ಈಚನಾಳ:ನಿರ್ಮಾಣವಾಗದ ವಾಲಿಬಾಲ್ ಗ್ರೌಂಡ್ ಗೆ, ನಾಲ್ಕು ಲಕ್ಷ ಹಣ ಖರ್ಚು,ಕ್ರಮ ಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಈಚನಾಳ ಗ್ರಾಮದ ಸರಕಾರಿ ವಸತಿ ನಿಲಯದ ಹತ್ತಿರ ಉ,ಖಾ ಯೋಜನೆಯಲ್ಲಿ ವಾಲಿಬಾಲ್ ಅಂಕಣ(ಗ್ರೌಂಡ್) ನಿರ್ಮಾಣ ಕಾಮಗಾರಿಗೆ ನಾಲ್ಕುಲಕ್ಷ ಹಣ ಖರ್ಚು ಮಾಡಿದ್ದರು ಗ್ರಾಂಡ್ ನಿರ್ಮಾಣವಾಗಿಲ್ಲ ತಪ್ಪಿತಸ್ಥರ ಮೇಲೆ ಸೂಕ್ತಕ್ರಮ ಜರುಗಿಸಬೇಕೆಂದು ಭೀಮಣ್ಣ ತಂ ಬಸಣ್ಣ ಕೆಸರಟ್ಟಿ ಒತ್ತಾಯಿಸಿದ್ದರು ಇದುವರೆಗೂ ಯಾವುದೆ ಕ್ರಮಜರುಗಿಸಿಲ್ಲವೆಂದು ಅವರು ಆರೋಪಿಸುತ್ತಾರೆ
ತಾಲೂಕಿನ ಈಚನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಚನಾಳ ಕ್ರಾಸ್ ನಲ್ಲಿರುವ ಸರಕಾರಿ ವಸತಿ ನಿಲಯದಲ್ಲಿ ವಾಲಿಬಾಲ್ ಅಂಕಣ ನಿರ್ಮಾಣ ಮಾಡಲು ೨೦೨೨-೨೩ನೇ ಸಾಲಿನಲ್ಲಿ ಮಂಜುರಿಯಾಗಿರುತ್ತದೆ ಕಾಮಗಾರಿ ಸಂಖ್ಯೆ:೧೫೨೩೦೦೨೦೦೫/ಎವಿ/ಜಿಐಎಸ್/೪೫೯೫೬೯ ಮೊತ್ತ ೪ಲಕ್ಷ ಕಾಮಗಾರಿಯ ಸ್ಥಳದಲ್ಲಿ ನಾಮಫಲಕವನ್ನು ಹಾಕಲಾಗಿದೆ ಆದರೆ ಅಲ್ಲಿ ಯಾವುದೆ ವಾಲಿಬಾಲ್ ಗ್ರೌಂಡ ನಿರ್ಮಾಣವಾಗಿಲ್ಲವೆಂದು ಆರೋಪಿಸಿ ಈಚನಾಳ ಗ್ರಾ,ಪಂ ವ್ಯಾಪ್ತಿಯ ಕೆಸರಟ್ಟಿ ಗ್ರಾಮದ ಭೀಮಣ್ಣ ಜಿ,ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ೧೯.೦೬,೨೦೨೫ರಲ್ಲಿ ಪತ್ರ ಬರೆಯುತ್ತಾರೆ ಸದರಿ ಕಾಮಗಾರಿಯ ಬಗೆಗೆ ಆರೋಪಗಳು ಬಂದಿದ್ದು ಅದನ್ನು ತನಿಖೆ ನಡೆಸಿ ಪರಿಶೀಲಿಸಿ ವರದಿ ಕಳುಹಿಸಲು ಸಿಇಓ ಜುಲೈ೨೪ ೨೦೨೫ರಂದು ತಾ,ಪಂ ಲಿಂಗಸಗೂರಿಗೆ ಪತ್ರ ಬರೆಯುತ್ತಾರೆ ಆದರೆ ಇದುವರೆಗೂ ಯಾವುದೆ ಕ್ರಮವಾಗಿಲ್ಲವೆಂದು ದೂರುದಾರ ಆರೋಪಿಸುತ್ತಾರೆ
ಕಾಮಗಾರಿ ಕಾಗಗದಲ್ಲಿದೆ ಸ್ಥಳದಲ್ಲಿ ಮಾಯ: ಈಚನಾಳ ಕ್ರಾಸ್ ಸರಕಾರಿ ವಸತಿ ನಿಲಯದಲ್ಲಿ ವಾಲಿಬಾಲ್ ಗ್ರೌಂಡ ನಿರ್ಮಾಣ ಕಾಮಗಾರಿ ಎಂದು ವಸತಿ ನಿಲಯದ ಮುಂದೆ ನಾಮಫಲಕ ಅಳವಡಿಸಲಾಗಿದೆ ಅಲ್ಲದೆ ದಾಖಲೆಯಲ್ಲಿಎನ್,ಎಮ್,ಆರ್ ಮೊತ್ತ ೪೮೬೬೪ ಪಾವತಿಯಾಗಿದೆ ಹಾಗೂ ಬಿಓಸಿ೩,೦೫೩೨೭ ಹಣ ಖರ್ಚು ಮಾಡಲಾಗಿದೆ ಆದರೆ ಸದರಿ ಸ್ಥಳದಲ್ಲಿ ಮಾತ್ರ ಯಾವುದೆ ವಾಲಿಬಾಲ್ ಅಂಕಣ ನಿರ್ಮಾಣವಾಗಿರುವುದಿಲ್ಲ ಎಂದು ಹೇಳಲಾಗುತ್ತಿದ್ದು ಸದರಿ ಕಾಮಗಾರಿಯನ್ನು ಓಂಬುಡ್ಸ್ ಪರ್ಸನ್ ಅಧಿಕಾರಿಗಳ ಮೂಲಕ ತನಿಖೆ ನಡೆಸಬೇಕು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಆದರೆ ಇದುವರೆಗೂ ಯಾವುದೆ ಕ್ರಮಜರುಗಿಸಿಲ್ಲವೆಂದು ದೂರುದಾರ ಭೀಮಣ್ಣ ಆರೋಪಿಸುತ್ತಾರೆ
“ಹೇಳಿಕೆ:ಉ,ಖಾ ಯೋಜನೆಯಲ್ಲಿ ತಾಲೂಕಿನಲ್ಲಿ ಕೆಲಸ ನಡೆದಿರುತ್ತವೆ ಯಾವ ಕೆಲಸ ಎಲ್ಲಿ ಹೇಗೆ ಎಂದು ಮಾಹಿತಿ ಇರುವುದಿಲ್ಲ ಕೆಲಸದ ದಿನಗಳಲ್ಲಿ ಅದರ ಬಗೆಗೆ ದಾಖಲೆಗಳನ್ನು ನೋಡಿ ನಂತರ ಮಾಹಿತಿ ನೀಡಲಾಗುವುದು-ವೆಂಕಟೇಶ ದೇಸಾಯಿ-ಸಹಾಯಕ ನಿರ್ದೆಶಕರು ಉ,ಖಾ ಯೋಜನೆ ತಾ,ಪಂ ಲಿಂಗಸಗೂರು