ಆರೋಗ್ಯ ಸೇವೆಯಲ್ಲಿ ವೈದ್ಯರಿಗಿಂತ ನರ್ಸಗಳ ಸೇವೆ ಅಪಾರ-ಡಾ ರುದ್ರಗೌಡ ಪಾಟೀಲ್

Laxman Bariker
ಆರೋಗ್ಯ ಸೇವೆಯಲ್ಲಿ ವೈದ್ಯರಿಗಿಂತ ನರ್ಸಗಳ ಸೇವೆ ಅಪಾರ-ಡಾ ರುದ್ರಗೌಡ ಪಾಟೀಲ್
WhatsApp Group Join Now
Telegram Group Join Now

ವಿಶ್ವ ದಾದಿಯರ ದಿನಾಚರಣೆ:
ಆರೋಗ್ಯ ಸೇವೆಯಲ್ಲಿ ವೈದ್ಯರಿಗಿಂತ ನರ್ಸಗಳ ಸೇವೆ ಅಪಾರ-ಡಾ ರುದ್ರಗೌಡ ಪಾಟೀಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಆರೋಗ್ಯ ಸೇವೆಯಲ್ಲಿ ವೈದ್ಯರಾದವರು ಚಿಕಿತ್ಸೆ ಸೂಚಿಸಿದರೆ ಅದನ್ನು ಸರಿಯಾಗಿ ರೋಗಿಗೆ ತಲುಪಿಸಿ ಆರೋಗ್ಯರಕ್ಷಣೆಯ ಸೇವೆಯಲ್ಲಿ ನರ್ಸಗಳ ಪಾತ್ರ ಅಗಾಧವಾಗಿದೆ ಎಂದು ಸಾರ್ವಜನಿ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ ರುದ್ರಗೌಡ ಪಾಟೀಲ್ ಹೇಳಿದರು
ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಜೀವನದಲ್ಲಿ ತಾಯಿ ಹಾಗೂ ನರ್ಸಗಳ ಸೇವೆ ಬೆಲೆಕಟ್ಟಲಾಗದು ನಮ್ಮ ಆಸ್ಪತ್ರೆಯಲ್ಲಿ ಉತ್ತಮ ನರ್ಸಗಳು ಇದ್ದು ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಕೋವಿಡ್ ಸಂದರ್ಭದಲ್ಲಿ ಅವರ ಸೇವೆ ಅಗಾಧವಾಗಿತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಂತಿಭೇದಿ ಕಾಣಿಸಿಕೊಂಡ ಸಂದರ್ಭದಲ್ಲಿಯು ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ ದಾದಿಯರ ದಿನದಂದು ಎಲ್ಲರೂ ಸೇರಿ ಉತ್ತಮಕಾರ್ಯಕ್ರಮ ರೂಪಿಸಿದ್ದು ತಮ್ಮ ಕೆಲಸಕ್ಕೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು
ಡಾ ಖಾಜಾಮೈನುದೀನ್ ಮಾತನಾಡುತ್ತಾ ಪ್ಲಾರೆನ್ಸ್ ನೈಟಿಂಗಲ್ ಜನ್ಮದಿನವನ್ನು ದಾದಿಯರ ದಿನವೆಂದು ಆಚರಿಸಲಾಗುತ್ತಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ನರ್ಸಗಳ ಸೇವೆ ಅಗಾಧವಾಗಿದೆ ಎಂದರು


ನAತರಡಾ ಪವನ ಮಾತನಾಡುತ್ತಾ ವಿಶ್ವದಲ್ಲಿ ೨,೮ಕೋಟಿ ನರ್ಸಗಳು ಇದ್ದಾರೆ ಆದರೆ ಜಗತ್ತಿನ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಇನ್ನು ಹೆಚ್ಚುಹೆಚ್ಚು ನರ್ಸಗಳು ಸೇವೆಗೆ ಬರಬೇಕಾದುದು ಅವಶ್ಯವಾಗಿದೆ ಎಂದರು
ನರ್ಸಗಳ ದಿನಾಚರಣೆ ನಿಮಿತ್ಯವಾಗಿ ದೀಪಬೆಳಗಿಸುವ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಹಾಗೂ ದಿನಾಚರಣೆ ಅಂಗವಾಗಿ ರಂಗೋಲಿಸ್ಪರ್ಧೆ,ಖುರ್ಚಿಆಟ,ಹೀಗೆ ವಿವಿಧ ಆಟೋಟಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸೇವೆ ಸಲ್ಲಿಸಿದ ಹಲವಾರು ಹಿರಿಯ ದಾದಿಯರಿಗೆ ಸನ್ಮಾನಿಸಲಾಯಿತು
ಸುಮಾರು ಮುವತ್ತು ವರ್ಷಗಳಿಂದ ಸೇವೆ ಸಲ್ಲಿಸಿ ಸಾವಿರಾರು ಹೆರಿಗೆ ಮಾಡಿಸಿದ ನರ್ಸ ಅಂಜನಮ್ಮನವರಿಗೆ ಶಾಲುಹಾಕಿ ಸನ್ಮಾನಿಸಲಾಯಿತು, ಆಂನೇಯ ಪ್ರಾಸ್ತಾವಿಕವಾಗಿ ಮಾತನಾಡಿದರು
ಈ ಸಂದರ್ಭದಲ್ಲಿ ಡಾ ದಿಗಂಬರ, ಡಾ ಶ್ವೇತಾ, ಡಾ ಉಮಾಮಹೇಶ್ವರಿ, ಡಾ ರುದ್ರಮುನಿ, ಡಾ ಮೌನೇಶ,ಡಾ ಬಸವರಾಜ,ಡಾ ಇರ್ಫಾನ್,ಸರಕಾರಿ ನೌಕರರ ಮಹಿಳಾ ಒಕ್ಕುಟದ ರಾಜ್ಯ ಸಂಘಟನಯ ಶಕುಂತಲಾ ಕೋಟಿ,ಆಂಜನಮ್ಮ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article