ನಂದವಾಡಗಿ ಏತ ನೀರಾವರಿ ಕಾಮಗಾರಿ ವಿಳಂಬ. ಹೋರಾಟ ಸಮಿತಿ ನೇತೃತ್ವದಲ್ಲಿ ರೈತರ,ಗುತ್ತಿಗೆದಾರರ ಸಭೆ:
ರೈತರು ಸಹಕಾರ ನೀಡಿದರೆ ೬ ತಿಂಗಳಲ್ಲಿ ಕಾಮಗಾರಿ ಪೂರ್ಣ ಭರವಸೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು ಮಾ೨೨: ನಂದವಾಡಗಿ ಏತನೀರಾವರಿ ಕಾಮಗಾರಿಯು ಮೊದಲನೆ ಹಂತದ ಕಾಮಗಾರಿಯಲ್ಲಿ ಸ್ವಲ್ಪ ವಿಳಂಭವಾಗಿದ್ದು ಎರಡನೆ ಹಂತದ ಕಾಮಗಾರಿಯಲ್ಲಿ ರೈತರೊಬ್ಬರ ಅಡೆತಡೆ ಇದೆ ಹಾಗೆ ಮೂರನೆ ಹಂತದ ಕಾಮಗಾರಿಯಲ್ಲಿಯು ರೈತರು ಸಹಕಾರ ನೀಡಿದರೆ ಕಾಮಗಾರಿಯು ಬಹುಬೇಗನೆ ಪೂರ್ಣಗೊಳುವುದೆಂದು ಅಧಿಕಾರಿ ಎಇಇ ಮಲ್ಲಪ್ಪ ಹಾಗೂ ೩ನೇ ಹಂತದ ಗುತ್ತಿಗೆದಾರರಾದ ಕರಿಯಪ್ಪ ವಜ್ಜಲ್ ಭರವಸೆಯನ್ನು ನೀಡಿದರು
ಕಳೆದೆರಡು ದಿನಗಳಿಂದ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ ನೇತೃತ್ವದಲ್ಲಿ ರೈತರು ಯೋಜನಾ ಪ್ರದೇಶದ ಭೇಟಿ ನೀಡಿ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸುವಂತೆ ಯೋಜನಾ ಪ್ರದೇಶದ ಕಾಮಗಾರಿ ವೀಕ್ಷಣೆ ನಡೆಸಿ ಕೆಬಿಜೆಎನ್‌ಎಲ್ ಹಾಗೂ ಗುತ್ತಿಗೆದಾರರ ಒತ್ತಡ ಹಾಕುತ್ತಿದ್ದಾರೆ.
ಜಾಕವೆಲ್ ಪಂಪಹೌಸ್ ಕಾಮಗಾರಿಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ವಿಳಂಭದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು ಶನಿವಾರ ಕಸಬಾ ಲಿಂಗಸಗೂರು ಬಳಿ ಬೆಳಗ್ಗೆ ೩ನೇ ಹಂತದ ಗುತ್ತಿಗೆ ಪಡೆದ ಎನ್.ಡಿ ವಡ್ಡರ್ ಕಂಪನಿ ಸ್ಥಳಕ್ಕಾಗಮಿಸಿದ ಸಂತೆಕೆಲ್ಲೂರು, ಮಟ್ಟೂರು, ಸರ್ಜಾಪೂರ, ಗೆಜ್ಜಲಗಟ್ಟಾ, ಅಂಕುಶದೊಡ್ಡಿ ಸೇರಿ ನಾನಾ ಗ್ರಾಮ ಪಂಚಾಯಿತಿಗಳ ನೂರಾರು ರೈತ ಮುಖಂಡರು ಕಾಮಗಾರಿ ವಿವರವಾದ ಮಾಹಿತಿ ಪಡೆಯಲು ಮುಂದಾದರು.
ಈ ವೇಳೆ ಕಾಮಗಾರಿ ವಿಳಂಭ ಕೆಲವೆಡೆ ಕಾಮಗಾರಿ ಕಳಪೆ ಬಗ್ಗೆ ರೈತರು ಆರೋಪಿಸಿ ನಿಮ್ಮ ಕಂಪನಿಯಿAದ ಮುಖ್ಯ ಪೈಪಲೈನ್ (ರೈಸಿಂಗ್‌ಮೇನ್) ಹಾಗೂ ಪೈಪ ಅಳವಡಿಕೆ, ಪಂಪಹೌಸ್, ವಿದ್ಯುತ್ ಸ್ಟೇಷನ್ ಕಾಮಗಾರಿ ಬಾಕಿ ಉಳಿದಿವೆ. ೨೦೧೮ರಲ್ಲಿ ಆರಂಭವಾದ ಯೋಜನೆ ೨೦೨೨ ರಲ್ಲಿ ಪೂರ್ಣವಾಗಬೇಕಿತ್ತು. ಏಕೆ ಕಾಮಗಾರಿ ಪೂರ್ಣವಾಗಿಲ್ಲ ಈ ರೀತಿಯಾದರೆ ಇನ್ನು ೧೦ ವರ್ಷವಾದರೂ ನಮಗೆ ನೀರು ಬರುವುದಿಲ್ಲ ಕಾಮಗಾರಿ ವಿಳಂಭ ಧೋರಣೆ ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ಸಮಿತಿ ತಾಂತ್ರಿಕ ಸಮಿತಿ ಅಧ್ಯಕ್ಷ ಶರಣಗೌಡ ಬಸಾಪೂರ ಮತ್ತು ಕಾರ್ಯದರ್ಶಿ ರಮೇಶ ಶಾಸ್ತಿçà ಮಾತನಾಡಿ ಈಗಾಗಲೇ ಸರಕಾರ ನೀರಿನ ಹಚಿಚಿಕೆ ಮಾಡಿ ಹಣ ಕೂಡಾ ಬಿಡುಗಡೆಯಾಗಿದೆ. ತೊಂಡಿಹಾಳದಿAದ ನಂದವಾಡಗಿವರೆಗೆ ಮುಖ್ಯ ಪೈಪಲೈನ್ (ರೈಸಿಂಗ್‌ಮೇನ್) ಕಾಮಗಾರಿ ಮತ್ತು ಪಂಪ್‌ಹೌಸ್ ವಿದ್ಯುತ್ ಕಾಮಗಾರಿ ಎಲ್& ಟಿ ಕಂಪನಿ ಪೂರ್ಣಗೋಳಿಸಿದೆ. ಪ್ರಥಮ ಹಂತದ ಕಾಮಗಾತಿ ಪಡೆದ ಇಸ್ರೇಲ್ ಮೂಲದ ಥಾಲ್ ಮತ್ತು ಶೇ೬೦% ಮಾತ್ರ ಕಾಮಗಾರಿ ಪೂಣಗೊಳಿಸಿದೆ.ಅವರಿಗೆ ಹಾಗೂ ಶೇ ೮೦% ಕಾಮಗಾರಿ ಪೂರ್ಣಗೊಳಿಸಿದ ಎರಡನೇ ಹಂತದ ಗುತ್ತಿಗೆ ಪಡೆದ ಹೈದ್ರಾಬಾದನ ಮೇಘಾ ಕಂಪನಿ ಗುತ್ತೇದಾರರು ಹಾಗೂ ಅಧಿಕಾರಿಗಳಿಗೂ ಮೂರು ತಿಂಗಳ ಬೇಸಿಗೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ ತಮ್ಮ ಕಂಪನಿಯಿAದ ಬಾಕಿ ಉಳಿದ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ರೈತರ ಪರವಾಗಿ ಮನವಿ ಮಾಡಿದರು.
ಆಗ ಗುತ್ತಿಗೆದಾರರಾದ ಕರಿಯಪ್ಪ ವಜ್ಜಲ್ ಈಭಾಗದಲ್ಲಿ ನಮಗೆ ಕೆಲ ರೈತರಿಂದ ಅಡ್ಡಿಯಾಗಿದೆ. ಆಮೀನು ಅವಾರ್ಡ ಆಗಿದ್ದರೂ ಹೆಚ್ಚಿನ ಮೊತ್ತ ಕೊಡಿಸಲು ಕೇಳುತ್ತಿದ್ದಾರೆ. ಇದು ಸರಕಾರದ ಮಟ್ಟದಲ್ಲಿ ನಿರ್ಧಾರವಾಗ ಬೇಕು, ಕೆಲವೆಡೆ ರೈತರು ತಮಗೆ ಬರುವ ಹಣ ಪಡೆಯಲು ಮುಂದೆ ಬರುತ್ತಿಲ್ಲ ಇದರಿಂದ ಕೆಲಭಾಗದಲ್ಲಿ ಮಾತ್ರ ಕಾಮಗಾರಿ ವಿಳಂಭವಾಗಿದೆ. ರೈತರು ಸಹಕಾರ ನೀಡಬೇಕೆಂದು ಹೇಳಿದರು.
ಆಗ ಹೋರಾಟ ಸಮಿತಿ ಕಾರ್ಯದರ್ಶಿ ಎಚ್.ಬಿ ಮುರಾರಿ ಹಾಗೂ ಬಸವಂತರಾಯ ಕುರಿ ಮಾತನಾಡಿ ಅಂತಹ ಸಮಸ್ಯಗಳಿದ್ದರೆ ಸಮಿತಿ ಮುಖಂಡರಿಗೆ ಆಯಾ ಗ್ರಾಮದ ಮುಖಂಡರನ್ನು ಸಂಪರ್ಕಿಸಿ ಸಾಧ್ಯವಾದಷ್ಟು ಸಹಕಾರ ನೀಡುವುದಾಗಿ ರೈತರು ಹೆಚ್ಚಿನ ಪರಿಹಾರ ಬೇಕಾದರೆ ಈಗ ಬಂದಿರುವ ಹಣ ಪಡೆದು ಕಾಮಗಾರಿ ಆರಂಭಕ್ಕೆ ಅಡ್ಡಿ ಮಾಡದೆ ಕೋರ್ಟ ಮೊರೆಹೋಗಿ ಹೆಚ್ಚಿನ ಹಣ ಪಡೆಯಲು ಅವಕಾಶವಿದೆ. ಈಗ ಮೂರು ತಿಂಗಳು ಬೇಸಿಗೆ ಇರುವುದರಿಂದ ಟೆಂಡ್‌ರ್‌ನಲ್ಲಿ ಬಾಕಿ ಉಳಿದ ಪಂಪ್‌ಹೌಸ್ ವಿದ್ಯುತ್ ಸ್ಟೇಷನ್ ಸೇರಿ ಮುಖ್ಯ ಪೈಪ್‌ಲೈನ್ ಕಾಮಗಾರಿ ಪೂರ್ಣಗೋಳಿಸಿದರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಹನಿ ನೀರಾವರಿ ಅಥವಾ ಹರಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು ರೈತರು ಸಿದ್ದರಿದ್ದಾರೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಕೋರಿದರು.
ಆಗ ಕೆಬಿಜೆಎನ್‌ಎಲ್ ಎಇಇ ಮಲ್ಲಪ್ಪ ಆರು ತೀಮಗಳ ಅವಧಿಯಲ್ಲಿ ಮೂರನೇ ಹಂತದ ಗುತ್ತಿಗೆದಾರರ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಆಗ ರೈತರು ನೀವು ಪೂರ್ಣಗೊಳಿಸದಿದ್ದರೆ ಗುತ್ತಿಗೆ ಪಡೆದ ಕಂಪನಿ ಮುಂದೆ ಉಪವಾಸ ಸತ್ಯಾಗ್ರಹ ಚಳುವಳಿ ಮಾಡುವ ಎಚ್ಚರಿಕೆ ನೀಡಿದರು.
ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ ಪದಾಧಿಕಾರಿಗಳಾದ ಬಸವಂತಾರಾಯ ಕುರಿ, ಶರಣಗೌಡ ಬಸಾಪೂರ, ರಮೇಶ ಶಾಸ್ತಿçÃ, ಮಲ್ಲೇಶಗೌಡ ಮಟ್ಟೂರು, ಆದನಗೌಡ ಪಾಟೀಲ್, ಗುರುನಾಥರೆಡ್ಡಿ ದೇಸಾಯಿ, ಮಲ್ಲನಗೌಡ ಹಳ್ಳಿ, ರೈತ ಮುಖಂಡರಾದ ಕರಿಬಸನಗೌಡ ಬಸಾಪೂರ, ಚಂದ್ರಶೇಖರಪ್ಪ ವಂದ್ಲಿ, ವಿರುಪಾಕ್ಷಪ್ಪ ಹಂದ್ರಾಳ, ಅಮರಗುಂಡಪ್ಪ ಅರಳಳ್ಳಿ, ಸಿದ್ದನಗೌಡ, ವೆಂಕನಗೌಡ, ದೇವರೆಡ್ಡಿ, ಸಿದ್ರಾಮಪ್ಪ, ಶರಣಪ್ಪ ಸಾಹುಕಾರ, ಶರಣಪ್ಪ ಹೊಳೆಯಾಚಿ, ಶರಣಪ್ಪ ಉಮಲೂಟಿ, ಶೇಖರಯ್ಯ,, ದೇವಪ್ಪ, ಶಿವಕುಮಾರ, ಮಂಜುನಾಥ, ಸಿಂಗ್ ಸೇರಿ ನೂರಾರು ರೈತ ಮುಖಂಡರು ಇಲಾಖೆ ಮತ್ತು ಕಂಪನಿ ಅಧಿಕಾರಿ ವರ್ಗ ಇದ್ದರು.