ರೈತರ ವಿರೋಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೊಲೀಸ ಬಂದೋಬಸ್ತನಲ್ಲಿ ಆರಂಭ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ::ಪಟ್ಟಣದ ಸಮೀಪ ರಾಷ್ಟ್ರೀಯ ಹೆದ್ದಾರಿ ೧೫೦ಎ ರಸ್ತೆ ಪಕ್ಕದ ರೈತರು ಕೋರ್ಟನಿಂದ ತಂದಾ ತಡೆಯಾಜ್ಞಾ ತೆರುವುಗೊಳಿಸಿ ಪೊಲೀಸ ಅಧಿಕಾರಿಗಳ ಬಂದೋಬಸ್ತನಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಯಿತೆಂದು ರಾಷ್ಟೀಯ ಹೆದ್ದಾರಿ ಕಾರ್ಯನಿರ್ವಾಹಕ ಅಭಿಯಂತರರು ವಿಜಯ ಪಾಟೀಲ್ ತಿಳಿಸಿರುವರು.
ಜೇವರ್ಗಿಯಿಂದ ಚಾಮರಾಜನಗರಕ್ಕೆ ಹೋಗು ರಾಷ್ಟ್ರೀಯ ಹೆದ್ದಾರಿ ಲಿಂಗಸುಗೂರ ಸಮೀಪ ಅಂದಾಜು ೨.೮ ಕಿ.ಮಿ ರಸ್ತೆ ಕಾಮಗಾರಿಗೆ ರೈತರು ತಡೆ ತಂದಿದ್ದರು ವಿಶೇಷ ಭೂಸ್ವಾಧೀನ ಅಧಿಕಾರಿ ಕ್ಯಾಪ್ಟನ್ ಶ್ರೀನಿವಾಸ ಹಾಗೂ ಜಿಲ್ಲಾಡಳಿತ ರೈತರ ತಡೆಜ್ಞಾನೆಯನ್ನು ತೆರುವುಗೂಳಿಸಿದರಿಂದ ಗುರುವಾರ ಕಾಮಗಾರಿ ಪುನರಾರಂಭಿಸಿದ್ದು.
ರಾಷ್ಟ್ರೀಯ ಹೆದ್ದಾರಿ ಎಇಇ ವಿವೇಕ್, ಗೋಪಾಲ, ಕೃಷ್ಣಮೂರ್ತಿ ಹಾಗೂ ತಹಶಿಲ್ದಾರ ಸತ್ಯಮ್ಮ, ಡಿವೈಎಸಪಿ ದತ್ತಾತ್ರೇಯ ಕಾರ್ನಾಡ ಸಿಪಿಐ ಪುಂಡಲಿಕ ಪಟ್ಟಾತರ, ಐಎಸ ಪ್ರಬೇಷನರಿ ಅಧಿಕಾರಿಗಳು ಇದ್ದರು.
ರೈತರ ಮನವಿ- ರಾಷ್ಟ್ರೀಯ ಹೆದ್ದಾರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ದೊಡ್ಡಪ್ಪ ಸಾಹುಕಾರ ವಿಜಯದಾಸ, ಕುಪ್ಪಣ್ಣ ಇತರರು ಮನವಿ ಸಲ್ಲಿಸಿದಾಗ ವಿಶೇಷ ಭೂಸ್ವಾಧಿನ ಅಧಿಕಾರಿ ಕ್ಯಾಪ್ಟನ್ ಶ್ರೀನಿವಾಸ ರಸ್ತೆಗೆ ಹೋದ ಜಮೀನಿನ ಪರಿಹಾರ ಹಣವನ್ನು ನ್ಯಾಯಾಲಯದಲ್ಲಿ ಠೇವuಗೆ ಇಡ್ಡಲಾಗಿದೆ ಎಂದು ತಿಳಿಸಿದರು.