ದೇವರಗಡ್ಡಿಯಲ್ಲಿ ಗಡ್ಡಿಗದ್ದೆಮ್ಮದೇವಿ ಅಕ್ಕಿಪಾಯಸ ಪವಾಡ ಸದೃಶ್ಯ ಕಾರ್ಯಕ್ರಮ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ರೋಡಲಬಂಡಾ(ಯುಕೆಪಿ) ಹತ್ತಿರದ ದೇವರಗಡ್ಡಿಯಲ್ಲಿ ಜಾತ್ರಾ ನಿಮಿತ್ಯವಾಗಿ ಗಡ್ಡಿಗದ್ದೆಮ್ಮದೇವಿಯ ಅಕ್ಕಿಪಾಯಸ ಕಾರ್ಯಕ್ರಮ ನಡೆಯಿತು
ತಾಲೂಕಿನ ಕೃಷ್ಣಾನದಿ ತೀರದ ರೋಡಲಬಂಡಾ(ಯುಕೆಪಿ)ಯ ಹತ್ತಿರದ ಗಡ್ಡಿಗದ್ದೆಮ್ಮದೇವಿಯ ಜಾತ್ರಾ ನಿಮಿತ್ಯವಾಗಿ ಶನಿವಾರ ರಾತ್ರಿ ಅಕ್ಕಿಪಾಯಸ ಕಾರ್ಯಕ್ರಮ ನಡೆಯಿತು
ದೇವಿಯ ಪೂಜಾರಿಗಳು ಒಲೆಯಮೇಲೆ ಕುದಿಯುವ ಅಕ್ಕಿಪಾಯಸದ ಸುಡುವ ಗಡಿಗೆಯನ್ನು ಬರಿಗೈಯಿಂದಲೇ ದೇವಿಯ ಹತ್ತಿರ ತೆಗೆದುಕೊಂಡು ಹೋಗಿ ನೈವೇದ್ಯ ಮಾಡಿದರೆ ಭಕ್ತರು ಅಕ್ಕಿಪಾಯಸಕ್ಕೆ ಮಾಡಿದ ಒಲೆಗುಂಡು ಹಾಗು ಬೆಂಕಿಯನ್ನುಕೈಯಿಂದಲೇ ಎತ್ತಿಹಾಕುವ ಪವಾಡ ಇಲ್ಲಿ ನಡೆಯಿತು ಸೇರಿದ ಭಕ್ತರು ಈ ಪವಾಡವನ್ನು ಕಣ್ತುಂಬಿಕೊಳ್ಳುವುದು ಕಂಡುಬಂತು