ಸಮಾಜ ಕಲ್ಯಾಣ ಅಧಿಕಾರಿ ಅವ್ಯವಹಾರ, ಅಮಾನತ್ ಗೆ ರೈತ ಸಂಘ ಒತ್ತಾಯ

Laxman Bariker
ಸಮಾಜ ಕಲ್ಯಾಣ ಅಧಿಕಾರಿ ಅವ್ಯವಹಾರ, ಅಮಾನತ್ ಗೆ ರೈತ ಸಂಘ ಒತ್ತಾಯ
WhatsApp Group Join Now
Telegram Group Join Now

ಸಮಾಜ ಕಲ್ಯಾಣ ಅಧಿಕಾರಿ ಅವ್ಯವಹಾರ, ಅಮಾನತ್ ಗೆ ರೈತ ಸಂಘ ಒತ್ತಾಯ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗುರ:ತಾಲೂಕಾ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಉಮೇಶ ಸಿದ್ನಾಳ ಭಾರಿ ಭ್ರಷ್ಟಚಾರ ಹಾಗೂ ಅವ್ಯವಹಾರ ಮತ್ತು ವಸತಿ ನಿಲಯಗಳ ಅವ್ಯವಸ್ಥೆ ಕಂಡು ಬಂದಿದ್ದು ಕೂಡಲೆ ಕ್ರಮ ಜರಗಿಸಿ ಅಧಿಕಾರಿ ಸೇವೆ ಅಮಾನತ್ತುಗೂಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಬರೆದ ಪತ್ರವನ್ನು ಸಹಾಯಕ ಅಯುಕ್ತ ಶಿಂದೆ ಅವಿನಾಶ ಅವರ ಮೂಲಕ ಸಲ್ಲಿಸಿದರು.
ತಾಲೂಕಿನಾದ್ಯಂತ ಇಲಾಖೆ ವ್ಯಾಪ್ತಿಯ ಪರಶಿಷ್ಟ ಜಾತಿ ವಸತಿ ನಿಲಯಗಳಿಗೆ ಸರಬುರಾಜ ಮಾಡುವ ಆಹಾರ ಗುತ್ತೆಗೆದಾರರೊಂದಿಗೆ ಶ್ಯಾಮೀಲಾಗಿ ಸಿದ್ನಾಳ ಹಣವನ್ನು ಲೂಟಿ ಹೊಡೆದಿದ್ದು ಅಲ್ಲದೆ ಭೋಜನಾ ವೆಚ್ಚ ಹೆಚ್ಚುವರಿ ಲೆಕ್ಕ ತೋರಿಸಿ ಅವ್ಯವಹಾರ ನಡೆಸಿದ್ದು ಕಾರಣ ಇವರ ಹಗರಣ ತನಿಖೆ ಮಾಡಿಸಿ ಕ್ರಮ ಜರಗಿಸಬೇಕು ಅಧಿಕಾರಿಯ ನಿರ್ಲಕ್ಷದಿಂದ ವಸತಿ ನಿಲಯದ ವಿದ್ಯಾರ್ಥಿಗಳು ಗುರಿ ಮುಟ್ಟುವಲ್ಲಿ ವಿಫಲರಾಗಿದ್ದಾರೆ
ಇಲಾಖೆಯ ಮಾಹಿತಿಯನ್ನು ಕೇಳಿದರೆ ತನ್ನ ಸ್ವಂತ ಮನೆಯ ಆಸ್ತಿಯಂತೆ ಕೊಡಲು ಬರುವುದಿಲ್ಲ ಗುಪ್ತವಾಗಿರುತ್ತದೆ ಎಂದು ಪಾರದರ್ಶಕತೆಯನ್ನು ಮರೆಮಾಚುತ್ತಾ ಕೇಳಲುಹೋದ ಸಾರ್ವಜನಿಕರಿಗೆ ಧಮಿಕಿ ಹಾಕುತ್ತಾನೆ
ತಾಲೂಕಿನಲ್ಲಿರುವ ಬಾಬುಜಗಜೀವನರಾಮ ಭವನಗಳು ಹಾಗೂ ವಿವಿಧ ಗ್ರಾಮಗಳಲ್ಲಿ ಅಂಬೇಡ್ಕರ್ ಭವನಗಳು ನಿರ್ಮಾಣಯಾಗಿರುವುದಿಲ್ಲ ಎಸ.ಸಿ ಸಮುದಾಯದ ಜನರ ಇರುವ ಪ್ರದೇಶದಲ್ಲಿ ಭವನಗಳ ನಿರ್ಮಾಣಕ್ಕೆ ಕ್ರಮªಹಿಸಿಲ್ಲ ಗ್ರಾ.ಪಂ ಹಾಗೂ ಪುರಸಭೆಗಳಲ್ಲಿನ್ನ ಪರಿಶಿಲನೆ ನಡೆಸಿ ವರದಿ ಮಾಡಿಲ್ಲ ಅಂಬೇಡ್ಕರ್ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಿಲ್ಲ ವಿಶೇಷ ಕೇಂದ್ರದ ನೆರವಿನ ಹಾಗೂ ಇನ್ನಿತರ ಅನುದಾನ ಭ್ರಷ್ಟಚಾರ ನಡೆದಿದೆ ಎನ್ನುವ ಬಲವಾದ ಆರೋಪಗಳು ಕೇಳಿಬರುತ್ತಿವೆ
ವಾರ್ಡನಗಳಿಗೆ ಧಮ್ಕಿ ಹಾಕುತ್ತಿದ್ದು ಇತ್ತಿಚಿಗೆ ಭೀಮಣ್ಣ ಎಂಬ ವಾರ್ಡನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮುಚ್ಚಿಹಾಕಲಾಗಿದೆ ಕಾರಣ ತನಿಖೆಗೆ ಒಳಪ ಡಿಸಬೇಕು ವಸತಿ ನಿಲಯಗಳ ಅನುದಾನ ಬಿಡುಗಡೆಗೆ ಸಂಬಂಧಿಸಿದ ವಾರ್ಡನಗಳಿಂದ ೬ರಿಂದ೭% ಕಮೀಷನ್ ಪಡೆಯುತ್ತಾರೆ ಎನ್ನಲಾಗುತ್ತಿದೆ ಸಹಾಯಕ ನಿರ್ದೇಶಕ ಸರಕಾರಕ್ಕೆ ತಪ್ಪು ಲೆಕ್ಕದ ಮಾಹಿತಿ ನೀಡುತ್ತಾ ಸರಕಾರದ ಹಣ ಕಬಳಿಸುತ್ತಿದ್ದು ಕಾರಣ ಸದರಿ ಅಧಿಕಾರಿಯ ವಿರುದ್ಧ ಸಮಗ್ರ ತನಿಖೆ ನಡೆಸಿ ಸೇವೆಯಿಂದ ಅಮಾನತ್ತುಗೊಳಿಸಬೇಕು ಮತ್ತು ಆತನ ಬೇನಾಮಿ ಆಸ್ತಿಯ ತನಿಖೆಯಾಗಬೇಕು ಎಂದು ಒತ್ತಾಯಿಸಿದರು
ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶಂಕರ ಪವಾರ, ಗ್ರಾಮ ಘಟಕದ ಅಧ್ಯಕ್ಷ ಭೀಮಪ್ಪ ಕಾರಬಾರಿ,ಶೇಠಪ್ಪ ನಾಯ್ಕ, ಲಾಲಪ್ಪ ನಾಯ್ಕ, ರಡ್ಡೆಪ್ಪ ರಾಠೋಡ, ಮಲ್ಲೇಶ ನಾಯ್ಕ ಶಂಕರ ರಾಠೋಡ್ ಸೇರಿದಂತೆ ಇದ್ದರು.

WhatsApp Group Join Now
Telegram Group Join Now
Share This Article