*ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಡಾ ಶಾಲಿನಿ ರಜನೀಶ್*
ಕಲ್ಯಾಣ ಕರ್ನಾಟಕ ವಾರ್ತೆ
ಬೆಂಗಳೂರು:ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಡಾ ಶಾಲಿನಿ ರಜನೀಶ್ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಡಾ ರಜನೀಶ್ ಗೋಯಲ್ ಅವರ ಅವಧಿ ಜುಲೈ 31 ರಂದು ವಯೋ ನಿವೃತ್ತಿ ಹೊಂದಲಿದ್ದು, ಅದೇ ದಿನ ಅಪರಾಹ್ನ ಡಾ ಶಾಲಿನಿ ರಜನೀಶ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
*ಬ್ಯಾಕ್ ಟು ಬ್ಯಾಕ್ ದಂಪತಿಗಳು*
ಬಿ ಕೆ ಭಟ್ಟಾಚಾರ್ಯ ಮತ್ತು ತೆರೇಸಾ ಭಟ್ಟಾಚಾರ್ಯ, ಬಿ ಕೆ ದಾಸ್ ಮತ್ತು ಡಾ ಮಾಲತಿ ದಾಸ್ ಹಾಗೂ ಡಾ ರಜನೀಶ್ ಗೋಯಲ್ ಮತ್ತು ಡಾ ಶಾಲಿನಿ ರಜನೀಶ್ ಬ್ಯಾಕ್ ಟು ಬ್ಯಾಕ್ ಮುಖ್ಯ ಕಾರ್ಯದರ್ಶಿ ಸ್ಥಾನ ಅಲಂಕರಿಸಿದ ದಂಪತಿಗಳು.