ಭ್ರಷ್ಟಾಚಾರ ನಿರ್ಮೂಲನೆ ತೃಪ್ತಿಯಿಂದ ಹೊರತು ಕಠಿಣ ಶಿಕ್ಷೆಯಿಂದ ಅಲ್ಲ- ಸಂತೋಷ ಹೆಗಡೆ
ಕಾನೂನು ವ್ಯಾಪ್ತಿಯಲ್ಲಿ ಶ್ರೀಮಂತರಾಗಿ, ೮೧ವಯಸಿನಲ್ಲಿಯು೧೮೪೬ ಶಾಲೆಗಳಿಗೆ ಭೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಎಲ್ಲಡೆ ಭ್ರಷ್ಟಾಚಾರ ಎದ್ದು ಕಾಣುತ್ತಿದ್ದು ಅದರ ನಿಯಂತ್ರಣಕ್ಕೆ ತೃಪ್ತಿಯ ಮನಸಿನಿಂದ ಸಾಧ್ಯ ಹೊರತು ಕಾನೂನಿನಲಿ ಕಠಿಣ ಶಿಕ್ಷೆ ತರುವುದರಿಂದ ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟಿನಿ ನಿವೃತ್ತ ನ್ಯಾಯಾಧೀಶರಾದ ಸಂತೋಷ ಹೆಗಡೆಯವರು ಹೇಳಿದರು
ಅವರು ಕಾರ್ಯಕ್ರಮದ ನಿಮಿತ್ಯ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಚೀನಾದಲ್ಲಿ ಭಾರಿಭ್ರಷ್ಟಾಚಾರಗಳು ಕೇಳಿಬರುತ್ತಿವೆ ಅಲ್ಲಿ ಗಲ್ಲುಶಿಕ್ಷೆ ಕಾನೂನು ಇದೆ ಆದರು ಜನರು ಹೆದರುವುದಿಲ್ಲ ಭ್ರಷ್ಟಾಚಾರವನ್ನು ತಡೆಯಲು ಕ್ರಾಂತಿ ನಡೆಸಿದರೆ ರಣರಂಗವಾಗುತ್ತದೆ ಒಗ್ಗಟ್ಟು ಮುರಿದುಹೋಗುತ್ತದೆ ಅದಕ್ಕಾಗಿ ಆತ್ಮತೃಪ್ತಿಯೊಂದೆ ಇದಕ್ಕೆ ದಿವ್ಯೌಷಧವಾಗಿದೆ ವ್ಯಕ್ತಿ ಕೆಲಸಕ್ಕೆ ಸೇರುವಾಗ ಲಂಚಕೊಟ್ಟು ಸೇರುವುದು ಮತ್ತು ಹುದ್ದೆಯಲ್ಲಿದ್ದಾಗ ಲಂಚ ತೆಗೆದುಕೊಳ್ಳುವುದು ಇದರಿಂದ ಭ್ರಷ್ಟಾಚಾರ ನಿಲ್ಲುವುದಿಲ್ಲ ಹಾಗಂತ ಸನ್ಯಾಸತ್ವವನ್ನು ಹೇಳುವುದಿಲ್ಲ ಆಕಾಂಕ್ಷೆ ಇರಬೇಕು ಅದು ಕಾನೂನು ಚೌಕಟ್ಟಿನಲ್ಲಿ ಶ್ರೀಮಂತನಾಗಬೇಕು ದೊಡ್ಡ ನೌಕರಿ ಹಿಡಿಯಬೇಕು ಅದು ಮಹತ್ವಾಕಾಂಕ್ಷೆಯಾಗಿರಬೇಕು ಆದರೆ ಕಾನೂನು ವ್ಯಾಪ್ತಿಯಲ್ಲಿದ್ದರೆ ಮಾತ್ರ ಸಂತೃಪ್ತಿ ಇರುತ್ತದೆ ಅನ್ಯಮಾರ್ಗದಿಂದ ಶ್ರೀಮಂತನಾದವರನಿಗೆ ನಿದ್ದೆಯೆ ಬರುವುದಿಲ್ಲ ಯಾಕೆಂದರೆ ಯಾವ ಸಂದರ್ಭದಲ್ಲಿ ಯಾರು ದಾಳಿ ಮಾಡುತ್ತಾರೆ ಎನ್ನುವ ಭಯದಲ್ಲಿ ಜೀವನ ಕಳೆಯುತ್ತಿರುತ್ತಾರೆ ಅಂತವರಿಗೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ
ಭ್ರಷ್ಟಾಚಾರಕ್ಕೆ ತಡೆ ಇಲ್ಲವೇ ಎನ್ನುವ ಮಾತಿಗೆ ಉತ್ತರಿಸುತ್ತಾ ನಾವು ಇತಿಹಾಸವನ್ನು ಗಮನಿಸುತ್ತಾ ಬಂದರೆ ಇತಿಹಾಸ ಮರುಕಳಿಸುತ್ತಲೆ ಬಂದಿದೆ ಅಂತಹ ಕಾಲ ಮತ್ತೆ ಬರಬಹುದು ನನಗೆ ೮೧ ವಯಸಾಗಿದ್ದರು ಭ್ರಷ್ಟಾಚಾರದ ತಡೆಯ ಬಗೆಗೆ ಮಕ್ಕಳಿಗೆ ಹೇಳುತ್ತಾ ಬರುತ್ತಿದ್ದೇನೆ ಇದುವರೆಗೆ ಸುಮಾರು ೧೮೪೬ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅವರ ಮನಪರಿವರ್ತನೆಯ ಪಾಠವನ್ನು ಮಾಡುತ್ತಲೆ ಬಂದಿದ್ದೇನೆ ನನ್ನ ಪ್ರಯತ್ನವನ್ನು ಮಾಡುತ್ತಾ ಸಾಗುತ್ತಿದ್ದೇನೆ ಇದು ಒಂದಲ್ಲಾ ಒಂದು ದಿನ ಫಲಕೊಡುತ್ತದೆ ಎನ್ನುವ ಭರವಸೆಯು ನನಗಿದೆ
ರಾಜ್ಯದಲ್ಲಿ ಮೂಡಾ ಹಗರಣದಂತಹ ಹಗರಣಗಳು ನಡೆದಿದ್ದು ಅವುಗಳ ಸತ್ಯಾಸತ್ಯತೆ ಹೊರಬರಲು ತನಿಖಾತಂಡಗಳು ರಚನೆಯಾಗಿವೆ ತನಿಖೆಯಾಗಲಿ ಅದರಿಂದ ಸತ್ಯ ಏನು ಎನ್ನುವುದು ಹೊರಬರುತ್ತದೆ ಅದಕ್ಕಾಗಿ ಭ್ರಷ್ಟಾಚಾರ ಕಡಿವಾಣಕ್ಕೆ ತೃಪ್ತಿಯೆ ಮದ್ದು ಎನ್ನುವದು ನನ್ನ ನಿಲುವಾಗಿದೆ ಎಂದರು
ಈ ಸಂದರ್ಭದಲ್ಲಿ ತಾಲೂಕಾ ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಂಬಣ್ಣ ಕೆ, ವಕೀಲರ ಸಂಘದ ತಾಲೂಕಾಧ್ಯಕ್ಷ ಭೂಪನಗೌಡ ಪಾಟೀಲ್,ವಕೀಲರಾದ ಗಿರೀಶ ಜೋಶಿ, ನಾಗರಾಜ ಗಸ್ತಿ, ಚಂದ್ರಶೇಖರ, ಕರಿಯಪ್ಪ ವನ್ಜಿ, ಗಂಗನಗೌಡ ಬಿರಾದಾರ, ಸೇರಿದಂತೆ ಇದ್ದರು