ಛಾವಣಿ ದಸರಾ16
ಜನಮನ ರಂಜಿಸಿದ ಸವಿತಕ್ಕ ತಂಡದಿಂದ ವೈವಿದ್ಯಮಯ ಹಾಡುಗಳು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಛಾವಣಿ ದಸರಾ ನಿಮಿತ್ಯವಾಗಿ ಪಟ್ಟಣದಲ್ಲಿ ದಸರಾ ತಂಡದವತಿಯಿಂದ ಪ್ರತಿದಿನ ಸಂಜೆ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಿದ್ದು ರವಿವಾರ ಸಂಜೆ ಸವಿತಕ್ಕನ ತಂಡದಿಂದ ವೈವಿದ್ಯಮಯ ಹಾಡುಗಳು ಜನಮನವನ್ನು ರಂಜಿಸಿದವು
ಛಾವಣಿ ದಸರಾ ತಂಡದವತಿಯಿಂದ ಪ್ರತಿವರ್ಷ ನಾಡಿನ ವಿವಿಧ ಕಲಾವಿದರನ್ನು ಕರೆಯಿಸಿ ಅವರಿಂದ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತಿದ್ದು ಅದರಂತೆ ರವಿವಾರ ಸಂಜೆ ಸವಿತಕ್ಕ ಹಳ್ಳಿಬ್ಯಾಂಡ್ ತಂಡದಿಂದ ಜನಪದ ಸಂಗೀತ ಕೇಳಿಬಂದು ಅದರಲ್ಲಿ ಹಲವಾರು ವೈವಿದ್ಯಮಯ ಹಾಡುಗಳು ಹುಟ್ಟಿ ಬಂದೆ ಯಲ್ಲಮ್ಮನಾಗಿ,,ನಿನ್ನೊಳಗ ನೀನು ತಿಳಿದು ನೋಡಣ್ಣ,,,ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತಿ ಈ ಜಗದಾಗ,,,ಭಾಗ್ಯದ ಬಳೆಗಾರ ಬೇಂದ್ರೆ ಹಾಡು ಬಂತು ಶ್ರಾವಣ ನಾಡಿಗೆ,,ಮಂಟೆಸ್ವಾಮಿ ಹಾಡುಗಳು ಶರಣರ ವಚನಗಳು, ಶರೀಫ ಹಾಗೂ ಕಡಕೋಳ ಮಡಿವಾಳಪ್ಪನವರ ತತ್ವಪದಗಳು ಸೇರಿದಂತೆ ವೈವಿದ್ಯಮಯ ಹಾಡುಗಳನ್ನು ಹಾಡುವುದರ ಮೂಲಕ ಜನಮನವನ್ನು ರಂಜಿಸಿದರು
ಅದರಲ್ಲಿಯು ಹುಟ್ಟಿಬಂದೆ ಎಲ್ಲಮ್ಮನಾಗಿ ಹಾಡು ಸುನಿತಕ್ಕ ಹಾಗೂ ನಿನ್ನೋಳಗ ನೀ ತಿಳಿದುನೋಡಣ್ಣ ಹೊಂಬೆಗೌಡ ಅದ್ಭುತವಾಗಿ ಹಾಡಿದರು ರಾಜೀವ ಹಾಡಿದ ಬಂತು ಶ್ರಾವಣ ಹಾಡುಗಳು ಹೆಚ್ಚು ಮೆರಗು ತಂದವು