ಅಂಗನವಾಡಿ ಕೇಂದ್ರಗಳಿಗೆ ಅವಧಿ ಮೀರಿದ ಹಾಲಿನಪುಡಿ ವಿತರಣೆ ಕ್ರಮಕ್ಕೆ ಆಗ್ರಹ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರಬರಾಜು ಮಾಡುವ ಹಾಲಿನಪುಡಿ ಪ್ಯಾಕೇಟ್ ಅವಧಿ ಮೀರಿದವುಗಳನ್ನು ವಿತರಣೆ ಮಾಡಲಾಗಿದ್ದು ಸಂಬAಧಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ
ಮಸ್ಕಿ ತಾಲೂಕಿನ ಸಂತೆಕಲ್ಲೂರು ವ್ಯಾಪ್ತಿಯಲ್ಲಿ ವಿತರಣೆ ಮಾಡಲಾಗಿರುವ ಹಾಲಿನ ಪುಡಿಯು ಅವಧಿ ಮೀರಿದ್ದನ್ನು ವಿತರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ ಪಾಕೀಟ್ ಮೇಲೆ ನಂದಿನಿ ಮಿಲ್ಕ ಪೌಡರ್ ಎಂದು ಬರೆಯಲಾಗಿದ್ದು ಅವಧಿ ಉತ್ಪಾದನಾ ದಿನಾಂಕ ೦೬-೧೦-೨೦೨೪ ಹಾಗೂ ಅಂತಿಮ ಬಳಕೆಯ ಅವಧಿ ೦೭-೦೧-೨೦೨೫ ಎಂದು ಇದ್ದು ಈ ಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅವಧಿ ಮೀರಿದ ಹಾಲಿನ ಪುಡಿಯ ಪಾಕೇಟಕ್ ಗಳನ್ನು ವಿತರಣೆ ಮಾಡಲಾಗಿದ್ದು ಫಲಾನುಭವಿಗಳು ಅವಧಿ ಮೀರಿದ ಹಾಲಿನ ಪುಡಿ ವಿತರಣೆ ಮಾಡಿದ್ದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಹೇಗೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಸದರಿ ಇಲಾಖೆಯಿಂದಲೆ ವಿತರಣೆ ಮಾಡಿದ ಬೆಲ್ಲವು ಸಹಿತ ತುಂಬಾ ಕಳಪೆಯಾಗಿದೆ ಎನ್ನಲಾಗುತ್ತಿದೆ ಸರಕಾರ ಮಕ್ಕಳ ಉತ್ತಮ ಆಹಾರ ಹಾಗೂ ಪೌಷ್ಠಿಕ ಆಹಾರ ದೊರಕಿಸಿಕೊಡಲು ಸಾಕಷ್ಟು ಹಣಖರ್ಚು ಮಾಡಿತ್ತಿದ್ದರು ಇಲಾಖೆ ಮಾತ್ರ ಸರಿಯಾದ ಆಹಾರ ದೊರಕಿಸಿಕೊಡಲು ವಿಫಲವಾಗುತ್ತಿದೆಯಾ ಎನ್ನುವ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ
ಅವಧಿ ಮೀರಿದ ಹಾಲಿನಪುಡಿಯನ್ನು ವಿತರಣೆ ಮಾಡಿ ಏನು ಅರಿಯದ ಕಂದಮ್ಮಗಳಿಗೆ ಹಾಲು ಕುಡಿಯಲು ಕೊಡುತ್ತಿರುವದು ಎಷ್ಟು ಸರಿ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದರೆ ಹೊಣೆಯಾರು ಎನ್ನುವಂತಾಗಿದೆ ಕೂಡಲೇ ಸಂಬAಧಿಸಿದ ಅಧಿಕಾರಿಗಳು ಸೂಕ್ತಕ್ರಮ ಜರುಗಿಸುವರೆ ಕಾದುನೋಡೋಣ?