ಬಡವರ ವೈದ್ಯರೆಂದೆ ಖ್ಯಾತಿ ಪಡೆದ ಡಾ.ಅಯ್ಯಪ್ಪ ಬನ್ನಿಗೋಳ ನಿಧನ ಸಂತಾಪ
ಕಲ್ಯಾಣ ಕರ್ನಾಟಕ ವಾರ್ತೆ
ಮುದಗಲ್: ಪಟ್ಟಣದ ಬಡವರ ವೈದ್ಯರೆಂದೆ ಕರೆಯಲಾಗುತಿದ್ದ ಡಾ ಅಯ್ಯಪ್ಪ ಬನ್ನಿಗೊಳ ಗುರುವಾರ ನಿಧನರಾಗಿದ್ದು ಅವರ ಒಡನಾಡಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ
ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆತು ಅಜಾತಶತೃವಾಗಿ ಜೀವನ ನಡೆಸಿದ ಡಾ ಅಯ್ಯಪ್ಪ ಬಡವರ ವೈದ್ಯರೆಂದೆ ಖ್ಯಾತಿಯಾಗಿದ್ದರು ಬಡರೋಗಿಗಳ ಸೇವೆ ಮಾಡುತ್ತಾ ತಮ್ಮನ್ನು ರಾಜಕೀಯದಲ್ಲಿಯು ಗುರುತಿಸಿಕೊಂಡಿದ್ದರು ಲಿಂಗಸುಗೂರು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಅಯ್ಯಪ್ಪ ಬನ್ನಿಗೋಳ (65) ಅವರು ಹೃದಯ ಅಫಘಾತದಿಂದ ಗುರುವಾರ ನಿಧನ ಹೊಂದಿದರು.
ಇವರಿಗೆ ಬುಧವಾರ ಹೃದಯ ಅಫಘಾತ ಕಾಣಿಸಿಕೊಂಡಿತು. ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರಿಗೆ ಹೆಂಡತಿ ಹೇಮವತಿ, ಮಗಳು ಸುಜಾತಾ ಇದ್ದಾರೆ. ಅಂತ್ಯಕ್ರಿಯೆ
ಮುದಗಲ್ ದಲ್ಲಿರುವ ಅವರ ಸ್ವಂತ ಜಮೀನುನಲ್ಲಿ ಇಂದು ನಡೆಯುತ್ತಿದೆ.