ಬಾಲಕಾರ್ಮಿಕ ಪದ್ದತಿ ಅನಿಷ್ಟ ಪದ್ದತಿಯಾಗಿದೆ-ಉಂಡಿ ಮಂಜುಳಾ

Laxman Bariker
ಬಾಲಕಾರ್ಮಿಕ ಪದ್ದತಿ ಅನಿಷ್ಟ ಪದ್ದತಿಯಾಗಿದೆ-ಉಂಡಿ ಮಂಜುಳಾ
WhatsApp Group Join Now
Telegram Group Join Now

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ:
ಬಾಲಕಾರ್ಮಿಕ ಪದ್ದತಿ ಅನಿಷ್ಟ ಪದ್ದತಿಯಾಗಿದೆ-ಉಂಡಿ ಮಂಜುಳಾ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಬಾಲಕಾರ್ಮಿಕ ಪದ್ದತಿಯಿಂದ ಬೆಳೆಯುವ ಮಕ್ಕಳ ಹಕ್ಕುಗಳನ್ನು ಕಸಿದು ಅವರ ಬಾಲ್ಯದ ಆನಂದವನ್ನು ಮೊಟಕುಗೊಳಿಸಿದಂತಾಗುತ್ತಿದ್ದು ಇದೊಂದು ಅನಿಷ್ಟ ಪದ್ದತಿಯಾಗಿದ್ದು ಇದನ್ನು ಹೋಗಲಾಡಿಸಲು ಶ್ರಮಿಸಬೇಕಾಗಿದೆ ಎಂದು ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶಕರಾದ ಉಂಡಿ ಮಂಜುಳಾ ಶಿವಪ್ಪನವರು ಮಾತನಾಡಿದರು

ಅವರು ಪಟ್ಟಣದ ಸರಕಾರಿ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ನ್ಯಾವಾದಿಗಳ ಸಂಘ, ತಾಲೂಕಾ ಆಡಳಿತ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬಾಲಕಾರ್ಮಿಕ ಪದ್ದತಿಗೆ ಮುಖ್ಯ ಕಾರಣ ಬಡತನವಾಗಿದೆ ಅದಕ್ಕಾಗಿಯೆ ಅಪ್ರಾಪ್ತ ಮಕ್ಕಳನ್ನು ದುಡಿಯಲು ಕಳಿಸುತ್ತಾರೆ ಇದೊಂದು ಅಪರಾಧವಾಗಿದ್ದು ಮಕ್ಕಳ ಹಕ್ಕುಗಳನ್ನು ಕಸಿಯುವ ಕೆಲಸವಾಗುತ್ತದೆ ಸಂವಿಧಾನದ ನಿಯಮದಂತೆ ಎಲ್ಲರೂ ಸಮಾನರು ಎಲ್ಲ ಮಗು ಬಾಲ್ಯವನ್ನು ಶಿಕ್ಷಣ ಕಲಿಕೆಯಲ್ಲಿ ತೊಡಗಬೇಕು ಆದರೆ ಬಾಲ್ಯದಲ್ಲಿಯೆ ದುಡಿತಕ್ಕೆ ಕಳಿಸಲಾಗುತ್ತದೆ ಇದು ಶಿಕ್ಷಾರ್ಹ ಎಂಬುದನ್ನು ಪಾಲಕರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ
ಭಾರತ ದೇಶವು ಮುಂದುವರೆಯುತ್ತಿರುವ ದೇಶವಾಗಿದ್ದು ಇದೀಗ ದೇಶದಲ್ಲಿ ಬಾಲಕಾರ್ಮಿಕ ಪದ್ದತಿ ಕಡಿಮೆಯಾಗುತ್ತಾ ಸಾಗಿದೆ ಇದೀಗ ೧೧೩ರ ಸ್ಥಾನದಲ್ಲಿ ಭಾರತವಿದೆ ಇಳಿಮುಖವಾಗುತ್ತಿರುವುದು ಸಮಾಧಾನಕರ ವಿಷಯವಾಗಿದೆ ಗುಳೆಹೋಗುವವರ ಸಂಖ್ಯೆಯು ಈ ಭಾಗದಲ್ಲಿ ಹೆಚ್ಚಾಗಿದ್ದು ಅಂತಹ ಮಕ್ಕಳಿಗೆ ಕಲಿಯಲು ಸರಕಾರವೇ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತದೆ ಮತ್ತು ಮನೆಯಲ್ಲಿ ಸಾಕುವಂತಹ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಅದಕ್ಕಾಗಿ ಬಾಲಕಾರ್ಮಿಕ ಪದ್ದತಿ ತಡೆಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು
ನAತರ ಸಹಾಯಕ ಆಯುಕ್ತರಾದ ಶಿಂಧೆ ಅವಿನಾಶರವರು ಮಾತನಾಡುತ್ತಾ ಇದು ಬಾಲಕಾರ್ಮಿಕ ದಿನಾಚರಣೆ ಅಲ್ಲ ಬಾಲಕಾರ್ಮೀಕ ವಿರೋಧಿ ದಿನಾಚರಣೆಯಾಗಿದ್ದು ಅಂತಹ ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಮಾಡಲು ಸರಕಾರ ಹಾಗೂ ಸಮಾಜ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು
ಮಕ್ಕಳಿಂದ ಪಟ್ಟಣದಲ್ಲಿ ಜಾಥಾ ನಡೆಸಲಾಯಿತು
ಈ ಸಂದರ್ಭದಲ್ಲಿ ಅಂಬಣ್ಣ ಕೆ ಪ್ರಧಾನ ಸಿವಿಲ್ ನ್ಯಾಯಾಧೀಶರು ವಕೀಲರ ಸಂಘದ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ತಹಸೀಲ್ದಾರ ಡಾ ಮಲ್ಲಪ್ಪ ಯರಗೋಳ, ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ, ಕಾರ್ಮಿಕ ಇಲಾಖೆಯ ಶಾಂತಮೂರ್ತಿ, ಮುಖ್ಯಾಧಿಕಾರಿ ದುರ್ಗಪ್ಪ ಪ್ರಾಚಾರ್ಯ ಮುರುಗೇಶಪ್ಪ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article