ಸರಕಾರಿ ನೌಕರರ ಸಂಘದ ಪದಗ್ರಹಣ ಕಾರ್ಯಕ್ರಮ
ಕೇಂದ್ರ ಸರಕಾರಿ ನೌಕರರ ಸಂಬಳಕ್ಕೆ ಸಮಾನ ವೇತನ ಹೆಚ್ಚಳಕ್ಕೆ ಯತ್ನ – ಸಿ ಎಸ್ ಷಡಕ್ಷರಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರ. ಮಾ. 24.- ರಾಜ್ಯ ಸರ್ಕಾರಿ ನೌಕರರ ವೇತನವನ್ನು ಕೇಂದ್ರ ಸರಕಾರಿ ವೇತನ ಸಮಾನಕ್ಕೆ ಹೆಚ್ಚಿಸಲಾಗುವುದೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರು ಹೇಳಿದರು.
ಅವರು ಪಟ್ಟಣದ ಶಂಕರ್ ರೆಡ್ಡಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ ಸರಕಾರಿ ನೌಕರರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಸಂಘವು ನೌಕರರ ಬೆಂಬಲಕ್ಕೆ ನಿಂತಿದ್ದು ಹಲವಾರು ಬೇಡಿಕೆಗಳನ್ನು ಈಡೇರಿಸುತ್ತ ಬಂದಿದೆ.
ನೌಕರರಿಗೆ ಉಚಿತ ಚಿಕಿತ್ಸಾ ವೇತನ ಹೆಚ್ಚಳ, ಆರೋಗ್ಯ ರಜೆ ಹೆಚ್ಚಳ ಓ ಪಿ ಎಸ್ ಜಾರಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸದಾ ಕಾಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಸ್ಪಂದಿಸಲಿದೆ.
ನಮ್ಮ ರಾಜ್ಯ ಸರ್ಕಾರಿ ನೌಕರರ ವಿವಿಧ ಸಮಸ್ಯೆಗಳಿಗೆ ಹಲವಾರು ರೀತಿಯಲ್ಲಿ ಅವರ ಬೆಂಬಲದೊಂದಿಗೆ ಹೋರಾಟ ಮಾಡಿ ಪ್ರತಿಫಲ ಪಡೆದುಕೊಂಡ ಕಾರಣಕ್ಕಾಗಿ ನನ್ನನ್ನು ಎರಡನೇ ಬಾರಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಮುಂಬರುವ ದಿನಗಳಲ್ಲಿ ನೌಕರರ ಪ್ರತಿಯೊಂದು ಕುಂದು ಕೊರತೆಗಳಿಗೆ ಸದಾ ಕಾಲ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸರಕಾರ ಒಂದು ವೇಳೆ ಸ್ಪಂದಿಸದಿದ್ದರೆ ರಾಜ್ಯಾಧ್ಯಕ್ಷನಾಗಿ ನಾನು ಹೋರಾಟ ಮಾಡುವ ಮೂಲಕವಾದರೂ ರಾಜ್ಯ ಸರ್ಕಾರಿ ನೌಕರರಿಗೆ ನ್ಯಾಯ ಕೊಡಿಸುವೆ ಎಂದು ಅವರು ಭರವಸೆಯನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಮಾನಪ್ಪ ವಜ್ಜಲ್ ಅವರು ಮಾತನಾಡಿ
ರಾಜಕಾರಣಿಗಳ ಅಧಿಕಾರ ಕೇವಲ ಐದು ವರ್ಷ, ಆದರೆ ಅಧಿಕಾರಿಗಳ ಅಧಿಕಾರ 60ವರ್ಷ, ಸೇವೆಯ ಮಧ್ಯೆ ಹುದ್ದೆಗೆ ರಾಜೀನಾಮೆ ನೀಡಿದಾಗ ಅಥವಾ ನಿವೃತ್ತಿ ಹೊಂದಿದ ನಂತರ ಸರಕಾರಿ ಅಧಿಕಾರಿಗಳು ರಾಜಕಾರಣಿಯಾಗಬಹುದು, ಆದರೆ ರಾಜಕಾರಣಿ ಅಧಿಕಾರಿಯಾಗಲು ಸಾಧ್ಯವಿಲ್ಲಾ ಎಂದು ಹೇಳಿದ ಅವರು ರಾಜ್ಯದಲ್ಲಿತನ್ನ ಸಂಘದ ಸದಸ್ಯರ ಹಿತಕ್ಕಾಗಿ ಸದಾಕಾಲ ಹೋರಾಟ ಮಾಡುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಜ್ಯ ಸರ್ಕಾರಿ ನೌಕರರ ಸಂಘ ಮಾತ್ರ, ರಾಜ್ಯದಲ್ಲಿ ಸಿ ಎಸ್ ಷಡಕ್ಷರಿಯವರ ನೇತೃತ್ವದಲ್ಲಿ ಸಂಘ ಬಲಿಷ್ಠ ವಾಗಿದ್ದು ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಷಡಕ್ಷರಿ ಅವರು ಸಮರ್ಥವಾಗಿ ನೌಕರರ ಸಮಸ್ಯೆಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದಾರೆ ನಾಯಕತ್ವದ ಗುಣ ಅವರಲ್ಲಿದೆ.
ಯಾವುದೇ ವ್ಯಕ್ತಿಯಾಗಲಿ ಯಾವುದೇ ಸಂಘಟನೆ ಇರಲಿ ಹೋರಾಟ ಮಾಡದೆ ಹೋದರೆ ನಮಗೆ ಯಾವುದೇ ರೀತಿಯ ನ್ಯಾಯ ಸಿಗಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನ ಹೋರಾಟ ಮಾಡಿದರೂ ಸಹ ಪ್ರತಿಫಲ ದೊರಕದಂತಾಗಿದೆ ತೆಲಂಗಾಣಕ್ಕೆ ನೀರು ಬಿಡುವ ಸರಕಾರ ರೈತರ ಬೆಳೆದ ಬೆಳೆಗಳ ಜಮೀನುಗಳಿಗೆ ನೀರು ಬಿಡುತ್ತಿಲ್ಲ. ಇದು ನಮ್ಮ ರೈತರ ದುರ್ದೈವದ ಸಂಗತಿಯಾಗಿದೆ. ಸರಕಾರ ಇಲ್ಲಿಯವರೆಗೆ ಕೆಕೆಆರ್ಡಿಬಿಯಿಂದ ಸಂಸ್ಕೃತಿಕ ಭವನ ವಾಗಲಿ ಅಥವಾ ಸಮುದಾಯ ಭವನ ನಿರ್ಮಾಣಕ್ಕೆ ಅನುಮತಿ ಕೊಟ್ಟಿಲ್ಲಾ ಆದರೂ ನಾನು ಲಿಂಗಸಗೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಘೋಷಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಹಾಯಕ ಆಯುಕ್ತ ಬಸವಣ್ಣಪ್ಪ ಕಲಶೆಟ್ಟಿ ಮಾತನಾಡಿ ಸರಕಾರಿ ನೌಕರರ ಸೇವೆಯಲ್ಲಿ ಹಿಂದಿನ ಮತ್ತು ಈಗಿನ ಸೇವೆಗೆ ಭಹಳ ವ್ಯತ್ಯಾಸವಿದೆ. ಇಂದು ಸರಕಾರಿ ಅಧಿಕಾರಿಗಳು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ನೌಕರರು ಇರಬೇಕು ಆದರೆ ಬಹಳಷ್ಟು ಕಡಿಮೆ ನೌಕರರು ಇರುವುದರಿಂದ ಇದ್ದ ನೌಕರರು ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರಿ ನೌಕರರ ಸಂಘದ ಪ್ರತಿಯೊಬ್ಬ ಸದಸ್ಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಸಾರ್ವಜನಿಕರ ಹಿತಾಸಕ್ತಿಯಿಂದ ನಾವು ಕೆಲಸ ಮಾಡಬೇಕು ಹಾಗೂ ನಮ್ಮ ಕಾರ್ಯ ಕ್ಷಮತೆಯನ್ನು ಅರಿತು ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಹಾಜಿಬಾಬು ಕಲ್ಯಾಣಿ ವಹಿಸಿ ಮಾತನಾಡಿಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ಪಾಮಯ್ಯ ಮುರಾರಿ, ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಅಮರೇಶಪ್ಪ ಹೂನೂರು ಡಾ,ಭೀಮಣ್ಣ ನಾಯಕ್, ಬಿಜೆಇ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ,ಹುಲ್ಲೇಶ ಸಾಹುಕಾರ,ಗುಂಡಪ್ಪನಾಯಕ,ಡಿ ಜಿ ಗುರಿಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರಂಗನಾಥ್ ದೇಸಾಯಿ, ಉಪತಾಹಸಿಲ್ದಾರ್ ಬಸವರಾಜ್ ಜಳಕಿಮಠ್, ಮಲ್ಲಿಕಾರ್ಜುನ್ ಬಳ್ಳಾರಿ ಗದ್ಯಪ್ಪ ಸಿದ್ದಾಪುರ, ತಾಲೂಕ ಎನ್ ಪಿ ಎಸ್ ನೌಕರ ಸಂಘದ ಅಧ್ಯಕ್ಷರಾದ ಸಣ್ಣಮಾಬುಸಾಬ್,ತಾಲೂಕ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವೀರನಗೌಡ, ಸಮಾಜ ಕಲ್ಯಾಣ ಅಧಿಕಾರಿ ರವೀಂದ್ರ ಉಪ್ಪಾರ್, ಹಿಂದುಳಿದ ವರ್ಗದ ಅಧಿಕಾರ ರಮೇಶ್ ರಾಥೋಡ್, ಅಬಕಾರಿ ಇಲಾಖೆಯ ಲಕ್ಷ್ಮಿದೇವಿ, ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಆಗಮಿಸಿದ ಸರಕಾರಿ ನೌಕರರು, ಹಾಗೂ ಪದಾಧಿಕಾರಿಗಳು ಹಾಗೂ ನಿವೃತ್ತಿ ಹೊಂದಿದ ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಐದು ಜನ ಪ್ರಗತಿಪರ ರೈತರಿಗೆ ಹಾಗೂ ಸೇನೆಯಲ್ಲಿ ಸೇವೆ ಸೇವಿಸಲ್ಲಿಸಿ ನಿವೃತ್ತಿ ಹೊಂದಿದ20ಕ್ಕೂ ಹೆಚ್ಚು ಯೋಧರಿಗೆ ಸನ್ಮಾನಿಸಲಾಯಿತು.