ಲಿಂಗಸಗೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೇಕರಿ ಬಸ್ಮ, ಅಂದಾಜು 15ಲಕ್ಷವರೆಗೆ ನಷ್ಟ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು. ಅ.19.-ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿರುವ ಎಂ ಎಂ ಕಾಂಪ್ಲೆಕ್ಸ್ ನಲ್ಲಿರುವ ಅನ್ನಪೂರ್ಣ ಬೇಕರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಪೂರ್ಣವಾಗಿ ಬೇಕರಿಯ ಒಳಗಿದ್ದ ತಿನ್ನುವ ಪದಾರ್ಥಗಳು ಸುಟ್ಟು ಬಸ್ಮವಾಗಿವೆ.
ಶುಕ್ರವಾರ ರಾತ್ರಿ 12 ರಿಂದ 4 ಗಂಟೆಯ ಒಳಗಡೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದ್ದು ಬೇಕರಿಯಲ್ಲಿರುವ ತಿನ್ನುವ ಪದಾರ್ಥಗಳಲ್ಲದೆ ಹೈ ವೋಲ್ಟೇಜ್ ಹೊಂದಿರುವ ತಂಪು ಪಾನೀಯ ಸಂಗ್ರಹಿಸಲು ಬಳಸುವ ಮೂರು ಫ್ರಿಡ್ಜ್ ಗಳು ಸುಟ್ಟು ಕರಕಲಾಗಿವೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದಳದ ಠಾಣಾಧಿಕಾರಿ ಹೊನ್ನಪ್ಪ ಇವರ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಮುಂದಾಗುವ ಅನಾಹುತ ತಪ್ಪಿಸಿದೆ.
ಬೇಕರಿಯಲ್ಲಿ ಸಂಗ್ರಹಿಸಿದ ಸುಮಾರು ತಿನ್ನುವ ಪದಾರ್ಥ ಸೇರಿ ವಿವಿಧ ರೀತಿಯ ವಸ್ತುಗಳು ಹಾಗೂ ಸಾಮಗ್ರಿಗಳು ಸೇರಿ ಅಂದಾಜು 12 ರಿಂದ 15 ಲಕ್ಷ ರೂಪಾಯಿಗಳವರೆಗೆ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ ಘಟನೆಗೆ ಸಂಬಂಧಪಟ್ಟಂತೆ ಇಲ್ಲಿಯವರೆಗೂ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರುವುದಿಲ್ಲವೆಂದು ತಿಳಿದು ಬಂದಿದೆ.