ಈಚನಾಳ:ವಾಲಿಬಾಲ್ ಗ್ರೌಂಡ ಒಂದುಕಡೆ, ಅಧಿಕಾರಿ ಭೇಟಿ ಮತ್ತೊಂದು ಕಡೆ, ಕಾಮಗಾರಿ ಯಾವಕಡೆ..?

Laxman Bariker
ಈಚನಾಳ:ವಾಲಿಬಾಲ್ ಗ್ರೌಂಡ ಒಂದುಕಡೆ, ಅಧಿಕಾರಿ ಭೇಟಿ ಮತ್ತೊಂದು ಕಡೆ, ಕಾಮಗಾರಿ ಯಾವಕಡೆ..?
WhatsApp Group Join Now
Telegram Group Join Now

ಈಚನಾಳ:ವಾಲಿಬಾಲ್ ಗ್ರೌಂಡ ಒಂದುಕಡೆ, ಅಧಿಕಾರಿ ಭೇಟಿ ಮತ್ತೊಂದು ಕಡೆ, ಕಾಮಗಾರಿ ಯಾವಕಡೆ..?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಈಚನಾಳ ಗ್ರಾಮಪಂಚಾಯ್ತಿಯಲ್ಲಿ ಹುಡುಕಿದಂತೆಲ್ಲ ಹುಳುಕು ಎಂಬಂತೆ ಬಗೆದಷ್ಟು ಅಪರಾ ತಪರಾಗಳು ಹೊರಬರುತ್ತಿವೆ ವಾಲಿಬಾಲ್ ಗ್ರೌಂಡ ಹಗರಣ ಹೊರಬರುತ್ತಿರುವಂತೆ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದು ಕಾಮಗಾರಿ ಒಂದುಕಡೆ ಇವರು ಭೇಟಿ ಮತ್ತೊಂದುಕಡೆ ಎನ್ನಲಾಗುತ್ತಿದ್ದು ಕಾಮಗಾರಿ ಯಾವಕಡೆ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ


ಸದರಿ ಗ್ರಾಮಪಂಚಾಯ್ತಿಯಲ್ಲಿ ಇತಹಾಸದಲ್ಲಿ ಯಾರು ಮಾಡದ ಅಪರೂಪದ ಘಟನೆ ಎಂಬಂತೆ ಒಂದೆ ಮನೆಗೆ ಮೂರು ಜಿಪಿಎಸ್ ಫೋಟೊಗಳನ್ನು ತೆಗೆದು ಮೂರುಮನೆಯ ಹಣವನ್ನು ಒಬ್ಬನೆ ಭೂಪ ಲಪಟಾಯಿಸುವ ಹುನ್ನಾರ ಒಂದೆಡೆ ಇದ್ದರೆ ಬೇರೆಪಂಚಾಯ್ತಿಯ ವ್ಯಕ್ತಿಗೆ ಉ,ಖಾ ಯೋಜನೆ ಕಾರ್ಡ ಮಾಡಿರುವುದು ಮತ್ತೊಂದು ಹೀಗೆ ಬಗೆದಂತೆ ಸಾಕಷ್ಟು ಹಗರಣಗಳು ಹೊರಬರುತ್ತಿದ್ದು ಇಲ್ಲಿಯ ಆಡಳಿತದ ವೈಖರಿಗೆ ಸಾಕ್ಷಿಯಂತಿವೆ
೨೦೨೨-೨೩ನೇ ಸಾಲಿನಲ್ಲಿ ಸದರಿ ಗ್ರಾಮಫಂಚಾಯ್ತಿಯ ವಸತಿ ನಿಲಯಕ್ಕೆ ೪ಲಕ್ಷ ಹಣದಲ್ಲಿ ವಾಲಿಬಾಲ್ ಗ್ರೌಂಡ ಮಂಜೂರಿಯಾಗಿದ್ದು ಸದರಿ ಕಾಮಗಾರಿ ನಡೆದಿಲ್ಲವೆಂದು ಮಾಧ್ಯಮದಲ್ಲಿ ಬರುತ್ತಲೆ ಅಧಿಕಾರಿ ಗ್ರಾಮಕ್ಕೆ ಭೇಟಿನಿಡಿ ಪರಿಶೀಲನೆ ನಾಟಕವಾಡಿದ್ದಾನೆ ಎನ್ನಲಾಗುತ್ತಿದೆ
ಯಾಕೆಂದರೆ ಕಾಮಗಾರಿ ಜಿಪಿಎಸ್ ಫೋಟೊಗಳು ಒಂದುಕಡೆ ಅಧಿಕಾರಿ ಭೇಟಿ ನೀಡಿರುವುದು ಮತ್ತೊಂದುಕಡೆ ಎಂದು ಸಾರ್ವಜನಿಕರು ಹೇಳುತ್ತಾರೆ

ಈ ಹಿಂದೆ ಗ್ರಾಮದಲಿ ವಾಲಿಬಾಲ್ ಗ್ರೌಂಡ್ ಒಂದು ನಿರ್ಮಾಣ ವಾಗಿತ್ತು ಹಳೆಯ ವಾಲಿಬಾಲ್ ಗ್ರೌಂಡ ಇರುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿಯ ಫೋಟೊ ಗಳನ್ನೆ ತೋರಿಸಿ ಬಿಲ್ ಮಾಡಿಕೊಂಡಿದ್ದು ಕಾಮಗಾರಿ ಮಾಡಬೇಕಾದ ಸ್ಥಳದಲ್ಲಿ ಯಾವುದೆ ಕಾಮಗಾರಿ ಮಾಡಿಲ್ಲವೆಂದು ಗ್ರಾಮಸ್ಥರ ಆರೋಪವಾಗಿದೆ

ಅಲ್ಲದೆ ಕಾಮಗಾರಿ ಆಗಿಲ್ಲವೆಂದು ಆರೋಪ ಮಾಡಿದವರ ಗಮನಕ್ಕೂ ತರದೆ ತಾವೆ ಏಕಾಏಕಿ ಭೇಟಿ ನೀಡಿ ಬೇರೊಂದು ಕಡೆಯಲ್ಲಿ ಈ ಮೊದಲೆ ಆಗಿರುವ ಕಾಮಗಾರಿಯ ಪೋಟೊಗಳ:ನ್ನು ತೆಗೆದುಕೊಂಡು ಕಾಮಗಾರಿ ಆಗಿದೆ ಎಂದು ಅಧಿಕಾರಿ ಹೇಳುತ್ತಾನೆ ಆದರೆ ವಾಸ್ತವವಾಗಿ ಅಲ್ಲಿ ಕಾಮಗಾರಿ ಮಾಡದೆ ಬಿಲ್ ಲಪಟಾಯಿಸಲಾಗಿದೆ ಎನ್ನುವ ಸಾಕಷ್ಟು ಆರೋಪಗಳನ್ನು ಸಾರ್ವಜನಿಕರು ಮಾಡುತ್ತಿದ್ದಾರೆ
ಒಟ್ಟಾರೆಯಾಗಿ ವಾಲಿಬಾಲ್ ಗ್ರೌಂಡ ಒಂದುಕಡೆ,ಅಧಿಕಾರಿ ಭೇಟಿ ಮತ್ತೊಂದು ಕಡೆ, ಕಾಮಗಾರಿ ಯಾವಕಡೆ ಎನ್ನುವಂತಾಗಿರುವುದು ದುರಂತವೇ ಸರಿ?

WhatsApp Group Join Now
Telegram Group Join Now
Share This Article