ನಕಲಿನೋಟು ಚಲಾವಣೆ ಶಂಕೆ,ಪೂಜಾರಿಯನ್ನು ಕರೆದೊಯ್ದು ವಿಚಾರಣೆ..!!?
ಮಾಟ ಮಂತ್ರದ ಹೆಸರಿನಲ್ಲಿ ಅಮಾಕರಿಗೆ ವಂಚಿಸುತ್ತಿದ್ದ ಪೂಜಾರಿ!!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಕಲಬುರಗಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಎನ್ನುವ ಶಂಕೆಯ ಮೇಲೆ ಜನರಿಗೆ ಮಾಟ ಮಂತ್ರ ಎಂದು ಹೇಳಿ ವಂಛಿಸುತ್ತಿದ್ದ ವ್ಯಕ್ತಿಯನ್ನು ಇನ್ನೋವಾ ಕಾರಿನಲ್ಲಿ ಕರೆದೊಯ್ಯದಿರುವುದಾಗಿ ತಿಳಿದು ಬಂದಿದೆ
ಪಟ್ಟಣದ ಕಲಬುರ್ಗಿ ರಸ್ತೆಯಲಿರುವ ೭ನೇ ವಾರ್ಡಿನ ಜನತಾಕಾಲೋನಿಯ ಮನೆಯೊಂದರಲ್ಲಿ ವಾಸವಾಗಿದ್ದು ಜನರಿಗೆ ಮಾಟ ಮಂತ್ರ ಮಾಡುವುದಾಗಿ ಜನರನ್ನು ನಂಬಿಸುತ್ತಾ ಅವರಿಂದ ದೊಡ್ಡ ಪ್ರಮಾಣದಲ್ಲಿ ಹಣ ಪಡೆಯುತಿದ್ದ ಎನ್ನಲಾಗುತ್ತಿದ್ದು ಮಹಿಳೆಯರಿಗೆ ಪುಸಲಾಯಿಸಿ ನಿಮಗೆ ಮಾಟಮಾಡಲಾಗಿದೆ ಹಾಗೆ ಹೀಗೆ ಹೇಳುತ್ತಾ ಮರ್ಮಾಂಗದಲ್ಲಿ ಲಿಂಬೆಹಣ್ಣು ಇಟ್ಟುಕೊಳ್ಳಬೇಕು ಸೀತಾಫಲ ಎಲೆ ಇಟ್ಟುಕೊಬೇಕು ಎಂದೆಲ್ಲ ಹೇಳಿ ನಂಬಿಸುತ್ತಿದ್ದ ಎನ್ನುವ ಆರೋಪಗಳು ಕೇಳಿಬರುತ್ತಿವೆ ದೇವರು ಬರುತ್ತಾನೆ ನಾನು ಹೇಳಿದ್ದೆಲ್ಲ ಆಗುತ್ತದೆ ಎಂದು ಜನರನ್ನು ನಂಬಿಸುತ್ತಿದ್ದ ಅದಕ್ಕಾಗಿ ಈತನ ಹತ್ತಿರ ಜನ ಬರುತ್ತಿದ್ದರು ಇದು ಒಂದು ಕಡೆಯಾದರೆ
ಇನ್ನೋವಾ ಕಾರಿನಲ್ಲಿ ಕರೆದೊಯ್ದರು: ಸದರಿ ಪೂಜಾರಿಯನ್ನು ಡಿ೨೯ರಂದು ರವಿವಾರ ಬೆಳಗ್ಗೆ ೧೧ ಗಂಟೆ ಸುಮಾರಿಗೆ ನಂಬರಪ್ಲೇಟ್ ಇಲ್ಲದ ಇನ್ನೋವಾ ಕಾರ್ ಈತನ ಮನೆಯ ಹತ್ತಿರ ಬಂದು ನಕಲಿನೋಟು ಸಹಿತವಾಗಿ ಫೊಟೊ ತೆಗೆದುಕೊಂಡು ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋದರೆಂದು ಹೇಳಲಾಗುತ್ತಿದ್ದು ಸದರಿ ಕಾರಿಗೆ ನಂಬರಪ್ಲೇಟ್ ಇರಲಿಲ್ಲವಂತೆ ಬಂದವರು ಈತನ ಮನೆಯಲ್ಲಿರುವ ನಕಲಿನೋಟು ಕೈಯಲ್ಲಿ ಕೊಟ್ಟು ಫೋಟೊ ತೆಗೆದುಕೊಂಡರೆAದು ಹೇಳಲಾಗುತ್ತಿದೆ ಹಾಗಾದರೆ ಕರೆದುಕೊಂಡು ಹೋದವರು ಯಾರು?
ಕೆಲವರು ಹೇಳುವ ಪ್ರಕಾರ ಪೊಲೀಸ್ ರು ಕರೆದುಕೊಂಡು ಹೋಗಿದ್ದಾರೆಂದು ಹೇಳಲಾಗುತ್ತಿದೆ ಪೊಲೀಸ್ ಬಂದಿದ್ದರೆ ನಂಬರ ಪ್ಲೇಟ್ ಇಲ್ಲದೆ ವಾಹನ ಯಾಕೆ ಬಳಕೆ ಮಾಡಿಕೊಳ್ಳುತ್ತಿದ್ದರು ಇನ್ನು ವಿಜಯಪುರದವರು ಎನ್ನಲಾಗುತ್ತಿದೆ ಹಾಗಾದರೆ ಬೇರೆ ವ್ಯಕ್ತಿಗಳು ಬಂದು ಈತನನ್ನು ಕರೆದುಕೊಂಡು ಹೋಗಿದ್ದಾರೆಯೆ ನಕಲಿ ನೋಟಿನ ವ್ಯವಹಾರದಲ್ಲಿ ಏನಾದರು ವ್ಯತ್ಯಾಸಗಳಾಗಿ ಕರೆದುಕೊಂಡು ಹೋಗಿದ್ದಾರೆಯೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಪಟ್ಟಣದ ಅಂಗಡಿಯೊAದರಲ್ಲಿ ನಕಲಿನೋಟು ಚಲಾವಣೆ ಮಾಡಿದ್ದ ಪೂಜಾರಿ:ಸದರಿ ಪೂಜಾರಿಯು ಕೆಲದಿನಗಳ ಹಿಂದೆ ಕಲಬುರ್ಗಿ ರಸ್ತೆಯಲಿರುವ ಡಬ್ಬಾ ಅಂಗಡಿಯೊAದರಲ್ಲಿ ನಕಲಿನೋಟು ಚಲಾವಣೆ ಮಾಡಿರುವುದಾಗಿ ತಿಳಿದುಬಂದಿದ್ದು ಅಂಗಡಿಯ ಮಾಲೀಕ ವಿಷಯವನ್ನು ನಿರ್ಲಕ್ಷ ಮಾಡಿದ್ದ ಎನ್ನಲಾಗುತ್ತಿದೆ
ಅಲ್ಲದೆ ಸದರಿ ಪುಜಾರಿಗೆ ನಿಧಿ ಅಗಿಯುವವರ ನಂಟು ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಏನೇ ಆಗಲಿ ಹಲವಾರು ಅಕ್ರಮಚಟುವಟಿಕೆಯಲ್ಲಿ ಈತನ ಹೆಸರು ಕೇಳಿಬರುತ್ತಿದ್ದು ಈತನನ್ನು ಸದ್ಯ ಎತ್ತಿಹಾಕಿಕೊಂಡು ಹೋದವರು ಯಾರು ಎನ್ನುವುದು ಒಂದುಕಡೆಯಾದರೆ ಈತನಲ್ಲಿಗೆ ಬರುವವರೆ ಸ್ವಲ್ಪ ಹುಷಾರು ಎನ್ನಬೇಕಾಗಿದೆ ಅಷ್ಟೇ?
ಹೇಳಿಕೆ:ಪಟ್ಟಣದಲ್ಲಿ ವ್ಯಕ್ತಿಯೋರ್ವನನ್ನು ಕರೆದೊಯ್ದ ಬಗೆಗೆ ನಮಗೆ ಯಾವುದೆ ಮಾಹಿತಿ ಇಲ್ಲ ಒಂದೊಮ್ಮೆ ಕ್ರೆöÊಂ ಪೊಲೀಸ್ ಬಂದರು ನಮಗೆ ಮಾಹಿತಿ ನೀಡದೆ ಕರೆದುಕೊಂಡುಹೋಗಬಹುದು ಅದು ನಮ್ಮ ಗಮನಕ್ಕೆ ಬರುವುದಿಲ್ಲಸದರಿ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ -ಪಿಐ ಪುಂಡಲಿಕ್ ಪಟತ್ತರ