ಲಿಂಗಸುಗೂರ: ಭಾರಿ ಮಳೆಯಿಂದ ರಸ್ತೆ ಜಮೀನುಗಳು ಜಲಾವೃತ,ಬ್ರಿಜ್ ಮೇಲೆ ಉಕ್ಕಿಹರಿದ ನೀರು ಸಂಚಾರಕ್ಕೆ ಪರದಾಟ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ :ನಗರ ಹಾಗೂ ತಾಲೂಕಿನಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಭಾರಿ ಮಳೆ ಸುರಿದಿದ್ದು ಅಗ್ನಿಶಾಮಕ ಕಾರ್ಯಾಲಯ ಹಾಗೂ ಡಿವೈಎಸಪಿ ಸಾರ್ವಜನಿಕ ಉದ್ಯಾನವನ ಮುಖ್ಯ ರಸ್ತೆಯಲ್ಲಿ ಭಾರಿ ಪ್ರಮಾಣದ ಮಳೆ ನೀರು ಸಂಗ್ರಹಣೆಗೊಂಡಿದರಿಂದ ಬೈಕ್ ಸವಾರರು ಹಾಗೂ ವಾಹನ ಸವಾರರು ಮತ್ತು ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಯಿತು
ಮಳೆ ನೀರು ರಸ್ತೆಯಿಂದ ಚರಂಡಿಗೆ ಹೋಗಲು ಸರಿಯಾದ ವ್ಯವಸ್ಥೆ ಇರದೆ ಇರುವದರಿಂದ ರಸ್ತೆಯಲ್ಲಿ ಅಧಿಕ ನೀರು ಸಂಗ್ರಹವಾಗಿದೆ ಹಾಗೂ ಪುರುಸಭೆ ವ್ಯಾಪ್ತಿಯ ವಾರ್ಡ ನಂ ೧೫ರಲ್ಲಿ ಮನೆಗಳಿಗೆ ಮಳೆ ನೀರು ನುಗಿದ ಕಾರಣ ನೀರನ್ನು ಹೊರಹಾಕಲು ಜನರು ಹರಸಾಹಸಪಟ್ಟರು ಹಾಗೂ ನಗರದ ೨೨೦ ಕೆ.ಬಿ ಹತ್ತಿರವಿರುವ ಭತ ನಾಟಿ ಮಾಡಿರುವ ಜಮೀನುಗಳು ಮಳೆ ನೀರಿನಿಂದ ಜಲಾವೃತಗೊಂಡಿದೆ
ತಾಲೂಕಿನಲ್ಲಿ ಶನಿವಾರ ಬೆಳೆಗ್ಗೆ ಅಧಿಕ ಪ್ರಮಾಣದ ಮಳೆ: ಲಿಂಗಸುಗೂರ ಪಟ್ಟಣದಲ್ಲಿ ಶುಕ್ರವಾರ ಮಧ್ಯ ರಾತ್ರಿಯಿಂದ ಶನಿವಾರ ಬೆಳೆಗ್ಗೆ ೭ ಗಂಟೆವರೆಗೆ ಸರಾಸರಿ೯೮.೪(ಮಿಮಿ) ಮಳೆಯಾಗಿದ್ದು. ಹಟ್ಟಿಯಲ್ಲಿ ೮೯ (ಮಿ.ಮೀ) ಉಳಿದಂತೆ ಗುರಗುಂಟಾದಲ್ಲಿ ೫೩ ಮಿ.ಮಿ ಮುದಗಲ್ಲನಲ್ಲಿ ೨೩.೪(ಮಿ.ಮಿ)ರಷ್ಟು ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರಿಮಳೆಯಿಂದ ಬ್ರಿಜ್ ಗಳ ಮೇಲೆ ಹರಿದನೀರು ಸಂಚಾರಕ್ಕೆ ಪರದಾಟ: ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆವರೆಗೆ ಸುರಿದ ಭಾರಿಮಳೆಯಿಂದ ಹಳ್ಳಕೊಳ್ಳಗಳು ತುಂಬಿಹರಿದವು ಲಿಂಗಸಗೂರು-ಗುಡದನಾಳ ರಸ್ತೆಯ ಬ್ರಿಜ್ ಗಳ ಮೇಲೆ ನೀರು ಹರಿದು ಜನರ ಸಂಚಾರಕ್ಕೆ ತೊಂದರೆಯಾಯಿತು ಹಾಗೆ ಯರಡೋಣ-ಹಟ್ಟಿ ಮಾರ್ಗದ ಮೇದಿನಾಪುರ ಹತ್ತಿರದ ಬ್ರಿಜ್ ಮೇಲೆ ನೀರು ಹರಿದ ಕಾರಣ ಹಟ್ಟಿ ಯರಡೋಣ ರಸ್ತೆ ಬಂದ್ ಆಗಿತ್ತು, ಹಾಗೆ ಕಾಳಾಪುರ-ಲಿಂಗಸಗೂರು ಮಾರ್ಗದ ಕಾಳಾಪುರ ಹತ್ತಿರ ಹಳ್ಳಕ್ಕೆ ಹೆಚ್ಚು ನೀರುಬಂದು ರಸ್ತೆಯಮೇಲೆ ಹರಿದು ಸಂಚಾರಕ್ಕೆ ಪರದಾಡುವಂತಾಯಿತು
ತಾಲೂಕಿನಲ್ಲಿ ಸುರಿದ ಭಾರಿಮಳೆಯಿಂದ ಹಾನಿಯಾಗಿರುವ ಬಗೆಗೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಸರ್ವೇಕಾರ್ಯ ನಡೆಸಿದ್ದು ಹಾನಿಯ ಬಗೆಗೆ ಮಾಹಿತಿ ದೊರೆಯಬೇಕಾಗಿದೆ