ರೈತರ ಹಬ್ಬ ಮಣ್ಣೆತ್ತಿನ ಅಮವಾಸ್ಯೆಗೆ ಮಣ್ಣೆತ್ತಿನ ಮಾರಾಟ ಬಲುಜೋರು

Laxman Bariker
ರೈತರ ಹಬ್ಬ ಮಣ್ಣೆತ್ತಿನ ಅಮವಾಸ್ಯೆಗೆ ಮಣ್ಣೆತ್ತಿನ ಮಾರಾಟ ಬಲುಜೋರು
WhatsApp Group Join Now
Telegram Group Join Now

ರೈತರ ಹಬ್ಬ ಮಣ್ಣೆತ್ತಿನ ಅಮವಾಸ್ಯೆಗೆ ಮಣ್ಣೆತ್ತಿನ ಮಾರಾಟ ಬಲುಜೋರು

ಕಲ್ಯಾಣ ಕರ್ನಾಟಕ ವಾರ್ತೆ

(ಲಕ್ಷ್ಮಣ  ಬಾರಿಕೇರ್)
ಲಿಂಗಸಗೂರು:ಭಾರತ ಬಹುತ್ವದ ಆಚರಣೆಗಳ ದೇಶವಾಗಿದ್ದು ಇಲ್ಲಿ ವಿವಿಧ ಹಬ್ಬ ಹರಿದಿನ ಆಚರಣೆಗಳು ಸಹಜವಾಗಿ ನಡೆದುಬಂದಿವೆ ಅದರಂತೆರೈತರ ಹಬ್ಬ ಮಣ್ಣೆತ್ತಿನ ಅಮವಾಸ್ಯೆ ನಿಮಿತ್ಯವಾಗಿ ಮಾರುಕಟ್ಟೆಗೆ ವಿವಿಧ ರೀತಿಯ ಮಣ್ಣೆತ್ತುಗಳು ಬಂದಿದ್ದು ಅವುಗಳ ಖರಿದೀಯು ಬಲು ಜೋರಾಗಿಯೆ ನಡೆದಿದೆ

oplus_0

ಹೌದು ಭಾರತ ಬಹುತ್ವದ ದೇಶವಾಗಿದ್ದು ನಾನಾ ಸಂಸ್ಕೃತಿ ಆಚರಣೆಗಳು ಇಲ್ಲಿ ನಡೆದುಕೊಂಡು ಬರುತ್ತಿವೆ ಅಲ್ಲದೆ ರೈತರಿಗಾಗಿಯೆ ಹಲವಾರು ಹಬ್ಬಗಳಿದ್ದು ಅದರಲ್ಲಿ ಮಣ್ಣೇತ್ತಿನ ಅಮವಾಸ್ಯೆಗೆ ಬರುವ ಮಣ್ಣೆತ್ತಿನ ಹಬ್ಬ ರೈತರಿಗೆ ಬಹು ಸಂತಸದ ಹಬ್ಬವಾಗಿದೆ
ಮುಂಗಾರು ಮಳೆ ಸುರಿದು ನೆಲವೆಲ್ಲ ಹಸಿಯಾಗಿ ಬಿತ್ತನೆಗೆ ಹದಗಾಲವಾಗಿದ್ದು ಈ ಸಂದರ್ಭದಲ್ಲಿ ರೈತರು ತಮ್ಮ ಭೂಮಿ ಮತ್ತು ಎತ್ತುಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ ಅದರಂತೆ ಹದವಾದ ಮಣ್ಣನ್ನು ತಂದು ಅದರಿಂದ ಬಗೆಬಗೆಯ ಎತ್ತುಗಳನ್ನು ಮಾಡಿ ಅವುಗಳನ್ನು ಜಗಲಿಯಲಿಟ್ಟು ಪೂಜೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿಯಾಗಿದೆ
ಮೊದಲೆಲ್ಲ ರೈತರು ಹೊಲದಿಂದ ಜಿಗಿಯಾದ ಮಣ್ಣನ್ನು ತಂದು ತಾವೆ ಎತ್ತುಗಳನ್ನು ಮಾಡಿ ಜಗುಲಿಯ ಮೇಲೆ ಇಟ್ಟಿ ಪೂಜಿಸುವುದು ನಡೆದುಬಂದಿತ್ತುಆದರೆ ಇತ್ತೀಚೆಗೆ ಕುಂಬಾರರು ಮಣ್ಣನ್ನು ತಂದು ಅದರಿಂದಲೇ ಎತ್ತುಗಳನ್ನು ಮಾಡಿ ಮಾರಾಟಕ್ಕೆ ಇಡುತ್ತಾರೆ ಕೆಲವರು ಹೊತ್ತು ತಿರುಗಿ ಮಾರಾಟ ಮಾಡುತ್ತಾರೆ
ಮಣ್ಣಿನಿಂದಲೇ ಮಾಡಿ ನೈಸರ್ಗಿಕವಾಗಿರುವ ಎತ್ತುಗಳನ್ನು ಪೂಜೆ ಮಾಡಿದರೆ ಪರಿಸರಕ್ಕೆ ಯಾವುದೆ ಹಾನಿಯಾಗದು ಆದರೆ ಇತ್ತೀಚಗೆ ಪ್ಯಾರಿಸ್ ಆಫ್ ಪ್ಲಾಸ್ಟರ್ ಬಂದಿದ್ದು ಅದರಿಂದಲೆ ತಯಾರು ಮಾಡಲಾಗುತ್ತಿದೆ ನೋಡಲು ಸುಂದರವಾಗಿ ಕಂಡರು ಅವು ಪರಿಸರಕ್ಕೆ ಹಾನಿಯಾಗುವುದು ಖಂಡಿತ ಅದಕ್ಕಾಗಿ ರೈತರು ಅಂತಹ ಪ್ಯಾರಿಸ್ ಪ್ಲಾಸ್ಟರ್ ಎತ್ತು ತೆಗೆದುಕೊಳ್ಳದೆ ನೈಸರ್ಗಿಕವಾಗ ಮಣ್ಣಿನಿಂದ ಮಾಡಿದ ಎತ್ತುಗಳನ್ನೆ ಖರೀದಿಸುವದು ಸೂಕ್ತವಾದುದು
ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಎತ್ತುಗಳು:ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಣ್ಣಿನ ಎತ್ತುಗಳು ನೈಸರ್ಗಿಕವಾಗಿ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಜೋಡಿ ಎಪ್ಪತ್ತು ರೂಪಾಯಿಗಳು, ಪ್ಲಾಸ್ರ‍್ರ ನಿಂದ ತಯಾರಿಸಿದ ಸಣ್ಣ ಎತ್ತುಗಳಿಗೆ ಎಪ್ಪತ್ತು ರೂಪಾಯಿಗಳು ಅದರಲ್ಲಿ ಸ್ವಲ್ಪ ದೊಡ್ಡ ಸೈಜ್ ನೂರು ರೂಪಾಯಿಗಳು ಎರಡುನುರು ಮೂರುನೂರು ನಾಲ್ಕುನೂರು ಹೀಗೆ ಬಗೆಬಗೆಯ ಬೆಲೆಯಲ್ಲಿ ಎತ್ತುಗಳು ಮಾರಾಟವಾಗುತ್ತಿವೆ
ಮಣ್ಣೇತಿನ ಅಮವಾಸ್ಯೆಗೆ ಎತ್ತುಗಳ ಖರೀದಿ ಬಲು ಜೋರಾಗಿದ್ದು ಮಾರಾಟ ಭರಾಟೆಯಿಂದ ನಡೆಯುತ್ತಿದೆ
ಭೂಮಿತಾಯಿ ಮತ್ತು ಮಣ್ಣಿನ ಎತ್ತುಗಳ ಪೂಜಿಸಿ ಭೂಮಿಗೆ ಬೀಜಹಾಕುವ ರೈತನ ಕೆಲಸಕ್ಕೆ ಮಣ್ಣೆತ್ತು ಖುಷಿತರುವ ಹಬ್ಬವಾಗಿದೆ

WhatsApp Group Join Now
Telegram Group Join Now
Share This Article