*ಕೇಂದ್ರ ಸರ್ಕಾರದ ನಿರ್ಲಕ್ಷ ಧೋರಣೆಗೆ ಖಂಡನೆ,
ದೆಹಲಿ ಜಂತರ್ ಮಂತರ್ ಪ್ರತಿಭಟನೆ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗುವವರೆಗೂ ಹೋರಾಟ
ಸಂಸದರು ಹೋರಾಟಗಾರರ ಘೋಷಣೆ*
ಕಲ್ಯಾಣ ಕರ್ನಾಟಕ ವಾರ್ತೆ
ದೆಹಲಿ:ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಇಂದು ದೆಹಲಿಯ ಜಂತರ್ ಮಂತರ ನಲ್ಲಿ ಡಾ ಬಸವರಾಜ ಕಳಸ ನೇತೃತ್ವದಲ್ಲಿ ಬೃಹತ್ ಪ್ರತಿಭಟನ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿತ್ತು.
ಆ 7ರಂದು ನಡೆದ ಪ್ರತಿಭಟನ ಸತ್ಯಾಗ್ರಹದಲ್ಲಿ ರಾಯಚೂರು, ಕೊಪ್ಪಳ ಕಲ್ಬುರ್ಗಿ ಬೀದರ್ ಜಿಲ್ಲೆಗಳಿಂದ ನೂರಾರು ಹೋರಾಟಗಾರರು ಮತ್ತು ಸಂಸದರಾದ ಕುಮಾರನಾಯಕ್ ರಾಧಾಕೃಷ್ಣ ದೊಡ್ಡಮನಿ ರಾಜಶೇಖರ್ ಹಿಟ್ನಾಳ್ ಮತ್ತು ದಾವಣಗೆರೆ ಸಂಸದೆ ಡಾ. ಪ್ರಭ ಮಲ್ಲಿಕಾರ್ಜುನ ಭಾಗವಹಿಸಿದ್ದರು. ದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನಾ ಸತ್ಯಾಗ್ರಹವನ್ನು ಆರಂಭಿಸಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ, “ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕಳೆದ 818 ದಿನಗಳಿಂದ ಸುಧೀರ್ಘವಾಗಿ ಹೋರಾಟ ನಡೆಯುತ್ತಿದ್ದರು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ, ಮತ್ತೊಂದೆಡೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಶಿಫಾರಸ್ಸು ಪತ್ರಗಳನ್ನು ಬರೆದಿರುತ್ತಾರೆ, ಮುಖ್ಯಮಂತ್ರಿ ಅವರು ಖುದ್ದಾಗಿ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಒತ್ತಾಯಿಸಿರುತ್ತಾರೆ. ಆದರೆ ಕೇಂದ್ರ ಸರ್ಕಾರ ತನ್ನ ನಿರ್ಲಕ್ಷ ಧೋರಣೆಯನ್ನು ಮುಂದುವರಿಸಿದೆ, ಹೀಗಾದರೆ ಪ್ರಾದೇಶಿಕ ಅಸಮತೋಲನೆ ನಿವಾರಣೆ ಆಗುವುದಾದರೂ ಹೇಗೆ ?ಅದಕ್ಕಾಗಿ ರಾಯಚೂರಿನಲ್ಲಿ ಸುದೀರ್ಘವಾಗಿ ಹೋರಾಟ ನಡೆಯುತ್ತಿದ್ದರೂ ನಿರ್ಲಕ್ಷ್ಯ ತಾಳಿದೆ ,ಕೇಂದ್ರ ಸರಕಾರದ ಗಮನ ಸೆಳೆಯಲು ಎಚ್ಚರಿಸಲು ದೆಹಲಿಯ ಜಂತರ್ ಮಂತರ್ ನಲ್ಲಿ ಈ ಬೃಹತ್ ಪ್ರತಿಭಟನ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ, ಇನ್ನು ಮುಂದಾದರೂ ಕೇಂದ್ರ ಸರ್ಕಾರ ನಮ್ಮ ಹೋರಾಟಕ್ಕೆ ಮತ್ತು ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಗೌರವಿಸಿ ತಕ್ಷಣವೇ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ಬಗ್ಗೆ ಘೋಷಣೆ ಮಾಡಬೇಕೆಂದು” ಆಗ್ರಹಿಸಿದರು.
ಪ್ರತಿಭಟನ ಸತ್ಯಾಗ್ರಹದಲ್ಲಿ ರಾಯಚೂರು ಸಂಸದ ಕುಮಾರನಾಯಕ್ ಭಾಗವಹಿಸಿ ಮಾತನಾಡುತ್ತಾ, ಹಿಂದುಳಿದ ಮಹತ್ವಕಾಂಕ್ಷಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಇಷ್ಟೊಂದು ಸುಧೀರ್ಘವಾಗಿ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ,ಅದಕ್ಕಾಗಿಯೇ ಏಮ್ಸ್ ಹೋರಾಟ ಸಮಿತಿಯು ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ದೆಹಲಿಯ ಜಂತರ್ ಮಂತರ್ ನಲ್ಲಿ ಈ ಪ್ರತಿಭಟನಾ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ, ಏಮ್ಸ್ ಘೋಷಿಸುವವರೆಗೆ ಈ ಹೋರಾಟ ಮುಂದುವರಿಯುತ್ತದೆ, ನಾನು ಸಂಸದನಾಗಿ ಸಂಸತ್ತಿನಲ್ಲಿ ನಿರಂತರವಾಗಿ ಹೋರಾಡುತ್ತೇನೆ ಖಂಡಿತವಾಗಿಯೂ ನಮಗೆ ಏಮ್ಸ್ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ, ಎಂದು ಹೇಳಿದರು’ ಕಲಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಏಮ್ಸ್ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡುತ್ತಾ, “ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆಗಬೇಕು ಎನ್ನುವ ಬೇಡಿಕೆಗೆ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಕೇಂದ್ರ ಸರ್ಕಾರ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವುದರ ಮೂಲಕ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಮುಂದಾಗಬೇಕೆಂದು” ಕರೆ ನೀಡಿದರು.
ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ರವರು ಪ್ರತಿಭಟನಾ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡುತ್ತ,” ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಆದರೆ ಇಡೀ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಆರೋಗ್ಯದ ಕ್ಷೇತ್ರದಲ್ಲಿ ನಿರೀಕ್ಷಿತ ಬದಲಾವಣೆಗಳಾಗಿ ನಮ್ಮ ಹಿಂದುಳಿದ ಪ್ರದೇಶದ ಸಾಮಾನ್ಯ ಜನರಿಗೆ ಉತ್ಕೃಷ್ಟ ವೈದ್ಯಕೀಯ ಮತ್ತು ತಂತ್ರಜ್ಞಾನದ ಚಿಕಿತ್ಸೆ ಲಭ್ಯವಾಗಿ ತಮ್ಮ ಅಮೂಲ್ಯ ಆರೋಗ್ಯ ಮತ್ತು ಪ್ರಾಣವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ, ಕೇಂದ್ರ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸದೇ ತಕ್ಷಣವೇ ಏಮ್ಸ್ ಮಂಜೂರು ಮಾಡಬೇಕೆಂದು” ಒತ್ತಾಯಿಸಿದರು. ದಾವಣಗೆರೆ ಸಂಸದೆ ಡಾ .ಪ್ರಭಾ ಮಲ್ಲಿಕಾರ್ಜುನ್ ಪ್ರತಿಭಟನ ಸತ್ಯಾಗ್ರಹದಲ್ಲಿ ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡುತ್ತ,” ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲೇಬೇಕೆಂದು ಸುದೀರ್ಘ ಹೋರಾಟ ನಡೆಯುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಆರೋಗ್ಯ ಸಚಿವರಿಗೆ ಕೇಂದ್ರ ಹಣಕಾಸು ಸಚಿವರಿಗೆ ಮತ್ತು ಪ್ರಧಾನಮಂತ್ರಿ ಯವರಿಗೆ ಪತ್ರ ಬರೆದು ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದಾರೆ ,ಆದರೆ ಇದುವರೆಗೂ ಕೇಂದ್ರ ಸರ್ಕಾರ ಸುದೀರ್ಘವಾಗಿ ನಡೆಯುತ್ತಿರುವ ಹೋರಾಟಕ್ಕಾಗಲಿ ಮುಖ್ಯಮಂತ್ರಿ ಅವರ ಶಿಫಾರಸ್ಸು ಪತ್ರಗಳಿಗಾಗಲಿ ಮನ್ನಣೆ ನೀಡಿ ಏಮ್ಸ್ ಮಂಜೂರು ಮಾಡಲು ಹಿಂದೇಟು ಹಾಕುತ್ತಿದೆ, ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು, ಹಿಂದುಳಿದ ರೋಗಪೀಡಿತ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವುದು ಅತ್ಯಂತ ಸೂಕ್ತವಾಗಿದೆ ಇದರ ಬಗ್ಗೆ ನಾನು ಈಗಾಗಲೇ ಸಂಸತ್ತಿನಲ್ಲಿ ಧ್ವನಿ ಎತ್ತಿದೇನೆ, ಮುಂದೆಯೂ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ” ಎಂದು ಘೋಷಿಸಿದರು. ಭಾರತೀಯ ಜನತಾ ಪಕ್ಷದ ಮುಖಂಡ ತಿೃವಿಕ್ರಮ ಜೋಶಿ ಪ್ರತಿಭಟನ ಸತ್ಯಾಗ್ರಹದಲ್ಲಿ ಭಾಗವಹಿಸಿ ಏಮ್ಸ್ ಗಾಗಿ ನಡೆಯುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುತ್ತಾ, ಕೇಂದ್ರ ಸರ್ಕಾರ ಇನ್ನೂ ವಿಳಂಬ ಮಾಡದೆ ಕೂಡಲೇ ಏಮ್ಸ್ ಮಂಜೂರು ಮಾಡಿ ಘೋಷಿಸಬೇಕೆಂದು” ಹೇಳಿದರು. ಅಶೋಕ್ ಕುಮಾರ್ ಜೈನ್ ,ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸತ್ಯಾಗ್ರಹಕ್ಕೆ ಆಗಮಿಸಿದ್ದ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳ ಹೋರಾಟಗಾರರನ್ನು ಸಂಸದರನ್ನು ಸ್ವಾಗತಿಸಿದರು. ಪಾರ್ಲಿಮೆಂಟ್ ಸೆಕ್ಟರಿಗೆ ಸಂಬಂಧಿಸಿದ ಅಧಿಕಾರಿಯ ಮುಖಾಂತರ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು. ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಬೃಹತ್ ಪ್ರತಿಭಟನ ಸತ್ಯಾಗ್ರಹದಲ್ಲಿ ಸುಲೋಚನಾ ಸಂಘ, ವಿನಯ್ ಕುಮಾರ್ ಚಿತ್ರಗಾರ’ ಥಾಮಸ್, ಅಮರೇಗೌಡ ಪಾಟೀಲ್’ ಬಾಬುರಾವ್ ಶೇಗುಣಸಿ, ಎನ್. ಉದಯಕುಮಾರ್ ಸಿರವಾರ, ಕೆ .ವೀರೇಶ್ ಬಾಬು, ಗುರುರಾಜ್ ಕುಲಕರಣಿ ,ಎಂ. ಆರ್ ಭೇರಿ, ರಾಮಚಂದ್ರ’ ಡಾ. ಶಿವಬಸಪ್ಪ ಲಿಂಗಸಗೂರು, ಡಾ. ರುದ್ರಗೌಡ ಪಾಟೀಲ್ ಲಿಂಗಸುಗೂರು, ಗವಿಸಿದ್ದಪ್ಪ ಸಂತೆಕೆಲ್ಲೂರು ನ್ಯಾಯವಾದಿಗಳು, ದೊಡ್ಡಬಸಪ್ಪ ಅಂಗಡಿ ಲಿಂಗಸುಗೂರು, ಮಹೇಶ್ ಶಾಸ್ತ್ರಿ, ಲಿಂಗಸುಗೂರು, ಅಮರೇಶ್ ಗುಂಡಸಾಗರ ‘ಸಂತೋಷ್ ಕುಮಾರ್ ಗುರ್ಜಾಪುರ್, ರಾಮು ಬಡಿಗೇರ್’ ಮಿಮಿಕ್ರಿ ಬಸವರಾಜ್, ರಾಜಶೇಖರ್ ಶಾಗೋಟಿ, ವಿರೂಪಾಕ್ಷ’ ಕೆ ಸಿದ್ದರಾಮಪ್ಪ’ ಈರೇಶ್, ಸಿದ್ದಯ್ಯ ಸ್ವಾಮಿ, ನಾಗರಾಜ್’ ಸುರೇಶ್ ,ವಿನಯ್ ಕುಮಾರ್ ,ಚಂದ್ರಶೇಖರ್ ‘ಸುರೇಶ್ ಕೋಟ ಯಲಬುರ್ಗಾ’ ಮೊಹಮ್ಮದ್ ಅಜೀಜ್’ ನಾಸೀರ್ ಹೊಸೂರ್, ಆಸೀಫ್, ಬಸವರಾಜ್ ಬಯಲ ಮರ್ಚೆದ್, ದೆಹಲಿ ಕನ್ನಡಿಗರಾದ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ವೈಜನಾಥ್ ಬಿರಾದರ್, ಶಶಿಕಾಂತ್ ಪಾಟೀಲ್’ ಅಶೋಕ್ ಕುಮಾರ್ ಕಲ್ಲೂರ್’ ಬಾಬು ಯಜ್ಞ, ಶಾಂತಕುಮಾರ್ ನಿಂಬಾಳೆ, ಶಶಿಕಾಂತ್’ ಶ್ಯಾಮ್ ರಘುನಂದನ್ ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.