಅಂದರೆ ಹೆಚ್ಚಿನ ಸೂಟ್ ಮುರಿಯುವುದು ನಡೆಯುತ್ತಿದೆಯಂತೆ ಹೇಳುತ್ತಾರೆ
ಈ ಸಂದರ್ಭದಲ್ಲಿ ರೈತಸಂಘದ ನಿಂಗಪ್ಪ, ಅಮರೇಶಪ್ಪ ಅಳ್ಳಳ್ಳಿ ಹಟ್ಟಿ, ಕುಮಾರಸ್ವಾಮಿ, ಯಂಕೋಬ ತಾಳಿಕೋಟಿ, ಆದಪ್ಪ ಸೇರಿದಂತೆ ಇದ್ದರು
ನ್ಯಾಯ ಕೇಳಲು ಹೋದ ನನಗೆ ವರ್ತಕರು ಕೆಲವರಿಂದ ನನ್ನ ಮೇಲೆ ಗೂಂಡಾವರ್ತನೆ ಮಾಡಿಸಿದ್ದು ನನ್ನ ಮೇಲೆ ಕೈ ಮಾಡಲು ಸಂಚು ನಡೆದಿತ್ತು ಸದರಿ ವಿಷಯವನ್ನು ಜಿಲ್ಲಾ ಹಾಗೂ ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದು ಹೋರಾಟವನ್ನು ರೂಪಿಸಲಾಗುವುದು”-ಮಲ್ಲಣ್ಣ ಕೋಳೂರು ಗೌಡೂರು ರೈತಸಂಘದ ತಾಲೂಕಾಧ್ಯಕ್ಷರು

WhatsApp Group Join Now
Telegram Group Join Now
Share This Article