ಪಹಣಿ ತಿದ್ದುಪಡಿ ವಿಳಂಬ,ಸಹಾಯಕ ಆಯುಕ್ತರ ಕಛೇರಿ ಮುಂದೆ ರೈತರ ಧರಣಿ

Laxman Bariker
ಪಹಣಿ ತಿದ್ದುಪಡಿ ವಿಳಂಬ,ಸಹಾಯಕ ಆಯುಕ್ತರ ಕಛೇರಿ ಮುಂದೆ ರೈತರ ಧರಣಿ
WhatsApp Group Join Now
Telegram Group Join Now

ಪಹಣಿ ತಿದ್ದುಪಡಿ ವಿಳಂಬ,ಸಹಾಯಕ ಆಯುಕ್ತರ ಕಛೇರಿ ಮುಂದೆ ರೈತರ ಧರಣಿ

ಕಳೆದ ನಾಲ್ಕೈ ದು ವರ್ಷದಿಂದ ಅಲೆದರು ಸರಿಯಾಗದ ಪಹಣಿಗಳು, ತಮ್ಮದಲ್ಲದ ತಪ್ಪಿಗೆ ರೈತರ ಓಡಾಟ!!

ಲಂಚಕ್ಕೆ ಬೇಡಿಕೆ ಇಡುವ ಪ್ರ,ದ,ಸ ಮಲ್ಲಿಕಾರ್ಜುನ ರೈತರ ಆರೋಪ!!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಹಲವಾರು ರೈತರ ಪಹಣಿಯಲ್ಲಿ ಕೃಷ್ಣಭಾಗ್ಯ ಜಲನಿಗಮ ಇತ್ಯಾದಿಗಳಿಗೆ ಜಮೀನು ಪಹಣಿಯಲ್ಲಿ ಕಟ್ಟಾಗಿದ್ದು ಅದನ್ನು ಸರಿಪಡಿಸಿಕೊಡಬೇಕೆಂದು ರೈತರು ಕಳೆದ ನಾಲ್ಕೈ ದು ವರ್ಷದಿಂದ ಅಲೆದಾಡಿದರು ತಮಗೆ ಕೆಲಸವಾಗುತ್ತಿಲ್ಲವೆಂದು ಸಹಾಯಕ ಆಯುಕ್ತರ ಕಛೇರಿಯ ಬಾಗಿಲಿಗೆ ಕುಳಿತು ಧರಣಿ ನಡೆಸಿದ ಘಟನೆ ಜರುಗಿತು
ತಾಲೂಕಿನ ಚಿತ್ತಾಪುರ ಗ್ರಾಮದ ಸ,ನಂ೨೦೬ ಹಿಸ್ಸಾ ೩ರಲ್ಲಿ ೮ಎಕರೆಯಾಗುವ ಬದಲು ೬ ಎಕರೆ ೧೧ ಗುಂಟೆಯಾಗಿದೆ ಅದನ್ನು ಸರಿಪಡಿಸಬೇಕೆಂದು ೨೦೨೧ರಲ್ಲಿ ಅರ್ಜಿಕೊಡಲಾಗಿದೆ ಆದರೆ ಇದುವರೆಗೂ ಸರಿಯಾಗಿಲ್ಲ ವಾಸ್ತವದಲ್ಲಿ ಸ,ನಂ ೨೦೬ರ ಹಿಸ್ಸಾ ೨ರಲ್ಲಿ ೩ಎಕರೆ೧೪ ಗುಂಟೆ ಕಟ್ಟಾಗಬೇಕಾಗಿತ್ತು ಎಂದು ರೈತರು ಹೇಳುತ್ತಾ ಹಿಸ್ಸಾ ೩ರ ಎಂಟು ಎಕರೆಯಲ್ಲಿ ಕಡಿತವಾಗಬಾರದಾಗಿತ್ತು ಎನ್ನುತ್ತಾರೆ ನಮ್ಮ ಭೂಮಿಯ ಪಹಣಿ ಸರಿಪಡಿಸಿಕೊಡಭೇಕು ಎಂದು ಅರ್ಜಿ ಸಲ್ಲಿಸಿದರು ಇದುವರೆಗೂ ಸರಿಯಾಗಿಲ್ಲ
ರೈತರಾದ ಗಂಗಮ್ಮ ಗಂ ಅಮರಪ್ಪ ಚಿತ್ತಾಪುರ ಶಿವಾರ ಸಾ ಜಾಗಿರನಂದಿಹಾಳ, ಅಯ್ಯಣ್ಣ ಸಂಗಪ್ಪ ನೀರಲಕೇರಿ, ನಿಂಗಪ್ಪ ಭೀಮಪ್ಪ, ಈರಮ್ಮ ಗಂಡ ಅಮರಪ್ಪ ಈಚನಾಳ ಹೀಗೆ ಹಲವಾರು ರೈತರ ಪಹಣಿಗಳು ವ್ಯತ್ಯಾಸವಾಗಿದ್ದು ಅವುಗಳನ್ನು ಸರಿಪಡಿಸಿ ಮೊದಲಿಂತೆ ಮಾಡಿಕೊಡುವಂತೆ ಅರ್ಜಿಸಲ್ಲಿಸುತ್ತಾ ಬಂದರು ವಿಳಂಬವಾಗುತ್ತಾ ಬಂದಿದೆ ಎನ್ನಲಾಗುತ್ತಿದೆ ಅಲ್ಲದೆ ಇತ್ತೀಚೆಗೆ ೨೦೨೩ರಲ್ಲಿ ನಡೆದ ಜನತಾ ದರ್ಶನದಲ್ಲಿಯು ಸದರಿ ವಿಷಯವನ್ನು ಕಂದಾಯ ಇಲಾಖೆಯ ಗಮನಕ್ಕೆ ತಂದರು ಕೆಲಸವಾಗಿಲ್ಲ ಜನತಾದರ್ಶನಗಳು ನಾಮಾಕಾವಸ್ಥೆಯಾಗುತ್ತಿವೆಯಾ ಎಂದು ರೈತರು ಪ್ರಶ್ನೆ ಮಾಡುತ್ತಾರೆ
ಹಣಕೊಟ್ಟವರ ಕೆಲಸ ಮಾಡುವ ಪ್ರ,ದ,ಸ ಮಲ್ಲಿಕಾರ್ಜುನ:ಸಹಾಯಕ ಆಯುಕ್ತರ ಕಛೇರಿಯಲ್ಲಿ ಹಲವಾರು ವರ್ಷಗಳಿಂದ ಇಲ್ಲೆ ಟಿಕಾಣಿ ಹೂಡಿರುವ ಮಲ್ಲಿಕಾರ್ಜುನ ಎನ್ನುವಾತ ಸದರಿ ಸೆಕ್ಷನ್ ನೋಡುತಿದ್ದು ಈತನಿಗೆ ಹಣಕೊಟ್ಟರೆ ಮಾತ್ರ ಯಾವುದೆ ದಾಖಲೆಗಳನ್ನು ನೋಡದೆ ಕೆಲಸ ಮಾಡಿಕೊಡುತ್ತಾನೆ ಹಣನೀಡದಿದ್ದರೆ ಆ ದಾಖಲಾತಿ ಬೇಕು ಈ ದಾಖಲಾತಿ ಭೇಕು ಎಂದು ಓಡಾಡಿಸುತ್ತಾನೆ ಎನ್ನುವುದು ರೈತರ ಆರೋಪವಾಗಿದೆ
ಹದಿನೈದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಮಲ್ಲಿಕಾರ್ಜುನ:ರೈತಸಂಘದ ಶಿವಪುತ್ರಗೌಡ ಹೇಳುವ ಪ್ರಕಾರ ಗಂಗಮ್ಮ ಗಂ ಅಮರಪ್ಪ ಚಿತ್ತಾಪುರ ಸಾ ಜಾಗಿರನಂದಿಹಾಳ ಇವರ ಪಹಣಿಯನ್ನು ಸರಿಪಡಿಸಲು ಹದಿನೈದು ಸಾವಿರ ಬೇಡಿಕೆ ಇಟ್ಟಿದ್ದು ರೈತರು ೧೧ ಸಾವಿರಕೊಡುವ ಮಾತು ಒಪ್ಪಂದವಾಗಿದ್ದು ಅದರಂತೆ ಹಣ ನೀಡದಿದ್ದಾಗ ಈ ರೀತಿ ಅಲೆದಾಟ ಮಾಡಿಸುತ್ತಿದ್ದಾನೆಂದು ರೈತರು ಆರೋಪಿಸುತ್ತಾರೆ
ಇದರಂತೆ ತಾಲೂಕಿನ ಹಲವಾರು ರೈತರಿಗೆ ಮಲ್ಲಿಕಾರ್ಜುನ ಹಣದ ಬೇಡಿಕೆ ಇಟ್ಟಿದ್ದು ಕೂಡಲೇ ಆತನನ್ನು ಬೇರೆಡೆ ವರ್ಗಾವಣೆ ಮಾಡಬೇಕು ರೈತರ ಪಹಣಿಗಳು ಸರಿಪಡಿಸಬೇಕು ಎಂದು ಒತ್ತಾಯಿಸಿ ಧರಣಿ ನಡೆಸಿದರು
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ, ತಾಲೂಕಾಧ್ಯಕ್ಷ ದುರ್ಗಾಪ್ರಸಾದ ರಡ್ಡಿ, ಹನಮಂತ,ಶ್ರೀಶೈಲ ನೀರಲಕೇರಿ, ಭೀಮಣ್ಣ ಪೂಜಾರಿ, ಬಸಪ್ಪ, ಲಾಲಸಾಬ,ಆನಂದ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article