ಸಾರಿಗೆ ಬಸ್ಸಿನಲಿ ಪ್ರಯಾಣಿಕನಿಂದ ಅವಾಚ್ಯ ಬೈಗುಳ,ಸಾರ್ವಜನಿಕ ರಿಂದ ಧರ್ಮದೇಟು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಸಾರಿಗೆ ಬಸ್ಸಿನಲಿ ಪ್ರಯಾಣಿಕನೊಬ್ಬ ಚಾಲಕ,ಕಂಡಕ್ಟರ್, ಮಹಿಳೆಯರು ಸೇರಿ ಸಹಪ್ರಯಾಣಿಕರಿಗೆ ಅವಾಚ್ಯ ಬೈಗುಳದಿಂದ ನಿಂದಿಸಿದ್ದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಜರುಗಿದೆ
ಹೌದು ರಾಯಚೂರುನಿಂದ-ಲಿಂಗಸಗೂರಿಗೆ ಬರುವ ಬಸ್ಸಿನಲಿ ಪಾಮನಕಲ್ಲೂರಿನಲಿ ಬಸ್ ನ್ನು ಹತ್ತಿದ್ದಾನೆ ಬಾಗಿಲಲ್ಕೆ ನಿಂತುಕೊಂಡಾಗ ಕಂಡಕ್ಟರ್ ಒಳಗೆ ಬರಲು ಹೇಳಿದ್ದಾನೆ ಆದರೆ ಆತ ಬಾಗಿಲುಬಿಟ್ಟು ಬರಲೇ ಇಲ್ಲ ನಂತರ ಕಂಡಕ್ಟರ್, ಚಾಲಕ ಬಸ್ಸಿನಲಿರುವ ಮಹಿಳೆಯರಿಗೆ ಬಾಯಿಗೆ ಬಂದಂತೆ ಬೈಯುತ್ತಾ ನಿಂತಿದ್ದಾನೆ,ಎಷ್ಟು ಹೇಳಿದರು ಸುಮ್ಮನಾಗದ ಆತನನ್ನು ಕರೆದುಕೊಂಡು ಲಿಂಗಸಗೂರು ಠಾಣೆಗೆ ಹೋಗಲು ಬಸ್ ಆ ಕಡೆ ಹೊರಡುವಾಗ ಮತ್ತಷ್ಟು ಗಲಾಟೆ ಮಾಡಿ ಬಸ್ ಇಳಿದು ಹೋಗುವಾಗ ಹಿಂದೆ ಬಂದ ಸಹಪ್ರಯಾಣಿಕರು ಸಾರ್ವಜನಿಕರು ಸೇರಿ ಆತನಿಗೆ ಧರ್ಮದೇಟು ನೀಡಿದ್ದಾರೆ
ಲಿಂಗಸಗೂರು ಸಾರಿಗೆ ಘಟಕಕ್ಕೆ ಸೇರಿದ KA36 F1389 ನಂಬರಿನ ಬಸ್ ಇದಾಗಿದ್ದು ರಾಯಚೂರು ನಿಂದ ಲಿಂಗಸಗೂರಿಗೆ ಬರುವಾಗ ಘಟನೆ ಜರುಗಿದೆ