ಉಳಿಮೇಶ್ವರ: ವಿಜಯನಗರ ಕಾಲದ ಎರಡು ಶಾಸನಗಳ ಪತ್ತೆ

Laxman Bariker
ಉಳಿಮೇಶ್ವರ: ವಿಜಯನಗರ ಕಾಲದ ಎರಡು ಶಾಸನಗಳ ಪತ್ತೆ
WhatsApp Group Join Now
Telegram Group Join Now

ಉಳಿಮೇಶ್ವರ: ವಿಜಯನಗರ ಕಾಲದ ಎರಡು ಶಾಸನಗಳ ಪತ್ತೆ

ಕಲ್ಯಾಣ ಕರ್ನಾಟಕ ವಾರ್ತೆ

ಮುದಗಲ್: ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ವಿಜಯನಗರ ಸಾಮ್ರಾಟ ಅಚ್ಯುತದೇವರಾಯ ಅಧಿಕಾರಿ ಜಮಾನಕಾನ ಎರಡು ಶಾಸನಗಳು ಪತ್ತೆಯಾಗಿವೆ.
ಉಳಿಮೇಶ್ವರ ಗ್ರಾಮದ ಅವಶೇಷಗಳನ್ನು ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಯವರು ಶೋಧಿಸಿದ್ದಾರೆ. ಗ್ರಾಮದ ಮಾರುತಿ ದೇವಲಯ ಎಡ ಬದಿಯಲ್ಲಿ ಇರುವ ಕ್ರಿ.ಶ.15-16 ಶತಮಾನದ ಶಾಸನವು ಕೇವಲ ಹುಳಿಯಮೇಶ್ವರ ಗ್ರಾಮದ ಬಗ್ಗೆ ಮಾಹಿತಿ ನೀಡುತ್ತದೆ. ಗ್ರಾಮದ ಅಗಸಿಕಟ್ಟಗೆ ಬೋರಲಾಗಿ ಮಲಗಿಸಿದ ಶಾಸನವು ಆ.29 ರಂದು ಗ್ರಾಮಸ್ಥರು ತಿರುವಿ ಹಾಕಿದ್ದಾರೆ. ಇದು ಕಣಶಿಲೆಯಾಗಿದೆ. ಕ್ರಿ.ಶ. 16 ನೇ ಶತಮಾನಕ್ಕೆ ಸೇರುತ್ತದೆ. ಇದರಲ್ಲಿ ವಿಜಯನಗರ ಸಾಮ್ರಾಟ ಅಚ್ಯುತದೇವರಾಯ (ಕ್ರಿ.ಶ.1529-1541) ಮತ್ತು ಆತನ ಕೈ ಕೆಳಗೆ ಅಧಿಕಾರಿಯಾಗಿದ್ದ, ಜಮಾನಕಾನ ಒಡೆಯನ ಕುರಿತು ಮಾಹಿತಿ ನೀಡುತ್ತದೆ.
ಶಾಸನದ ಕೆಳ ಭಾಗದಲ್ಲಿ ಕೆಟ್ಟ ಬೈಗುಳಗಳಿಂದ ಶಾಪಾಶಯ ಹಾಕಿಸಲಾಗಿದೆ. ಇವುಗಳೊಂದಿಗೆ ಇಬ್ಬರು ಬ್ರಾಹ್ಮಣ ಪಂಡಿತರ ವ್ಯಕಿಗಳು, ಎರಡು ಕತ್ತೆಯ ಉಬ್ಬು ಶಿಲ್ಪಗಳು ಹಾಗೂ ವಿಜಯ ನಗರ ಸ್ರಾಮಜ್ಯದ ರಾಜ ಲಾಂಛನವಾದ ವರಾಹ ಶಿಲ್ಪವು ಕಾಣಬರುತ್ತವೆ.
ಡಾ.ಚನ್ನಬಸಪ್ಪ ಮಲ್ಕಂದಿನ್ನಿ ಕ್ರಿ .ಶ 2002 ನೇ ಇಸವಿ ಯಿಂದ ಪ್ರಸ್ತುತ ದಿನಗಳವರೆಗೆ ಹಲವು ಬಾರಿ ಈ ಗ್ರಾಮಕ್ಕೆ ಭೇಟಿ ನೀಡಿ ಶಾಸನಗಳನ್ನು ಪತ್ತೆಮಾಡಿದ್ದಾರೆ. ಗ್ರಾಮದಲ್ಲಿದ್ದ ಶಿವಶರಣರ ಚಿಕ್ಕಯ್ಯ ಶರಣರ ಗದ್ದುಗೆ ಪತ್ತೆ ಹಚ್ಚಿದ್ದಾರೆ.

WhatsApp Group Join Now
Telegram Group Join Now
Share This Article