ಭಾವೈಕ್ಯ ಬದುಕಿಗೆ ತತ್ವಪದ ಕಾರ್ಯಕ್ರಮ ಉದ್ಘಾಟನೆ:
ಸಾಮರಸ್ಯದ ಬದುಕಿಗೆ ತತ್ವಪದಗಳ ಕೊಡುಗೆ ಅಪಾರ-ಡಾ ನಟರಾಜ ಬೂದಾಳ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಾನವ ಜೀನವದಲ್ಲಿ ಸಾಮರಸ್ಯ ಜೀನವಕ್ಕೆ ಧಕ್ಕೆ ಬಂದಾಗಲೆಲ್ಲ ಒಂದುಗೂಡಿಸುವ ಕೆಲಸ ಮಾಡಿದ ಶ್ರಯಸ್ಸು ತತ್ವಪದಕಾರರಿಗೆ ಹಾಗೂ ತತ್ವಪದಗಳಿಗೆ ಸಲ್ಲುತ್ತದೆ ಎಂದು ಡಾ ನಟರಾಜ ಬೂದಾಳ ಹೇಳಿದರು
ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಏರ್ಪಡಿಸಿದ ಗುರುಕಾರುಣ್ಯ ಭಾವೈಕ್ಯ ಬದುಕಿಗೆ ತತ್ವಪದ ಮಹಾಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಮಾಜಿಕ ಬದುಕಿನಲ್ಲಿ ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ ಎಲ್ಲರನ್ನು ಒಳಗೊಂಡು ಎಲ್ಲರನ್ನು ಬಾಳಿಸಿ ನೀನು ಬಾಳುವುದು ನಿಸರ್ಗದ ನಿಯಮ ಅದನ್ನು ಮೀರಿ ನಡೆದರೆ ಬದುಕಿಗೆ ತೊಂದರೆ ಅಂತಹ ಒಂದುಗೂಡಿಸುವ ಕೆಲಸವನ್ನು ತತ್ವಪದಕಾರರು ಹಾಗೂ ತತ್ವಪದಗಳು ಮಾಡುತ್ತಾ ಬಂದಿವೆ
ಮನುಷ್ಯನಲ್ಲಿರುವ ಅಜ್ಞಾನದ ಕತ್ತಲೆಯನ್ನು ಸರಿಸಿ ಜ್ಞಾನದ ಬೆಳಕನ್ನು ನೀಡುತ್ತಾ ಮನುಷ್ಯನನ್ನು ಸಾಕ್ಷಾತ್ಕಾರದ ಕಡೆಗೆ ಕರೆದುಕೊಂಡು ಹೋಗುವ ಕೆಲಸವನ್ನು ತತ್ವಪದಗಳು ಮಾಡುತ್ತಾ ಬಂದಿವೆ ವಚನಕಾರರ ಹಾಗೂ ತತ್ವಪದಕಾರರ ಇಬ್ಬರ ವಿಚಾರಗಳು ಮಾನವತೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತವೆ ವಚನಕಾರರು ಕೂಡ ತತ್ವಪದಕಾರರಾಗಿಯು ಕಂಡು ಬರುತ್ತಾರೆ
ವಚನ ಸಂಪುಟಗಳು ಕೇವಲ ೧೬ ಇದ್ದರೆ ತತ್ವಪದಗಳ ಸಂಪುಟ ೫೨ ಇದೆ ಅಷ್ಟೊಂದು ದೊಡ್ಡಮಟ್ಟದಲ್ಲಿ ತತ್ವಪದ ರಚನೆಯಾಗಿದ್ದು ಈ ನೆಲzಲ್ಲಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ
ತತ್ವಪದಕಾರ ಹೊರಗಿನವರ ಹಿತಕ್ಕಾಗಿ ಹಾಡುವುದಿಲ್ಲ ತನ್ನೊಳಗಿನ ಆನಂದಕ್ಕಾಗಿ ಹಾಡಿಕೊಳ್ಳುತ್ತಾನೆ ಅದೊಂದು ಕತ್ತಲಕಾವ್ಯವಾಗಿದ್ದು ಬೆಳಕನ್ನು ಹಚ್ಚುವ ಕೆಲಸ ಮಾಡುತ್ತದೆ ಲೋಕಕ್ಕೆ ಅಂಟಿದ ಕತ್ತಲನ್ನು ಕಳೆದು ಲೋಕವನ್ನು ಬೆಳಗುವ ಮಹಾನ್ ಕೆಲಸವನ್ನು ತತ್ವಪದಗಳು ಮಾಡುತ್ತಿವೆ
ಈ ನೆಲದಲ್ಲಿ ನೀರಲಕೇರಿ ಬಸವಲಿಂಗ ಶರಣರು, ಘನಮಠಸಾರ್ಯರು, ವಿರುಪನಗೌಡ,ವಡಿಕೆಪ್ಪ, ಕಡಕೋಳ ಮಡಿವಾಳಪ್ಪ ಹೀಗೆ ನೂರಾರು ಸಂಖ್ಯೆಯಲ್ಲಿ ಕಂಡು ಬರುತ್ತಾರೆ
ಸಾಮರಸ್ಯದ ಬದುಕಿನ ಜೊತೆಗೆ ಗುರುಕಾರುಣ್ಯದ ದಾರಿಯನ್ನು ತೋರಿಸುತ್ತವೆ ಗುರುವೆಂದರೆ ಹೊರಗಿನವರಲ್ಲಿ ತನ್ನೊಳಗೆ ಹುಡುಕಿಕೊಳ್ಳುವ ಸಾಧನೆಯನ್ನು ತತ್ವಪದ ನೀಡುತ್ತವೆ
ಜಗದ ಕತ್ತಲೆಯನ್ನು ಕಳೆದು ಬೆಳಕು ನೀಡುವ ಸಾಮರಸ್ಯ ಭಾವೈಕ್ಯತೆ ತುಂಬುವ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಎಲ್ಲರೂ ಸಮಾನರು ಎಂದು ಅರಿಯುವ ಸಾಮರಸ್ಯದ ಬದುಕು ನಿಡುವ ಶಕ್ತಿ ತತ್ವಪದಗಳಿಗೆ ಇದೆ ಎಂದು ಅವರು ಹೇಳಿದರು
ಶಿಶುನಾಳ ಸಾಹೇಬರ ತತ್ವಪದಗಳ ಬಗೆಗೆ ಡಾ ಬಾಳಾಸಾಬ ಲೋಕಾಪುರೆ ವ್ಯಾಖ್ಯಾನ ಮಾಡಿದರು ನೇತೃತ್ವವನ್ನು ಕೃಷ್ಣಾನಂದ ಶರಣರುವಹಿಸಿದ್ದರು ಮಹಿಬೂಬ ಕಿಲ್ಲೆದಾರ ಹಾಗೂ ಸಂಗಡಿಗಳು ಶಿಶುನಾಳಸಾಹೇಬರ ಹಾಡುಗಳನ್ನು ಪ್ರಸ್ತುತಪಡಿಸಿದರು ಅಧ್ಯಕ್ಷತೆಯನ್ನು ಮಾಜಿಸಚಿವರಾದ ಅಮರೇಗೌಡ ಪಾಟಿಲ್ ಬಯ್ಯಾಪುರವಹಿಸಿದ್ದರು ಬಸವಂತ್ರಾಯ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು ಬಸವರಾಜಮೇಟಿ ಉಪಸ್ಥಿತಿರಿದ್ದರು
ಮಾನವಸಂಬಂಧ ಬೆಸೆಯುವ ಕೆಲಸವನ್ನು ತತ್ವಪದ ಮಾಡುತ್ತದೆ-ಬಯ್ಯಾಪುರ
ಲಿಂಗಸಗೂರು:ಮಾನವ ಸಂಬಂಧಗಳನ್ನು ಬೆಸೆಯುವ ಕೆಸಲವನ್ನು ತತ್ವಪದಗಳು ಮಾಡುತ್ತವೆ ಮತ್ತು ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳನ್ನು ನೀಡುವ ಕೆಲಸ ಮಾಡುತ್ತವೆ ಎಂದು ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು
ಅವರು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿ ಭಾವೈಕ್ಯ ಬದುಕಿಗೆ ತತ್ವಪದ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ತತ್ವಪದದ ಚಿಂತನ ಕಾರ್ಯಕ್ರಮ ಯಾರಿಗಾಗಿ ಅಂದರೆ ಅಕ್ಷರ ಕಲಿತವರಿಗೆ ಎನ್ನಬೇಕಾಗುತ್ತದೆ ಯಾಕೆಂದರೆ ಹಿಂದೆ ಸಾಕ್ಷರತೆ ಕಡಿಮೆ ಇತ್ತು ಮಾನವೀಯತೆ ಹೆಚ್ಚು ಇತ್ತು ಇಂದು ಸಾಕ್ಷರತೆ ಹೆಚ್ಚಿದೆ ಆದರೆ ಮಾನವೀಯತೆ ಮರೆಯಾಗುತ್ತಿದೆ ಕುಡುಕುಟುಂಬದ ಸಂತಸ ದೂರವಾಗುತ್ತಿದೆ ಅಂತಹ ಸಾಮರಸ್ಯದ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ತತ್ವಪದದ ಮಹಾಯಾನ ಕಾರ್ಯಕ್ರಮ ನಿಡುತ್ತದೆ ಅದರ ಸದುಪಯೋಗಪಡೆಯುವಂತೆ ಹೇಳಿದರು


